ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶದ ಮೊದಲ ಕೋವಿಡ್-19 ಹೋಮ್ ಟೆಸ್ಟ್ ಕಿಟ್: 10 ನಿಮಿಷದಲ್ಲೇ ಫಲಿತಾಂಶ!

Last Updated 4 ಏಪ್ರಿಲ್ 2020, 9:04 IST
ಅಕ್ಷರ ಗಾತ್ರ
ADVERTISEMENT
""

ಬೆಂಗಳೂರು: ಮನೆಯಲ್ಲೇ ಕೂತು ಕೋವಿಡ್-19 ಪರೀಕ್ಷೆ ಮಾಡಿಕೊಳ್ಳುವ ದೇಶದ ಮೊದಲ ಟೆಸ್ಟಿಂಗ್ ಕಿಟ್‌ನ್ನು ಬಯೋಟೆಕ್ ಸಂಸ್ಥೆಯಾದ ಬಯೋನ್ (Bione) ಅಭಿವೃದ್ಧಿ ಪಡಿಸಿದ್ದು, ಮಾರುಕಟ್ಟೆಗೆ ಬಿಡುಗಡೆಯಾಗಿದೆ. ಕೊರೊನಾ ವೈರಸ್ ಪರೀಕ್ಷೆ ಮಾಡುವ ಸೌಲಭ್ಯಗಳು ಪ್ರಸ್ತುತ ಕಡಿಮೆ ಇರುವುದರಿಂದ ಜಗತ್ತಿನಾದ್ಯಂತ ಇಂಥ ಈ ನೂತನ ಟೆಸ್ಟಿಂಗ್ ಕಿಟ್‌ಗಳಿಗೆ ಬೇಡಿಕೆಯಿದೆ.

ಕೊರೊನಾ ಸೋಂಕು ಪರೀಕ್ಷೆ ಮಾಡಿಸಿಕೊಳ್ಳಲು ಹೊರಗೆ ಹೋಗುವ ಅಗತ್ಯ ಇದರಿಂದ ತಪ್ಪಲಿದೆ. ತಾವೇ ಮನೆಯಲ್ಲಿಈ ಸಾಧನದ ಸಹಾಯದಿಂದ ಪರೀಕ್ಷೆ ಮಾಡಿಕೊಳ್ಳಬಹುದಾಗಿದೆ. ಒಂದು ವೇಳೆ ಪರೀಕ್ಷೆಯಲ್ಲಿ ಪಾಸಿಟಿವ್ ಎಂದು ಗೊತ್ತಾದರೆ, ಮನೆಯ ಸದಸ್ಯರಿಂದ ಅಂತರ ಕಾಯ್ದುಗೊಂಡು ಕೊರೊನಾ ಸಹಾಯವಾಣಿಗೆ ಮಾಹಿತಿ ನೀಡಬೇಕಾಗುತ್ತದೆ. ಇದರಿಂದಾಗಿ ಸೋಂಕು ಮತ್ತಷ್ಟು ಜನರಿಗೆ ಹರಡುವುದನ್ನು ತಡೆಯಬಹುದಾಗಿದೆ. ಈ ಟೆಸ್ಟ್ ಕಿಟ್‌ಗೆ ₹2,000 ದಿಂದ ₹3,000 ನಿಗದಿ ಪಡಿಸಲಾಗಿದೆ.

ಸಂಸ್ಥೆಯ ಅಧಿಕೃತ ವೆಬ್‌ಸೈಟ್‌ (bione.in) ಮೂಲಕಈ ಸಾಧನವನ್ನು ಖರೀದಿಸಬಹುದಾಗಿದೆ. ಆರ್ಡರ್ ಮಾಡಿದ 2-3 ದಿನಗಳ ಒಳಗೆ ಈ ಟೆಸ್ಟಿಂಗ್ ಕಿಟ್ ಗ್ರಾಹಕರಿಗೆ ತಲುಪಲಿದೆ.

'ಕೋವಿಡ್-19ವಿರುದ್ಧ ಹೋರಾಡಲು ಭಾರತಕ್ಕೆ ಸಹಾಯ ಮಾಡಲು ಇದರ ಅಭಿವೃದ್ಧಿ. ಕೊರೊನಾ ವೈರಸ್ ವಿರುದ್ಧ ಕ್ರಾಂತಿಯನ್ನು ಮುನ್ನಡೆಸುವಲ್ಲಿ ಸರ್ಕಾರದ ಬೆಂಬಲ ಪ್ರಮುಖವಾದುದು ಎಂದು ನಾವು ಬಲವಾಗಿ ನಂಬುತ್ತೇವೆ' ಎಂದು ಬಯೋನ್ ಸಂಸ್ಥೆಯ ಸಿಇಒ ಡಾ.ಸುರೇಂದ್ರ ಚಿಕಾರಾ ಹೇಳಿದ್ದಾರೆ.

ಕೋವಿಡ್-19 ಸ್ಕ್ರೀನಿಂಗ್ ಟೆಸ್ಟ್ ಕಿಟ್ IgG ಮತ್ತು IgM ಆಧಾರಿತ ಸಾಧನವಾಗಿದ್ದು, 5-10 ನಿಮಿಷದಲ್ಲಿ ಫಲಿತಾಂಶ ದೊರೆಯುತ್ತದೆ. ಕಿಟ್ ಸ್ವೀಕರಿಸಿದ ನಂತರ ಬಳಕೆದಾರರು ತಮ್ಮ ಬೆರಳನ್ನು ಆಲ್ಕೋಹಾಲ್ ಸ್ವ್ಯಾಬ್‌ನಿಂದ ಸ್ವಚ್ಚಗೊಳಿಸಬೇಕು ಮತ್ತು ಬೆರಳು ಚುಚ್ಚುವಿಕೆಗೆ ಒದಗಿಸಲಾದ ಲ್ಯಾನ್ಸೆಟ್ ಅನ್ನು ಬಳಸಬೇಕಾಗುತ್ತದೆ. ಹೀಗೆ ಪಡೆದ ರಕ್ತದ ಮಾದರಿಯ ಫಲಿತಾಂಶವುಕಾರ್ಟ್ರಿಡ್ಜ್ 5-10 ನಿಮಿಷದಲ್ಲಿ ತಿಳಿಸುತ್ತದೆ.

ಎಲ್ಲ ಗುಣಮಟ್ಟದ ಪರೀಕ್ಷೆಗಳ ನಂತರವೇ ಈ ಸಾಧವನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಲಾಗಿದ್ದು, ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯಿಂದ (ಐಸಿಎಂಆರ್) ಅನುಮೋದನೆ ದೊರೆತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT