ಗುರುವಾರ, 12 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ISRO | 'ಇಒಎಸ್-08' ಕಿರು ಉಪಗ್ರಹ ಉಡ್ಡಯನಕ್ಕೆ ಕ್ಷಣಗಣನೆ

Published 16 ಆಗಸ್ಟ್ 2024, 2:37 IST
Last Updated 16 ಆಗಸ್ಟ್ 2024, 2:37 IST
ಅಕ್ಷರ ಗಾತ್ರ

ಬೆಂಗಳೂರು: ಭೂವೀಕ್ಷಣಾ ಕಿರು ಉಪಗ್ರಹ 'ಇಒಎಸ್-08' ಉಡ್ಡಯನಕ್ಕೆ ಕ್ಷಣಗಣನೆ ಆರಂಭವಾಗಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ತಿಳಿಸಿದೆ.

ನ್ಯೂಸ್ಪೇಸ್ ಇಂಡಿಯಾ ಲಿಮಿಟೆಡ್ ಅಭಿವೃದ್ಧಿ ಮಾಡಿರುವ ಎಸ್‌ಎಲ್‌ಎಲ್‌ವಿ-ಡಿ3 ರಾಕೆಟ್ ಮೂಲಕ ಈ ಪುಟ್ಟ ಉಪಗ್ರಹವನ್ನು ಇಂದು ಬೆಳಿಗ್ಗೆ 9.17ಕ್ಕೆ ಉಡ್ಡಯನ ಮಾಡಲಿದೆ.

'ಎಸ್‌ಎಸ್‌ಎಲ್‌ವಿ-ಡಿ3-ಇಎಎಸ್-08' ಮಿಷನ್‌ನ ಆರೂವರೆ ಗಂಟೆಗಳ ಕೌಂಟ್‌ಡೌನ್ ತಡರಾತ್ರಿ 2.47ಕ್ಕೆ ಆರಂಭವಾಯಿತು ಎಂದು ಇಸ್ರೊ ತಿಳಿಸಿದೆ.

ಫೆಬ್ರುವರಿಯಲ್ಲಿ ಎಸ್‌ಎಸ್‌ಎಲ್‌ವಿ-ಡಿ2 ಮೂಲಕ ಇಸ್ರೊ ತನ್ನ ಭೂ ವೀಕ್ಷಣಾ ಉಪಗ್ರಹವಾದ ಇಒಎಸ್-07 ಅನ್ನು ಯಶಸ್ವಿಯಾಗಿ ಕಕ್ಷೆಗೆ ಸೇರಿಸಿತ್ತು. ಈಗ ಎರಡನೇ ಪರೀಕ್ಷಾರ್ಥ ಹಾರಾಟ ಇದಾಗಿದೆ.

ಸುಮಾರು 34 ಮೀಟರ್ ಎತ್ತರವಿರುವ ಕಿರು ಎಸ್‌ಎಸ್‌ಎಲ್‌ವಿ ರಾಕೆಟ್ ಅನ್ನು ಸ್ವಾತಂತ್ರ್ಯ ದಿನಾಚರಣೆಯಂದು (ಆಗಸ್ಟ್ 15) ಬೆಳಿಗ್ಗೆ 9.17ಕ್ಕೆ ಶ್ರೀಹರಿಕೋಟದಿಂದ ಉಡ್ಡಯನ ಮಾಡಲು ಯೋಜಿಸಲಾಗಿತ್ತು. ಬಳಿಕ ಆಗಸ್ಟ್ 16 ಬೆಳಿಗ್ಗೆ 9.17ಕ್ಕೆ ಮುಂದೂಡಲಾಗಿತ್ತು.

ಇಒಎಸ್-08 ಅತ್ಯಾಧುನಿಕ ತಂತ್ರಜ್ಞಾನವನ್ನು ಹೊಂದಿರಲಿದ್ದು, ಮೈಕ್ರೊಸ್ಯಾಟಲೈಟ್‌ನ ವಿನ್ಯಾಸ ಹಾಗೂ ಅಭಿವೃದ್ಧಿ ಮತ್ತು ಭವಿಷ್ಯದ ಉಪಗ್ರಹಗಳ ಕಾರ್ಯಾಚರಣೆಯನ್ನು ಗಮನದಲ್ಲಿಟ್ಟುಕೊಂಡು ಅಭಿವೃದ್ಧಿಪಡಿಸಲಾಗಿದೆ. 175.5 ಕೆ.ಜಿ ತೂಕದ ಉಪಗ್ರಹವು ಮೂರು ಪೇಲೊಡ್‌ಗಳನ್ನು ಒಳಗೊಂಡಿದೆ.

ಪ್ರಸಕ್ತ ಸಾಲಿನಲ್ಲಿ ಬೆಂಗಳೂರಿನ ಬಾಹ್ಯಾಕಾಶ ಕೇಂದ್ರದಿಂದ ನಿರ್ವಹಿಸಲಾಗುತ್ತಿರುವ ಮೂರನೇ ಮಿಷನ್ ಇದಾಗಿದೆ. ಜನವರಿಯಲ್ಲಿ PSLV-C58/XpoSat ಮತ್ತು ಫೆಬ್ರುವರಿಯಲ್ಲಿ GSLV-F14/INSAT-3DS ನಿರ್ವಹಿಸಲಾಗಿತ್ತು.

ಎಸ್‌ಎಸ್‌ಎಲ್‌ವಿ ಮೂರು ಹಂತಗಳ, ಕಡಿಮೆ ವೆಚ್ಚದ ಉಡ್ಡಯನ ವಾಹನವಾಗಿದ್ದು, ಸುಮಾರು 500 ಕೆ.ಜಿ ತೂಕದವರೆಗಿನ ಉಪಗ್ರಹಗಳನ್ನು ಹೊತ್ತೊಯ್ಯುವ ಸಾಮರ್ಥ್ಯವನ್ನು ಹೊಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT