ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಂದ್ರನ ಅನ್ವೇಷಣೆಯ ಲ್ಯಾಂಡರ್‌ ಹೊತ್ತ ಜಪಾನ್‌ ರಾಕೆಟ್ ಉಡ್ಡಯನ: ಇಸ್ರೊ ಶ್ಲಾಘನೆ

Published 7 ಸೆಪ್ಟೆಂಬರ್ 2023, 7:57 IST
Last Updated 7 ಸೆಪ್ಟೆಂಬರ್ 2023, 7:57 IST
ಅಕ್ಷರ ಗಾತ್ರ

ಟೋಕಿಯೊ: ಚಂದ್ರನ ಅನ್ವೇಷಣೆಗಾಗಿ ಸ್ಮಾರ್ಟ್ ಲ್ಯಾಂಡರ್‌ ಹೊತ್ತ ರಾಕೆಟ್‌ ಅನ್ನು ಜಪಾನ್‌ ಬಾಹ್ಯಾಕಾಶ ಶೋಧನಾ ಏಜೆನ್ಸಿ (JAXA)ಯು ಗುರುವಾರ ಯಶಸ್ವಿಯಾಗಿ ಉಡ್ಡಯನಗೊಳಿಸಿದೆ.

ಈ ಲ್ಯಾಂಡರ್ ಮುಂದಿನ ವರ್ಷ ಫೆಬ್ರುವರಿಯಲ್ಲಿ ಚಂದ್ರನ ಅಂಗಳದಲ್ಲಿ ಇಳಿಯಲಿದೆ. ಜಪಾನ್‌ನ ಈ ಬಾಹ್ಯಾಕಾಶ ಯೋಜನೆ ಯಶಸ್ವಿಯಾದಲ್ಲಿ ಚಂದ್ರನ ಅಂಗಳದಲ್ಲಿ ಯಶಸ್ವಿಯಾಗಿ ಲ್ಯಾಂಡರ್ ಇಳಿಸಿದ ಜಗತ್ತಿನ 5ನೇ ರಾಷ್ಟ್ರವಾಗಲಿದೆ. ಜಪಾನ್‌ನ ಈ ಸಾಧನೆಗೆ ಇಸ್ರೊ ಅಭಿನಂದನೆ ಸಲ್ಲಿಸಿದೆ.

ಜಪಾನ್‌ನ ದಕ್ಷಿಣ ಭಾಗದಲ್ಲಿರುವ ತಾಂಗೇಷಿಮಾ ಬಾಹ್ಯಾಕಾಶ ಕೇಂದ್ರದಿಂದ ಸ್ಮಾರ್ಟ್‌ ಲ್ಯಾಂಡರ್ ಹೊತ್ತ ರಾಕೆಟ್‌ ಯಶಸ್ವಿಯಾಗಿ ಉಡ್ಡಯನಗೊಂಡಿದೆ. ಚಂದ್ರನದ ಅನ್ವೇಷಣೆಗಾಗಿ ಸ್ಮಾರ್ಟ್ ಲ್ಯಾಂಡರ್ (SLIM) ಯೋಜನೆ ಇದಾಗಿದೆ. ಕಳೆದ ತಿಂಗಳು ಈ ಯೋಜನೆ ಕೈಗೊಳ್ಳಲಾಗಿತ್ತು. ಆದರೆ ಪ್ರತಿಕೂಲ ಹವಾಮಾನದಿಂದಾಗಿ ಮೂರು ಬಾರಿ ಉಡ್ಡಯನ ಮುಂದಕ್ಕೆ ಹಾಕಲಾಗಿತ್ತು.

ಚಂದ್ರನ ಅಂಗಳದಲ್ಲಿ ಉದ್ದೇಶಿತ ಸ್ಥಳದಿಂದ 100 ಮೀಟರ್‌ ವ್ಯಾಪ್ತಿಯೊಳಗೆ ಲ್ಯಾಂಡರ್‌ ಇಳಿಸುವ ಯೋಜನೆಯನ್ನು ಜ್ಯಾಕ್ಸ್ ಹೊಂದಿದೆ. ₹831 ಕೋಟಿ ಮೊತ್ತದ ಯೋಜನೆ ಇದಾಗಿದ್ದು, ಬರುವ ಫೆಬ್ರುವರಿಯಲ್ಲಿ ಚಂದ್ರನ ಅಂಗಳದಲ್ಲಿ ಇದನ್ನು ಇಳಿಸಲಾಗುವುದು. ಇಂಧನ ಉಳಿತಾಯದ ಯೋಜನೆ ಇದಾಗಿದೆ ಎಂದು ಸಂಸ್ಥೆ ಹೇಳಿದೆ.

‘ಚಂದ್ರನ ಅಂಗಳದಲ್ಲಿ ಎಲ್ಲಿಯಾದರೂ ಇಳಿಯುವುದಕ್ಕಿಂತ, ಉದ್ದೇಶಿತ ಜಾಗದ ಅತ್ಯಂತ ಸಮೀಪದಲ್ಲಿ ಇಳಿಸುವುದೇ ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ’ ಎಂದು ಜಾಕ್ಸ್‌ನ ಅಧ್ಯಕ್ಷ ಹಿರೋಷಿ ಯಮಕಾವ ತಿಳಿಸಿದ್ದಾರೆ.

ಚಂದ್ರಯಾನ–3 ಯೋಜನೆ ಮೂಲಕ ಚಂದ್ರನ ಅಂಗಳದಲ್ಲಿಳದಲ್ಲಿ ಯಶಸ್ವಿಯಾಗಿ ಲ್ಯಾಂಡರ್‌ ಇಳಿಸಿದ ನಾಲ್ಕನೇ ರಾಷ್ಟ್ರವಾಗಿ ಹೊರಹೊಮ್ಮಿದ ಭಾರತದ ಸಾಧನೆಯ ನಂತರದಲ್ಲಿ ಕೈಗೊಂಡ ಮಹತ್ವದ ಬಾಹ್ಯಾಕಾಶ ಯೋಜನೆ ಇದಾಗಿದೆ. ಇದೇ ಅವಧಿಯಲ್ಲಿ ರಷ್ಯಾದ ಲೂನಾ–25  ಉಡ್ಡಯನಗೊಂಡಿದ್ದರೂ, ಚಂದ್ರನ ತಲುಪಲು ಅದು ವಿಫಲಗೊಂಡಿತ್ತು.

ಚಂದ್ರನ ಅನ್ವೇಷಣೆಗಾಗಿ ಎರಡು ಬಾರಿ ನಡೆಸಿದ ಪ್ರಯತ್ನದಲ್ಲಿ ಜಪಾನ್ ವಿಫಲಗೊಂಡಿತ್ತು. ಕಳೆದ ನವೆಂಬರ್‌ನಲ್ಲಿ ಜಾಕ್ಸ್ ಕಳುಹಿಸಿದ್ದ ಒಮೊಟೆನಾಷಿ ಎಂಬ ಲ್ಯಾಂಡರ್‌ ಲ್ಯಾಂಡಿಂಗ್ ವೇಳೆಯಲ್ಲಿ ಸಂಪರ್ಕ ಕಳೆದುಕೊಂಡಿತು. ಹುಕುಟೊ–ಆರ್‌ ಮಿಷನ್–1 ಲ್ಯಾಂಡರ್‌ ಅನ್ನು ಕಳೆದ ಏಪ್ರಿಲ್‌ನಲ್ಲಿ ಕಳುಹಿಸಲಾಗಿತ್ತು. ಚಂದ್ರನ ಅಂಗಳದಲ್ಲಿ ಇಳಿಯುವ ಹಂತದಲ್ಲಿ ಅದು ಪಥನಗೊಂಡಿತು.

ಈ ಬಾರಿ ಕಳುಹಿಸಿರುವ ಸ್ಮಾರ್ಟ್ ಲ್ಯಾಂಡರ್‌ನಲ್ಲಿ ಕ್ಷ–ಕಿರಣ ದೂರದರ್ಶಕವನ್ನು ಅಳವಡಿಸಲಾಗಿದೆ. ಅದು ಬ್ರಹ್ಮಾಂಡದ ಉಗಮದ ಕುರಿತು ಸಂಶೋಧನೆ ನಡೆಸಲಿದೆ ಎಂದು ಹೇಳಲಾಗಿದೆ.

ಜಪಾನ್‌ ಬಾಹ್ಯಾಕಾಶ ಶೋಧನಾ ಏಜೆನ್ಸಿಯ ಯಶಸ್ವಿ ರಾಕೆಟ್ ಉಡ್ಡಯನಕ್ಕೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಶುಭಾಶಯ ಹೇಳಿದೆ. ತನ್ನ ಎಕ್ಸ್‌ ಖಾತೆಯಲ್ಲಿ ಈ ವಿಷಯವನ್ನು ಹಂಚಿಕೊಂಡಿರುವ ಇಸ್ರೊ, ಜಾಗತಿಕ ಬಾಹ್ಯಾಕಾಶ ಸಮುದಾಯದಿಂದ ಚಂದ್ರನದ ಅನ್ವೇಷಣೆಗಾಗಿ ಕಳುಹಿಸಿದ ಮತ್ತೊಂದು ಯಶಸ್ವಿ ಉಡ್ಡಯಕ್ಕೆ ಅಭಿನಂದನೆಗಳು ಎಂದಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT