ಶ್ರೀಹರಿಕೋಟಾ: ವಾಹನಗಳ ಸಂಚಾರಕ್ಕೆ ಅಗತ್ಯವಿರುವ ಮಾಹಿತಿ ಒದಗಿಸುವ ಉದ್ದೇಶದ ‘ನ್ಯಾವಿಗೇಷನ್ ಉಪಗ್ರಹ’ ಉಡ್ಡಯನಕ್ಕೆ ಕ್ಷಣಗಣನೆ ಮಂಗಳವಾರ ಆರಂಭವಾಯಿತು. ಇದು, ಇಸ್ರೊದ ಐತಿಹಾಸಿಕ 100ನೇ ಉಡ್ಡಯನ ಕಾರ್ಯಕ್ರಮವೂ ಆಗಿದೆ.

ದೇಶೀಯವಾಗಿಯೇ ಅಭಿವೃದ್ಧಿಪಡಿಸಲಾಗಿರುವ ಕ್ರಯೊಜನಿಕ್ ತಂತ್ರಜ್ಞಾನ ಆಧಾರಿತ ರಾಕೆಟ್ ‘ಜಿಎಸ್ಎಲ್ವಿ ಎಫ್–15’, ನ್ಯಾವಿಗೇಷನ್ ಉಪಗ್ರಹ ‘ಎನ್ವಿಎಸ್–02’ಅನ್ನು ಹೊತ್ತು ಜ.29ರ ಬೆಳಿಗ್ಗೆ 6.23ಕ್ಕೆ ನಭಕ್ಕೆ ಚಿಮ್ಮಲಿದೆ.

‘27.30 ಗಂಟೆಗಳ ಕ್ಷಣಗಣನೆ ಮಂಗಳವಾರ ನಸುಕಿನ 2.53ಕ್ಕೆ ಆರಂಭವಾಯಿತು’ ಎಂದು ಮೂಲಗಳು ತಿಳಿಸಿವೆ.

ಇಸ್ರೊ ಅಧ್ಯಕ್ಷರಾಗಿ ಅಧಿಕಾರವಹಿಸಿಕೊಂಡಿರುವ ವಿ.ನಾರಾಯಣನ್ ಅವರಿಗೂ ಈ ಉಡ್ಡಯನವು ಮೊದಲ ಬಾಹ್ಯಾಕಾಶ ಕಾರ್ಯಕ್ರಮವಾಗಿದೆ.

‘ನಾವಿಕ್’ (ನ್ಯಾವಿಗೇಷನ್ ವಿತ್ ಇಂಡಿಯನ್ ಕಾನ್ಸ್ಸ್ಟಲೇಷನ್) ಸರಣಿಯ ಎರಡನೇ ಉಪಗ್ರಹ ಇದಾಗಿದೆ. ಭಾರತ ಉಪಖಂಡ ಹಾಗೂ ಇದಕ್ಕೆ ಹೊಂದಿಕೊಂಡಿರುವ ಭೌಗೋಳಿಕ ಪ್ರದೇಶದ ಪೈಕಿ 1,500 ಕಿ.ಮೀ. ವ್ಯಾಪ್ತಿಯಲ್ಲಿನ ವಾಹನಗಳ ಸ್ಥಾನ, ವೇಗ ಹಾಗೂ ಸಮಯ ಕುರಿತು ನಿಖರ ಮಾಹಿತಿಯನ್ನು ಈ ಉಪಗ್ರಹ ಒದಗಿಸಲಿದೆ.

ಈ ಸರಣಿಯ ಮೊದಲ ಉಪಗ್ರಹವನ್ನು (ಎನ್ವಿಎಸ್–01) 2023ರ ಮೇ 29ರಂದು ಉಡ್ಡಯನ ಮಾಡಲಾಗಿತ್ತು.

ಪ್ರಯೋಜನ

ಭೂ ಮತ್ತು ವಾಯುಪ್ರದೇಶ ಹಾಗೂ ಕಡಲ ಯಾನಕ್ಕೆ ಸಂಬಂಧಿಸಿದ ಮಾಹಿತಿ ತಿಳಿಯಲು

ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿ ನಿಖರ ಮಾಹಿತಿ ಒದಗಿಸಲು

ಮೊಬೈಲ್ ಸಾಧನಗಳಲ್ಲಿ ಲೊಕೇಷನ್ ಆಧಾರಿತ ಸೇವೆಗಳನ್ನು ಪಡೆಯಲು

ಉಪಗ್ರಹಗಳು ಯಾವ ಕಕ್ಷೆಯಲ್ಲಿ ಪರಿಭ್ರಮಿಸುತ್ತಿವೆ ಎಂಬುದನ್ನು ತಿಳಿಯಲು

ಇಂಟರ್ನೆಟ್ ಆಫ್ ಥಿಂಗ್ಸ್ (ಐಒಟಿ) ಆಧಾರಿತ ಸೇವೆಗಳಿಗೆ

.ಜನವರಿಯಲ್ಲಿ GSLV ಯೋಜನೆ; ಶ್ರೀಹರಿಕೋಟಾದಿಂದ ಚಾರಿತ್ರಿಕ 100ನೇ ಉಡಾವಣೆ: ಸೋಮನಾಥ್.ಚಂದ್ರಯಾನ-4, ಗಗನಯಾನ..ಇಸ್ರೊ ಮಹತ್ವದ ಯೋಜನೆಗಳ ಕುರಿತು ಮಾಹಿತಿ ನೀಡಿದ ನಾರಾಯಣನ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.