ಬುಧವಾರ, ಮೇ 12, 2021
26 °C

ಮಂಗಳ ಗ್ರಹಣದ ಕೌತುಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಡುಪಿ: ಶನಿವಾರ ಸಂಜೆ 6.55ರ ಹೊತ್ತಿಗೆ ಆಕಾಶದಲ್ಲಿ ಮಂಗಳ ಗ್ರಹಣದ ಕೌತುಕ ಕಾಣಿಸಿತು. ಅಪರೂಪದ ಖಗೋಳ ವಿದ್ಯಮಾನವನ್ನು ಖಗೋಳಾಸಕ್ತರು ದೂರದರ್ಶಕಗಳಲ್ಲಿ ಕಣ್ತುಂಬಿಕೊಂಡರು.

ಸಂಜೆ 5.08ಕ್ಕೆ ಚಂದ್ರನಿಗೆ ಸಮೀಪದಲ್ಲಿ ಕಾಣಿಸಿಕೊಂಡ ಮಂಗಳ ಕೆಲವೇ ಕ್ಷಣಗಳಲ್ಲಿ ಮರೆಯಾಯಿತು. ಚಂದ್ರ ಆವರಿಸಿಕೊಂಡ ಪರಿಣಾಮ ಮಂಗಳ ಗ್ರಹ ಕೆಲಹೊತ್ತು ಕಾಣಲಿಲ್ಲ. ಬಳಿಕ 6.55ರ ಹೊತ್ತಿಗೆ ಮತ್ತೆ ಮಂಗಳ ಗ್ರಹವು ಚಂದ್ರನ ಪ್ರಕಾಶಮಾನವಾದ ಭಾಗದ ಬಳಿ ಬೆಳ್ಳಿಯ ಚುಕ್ಕೆಯಂತೆ ಗೋಚರಿಸಿತು. ಈ ಮೂಲಕ ಚಂದ್ರನ ಅಚ್ಛಾದನೆಯು (ಮಂಗಳ ಗ್ರಹಣ) ಪೂರ್ಣಗೊಂಡಿತು.

ಹಿಂದೆ ಚಂದ್ರನ ಅಚ್ಛಾದನೆಯು ಆಫ್ರಿಕಾ ಹಾಗೂ ಅಮೆರಿಕಾದಲ್ಲಿ ಕಾಣಿಸಿಕೊಂಡಿತ್ತು ಎಂದು ಪೂರ್ಣ ಪ್ರಜ್ಞ ಹವ್ಯಾಸಿ ಖಗೋಳ ವೀಕ್ಷಕರ ಸಂಘದ ಅತುಲ್ ಭಟ್‌ ಮಾಹಿತಿ ನೀಡಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು