ಮಂಗಳವಾರ, ಮೇ 18, 2021
24 °C
ನಾಸಾದ ಇನ್‌ಸೈಟ್‌ ಲ್ಯಾಂಡರ್‌ನಿಂದ ಯಶಸ್ವಿ ಕಾರ್ಯಾಚರಣೆ

ಮಂಗಳನ ಅಂಗಳದಲ್ಲಿ ಉಪಕರಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಾಷಿಂಗ್ಟನ್‌: ನಾಸಾದ ಇನ್‌ಸೈಟ್‌ ಲ್ಯಾಂಡರ್‌ ಮಂಗಳ ಗ್ರಹದಲ್ಲಿ ಮೊದಲ ಬಾರಿ ಸೆಸ್ಮೊಮೀಟರ್‌ ಉಪಕರಣ ಅಳವಡಿಸುವಲ್ಲಿ ಯಶಸ್ವಿಯಾಗಿದೆ.

ಮಂಗಳ ಗ್ರಹದ ಸಂಶೋಧನೆ ಕುರಿತು ನಾಸಾ ಕೈಗೊಂಡಿರುವ ಯೋಜನೆಯಲ್ಲಿ ಇದು ಮಹತ್ವದ ಮೈಲಿಗಲ್ಲು. ಇನ್‌ಸೈಟ್‌ ಲ್ಯಾಂಡರ್‌ ಕಳುಹಿಸಿರುವ ಚಿತ್ರಗಳಲ್ಲಿ ಮಂಗಳನ ಅಂಗಳದಲ್ಲಿ ಸೆಸ್ಮೊಮೀಟರ್‌ ಕಾಣಿಸುತ್ತಿದೆ.

‘ಮಂಗಳನ ಅಂಗಳದಲ್ಲಿ ಸುರಕ್ಷಿತವಾಗಿ ಸೆಸ್ಮೊಮೀಟರ್‌ ಇರಿಸುವುದೇ ಅತ್ಯಂತ ಅದ್ಭುತ ಕ್ಷಣ’ ಎಂದು ನಾಸಾದ ಇನ್‌ಸೈಟ್‌ ಯೋಜನಾ ವ್ಯವಸ್ಥಾಪಕ ಟೊಮ್‌ ಹಾಫ್‌ಮನ್‌ ಬಣ್ಣಿಸಿದ್ದಾರೆ.

ಸೆಸ್ಮೊಮೀಟರ್‌ ಅಳವಡಿಸುವಾಗ ಎಂಜಿನಿಯರ್‌ಗಳು ಮೊದಲು ರೊಬೊಟ್‌ನ ಕೈ ಬಗ್ಗೆ ಪರಿಶೀಲನೆ ಮಾಡಿದ್ದರು. ರೊಬೊಟ್‌ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿರುವುದನ್ನು ಖಚಿತ ಪಡಿಸಿಕೊಂಡ ಬಳಿಕವೇ ಉಪಕರಣ ಅಳವಡಿಕೆ ಕಾರ್ಯ ಸುಗಮವಾಗಿ ನಡೆಯಿತು. ವಿಜ್ಞಾನಿಗಳು ಇನ್‌ಸೈಟ್‌ ಲ್ಯಾಂಡರ್‌ ಈ ಮೊದಲು ಕಳುಹಿಸಿರುವ ಚಿತ್ರಗಳ ವಿಶ್ಲೇಷಣೆ ನಡೆಸಿ ಯಾವುದು ಅತ್ಯುತ್ತಮ ಜಾಗ ಸೂಕ್ತ ಎನ್ನುವುದನ್ನು ನಿರ್ಧರಿಸಿದ್ದರು.

ಈ ಪ್ರಕ್ರಿಯೆಗಳು ಮುಗಿದ ಬಳಿಕ, ಇದೇ 18ರಂದು ಇನ್‌ಸೈಟ್‌ಗೆ ಸಂಬಂಧಿಸಿದಂತೆ ಕಾರ್ಯನಿರ್ವಹಿಸುವ ಎಂಜಿನಿಯರ್‌ಗಳು ಬಾಹ್ಯಾಕಾಶ ನೌಕೆಗೆ ಆದೇಶ ನೀಡಿದ್ದರು. 19ರಂದು ಸೆಸ್ಮೊಮೀಟರ್‌ ಅನ್ನು ಮಂಗಳನ ಅಂಗಳದಲ್ಲಿ ಇರಿಸಿತು.

‘ನೆಲದ ಮೇಲೆ ಸೆಸ್ಮೊಮೀಟರ್ ಅಳವಡಿಸುವುದು ಅಂದರೆ, ನಮ್ಮ ಕಿವಿ ಬಳಿ ದೂರವಾಣಿಯನ್ನು ಇಟ್ಟುಕೊಂಡಂತೆ. ಇದರಿಂದ ಮಂಗಳನ ಅಧ್ಯಯನಕ್ಕೆ ಹೆಚ್ಚು ಅನುಕೂಲವಾಗುತ್ತದೆ. ಭೂಕಂಪ ಅಥವಾ ಇತರ ಯಾವುದೇ ರೀತಿಯಲ್ಲಿ ಕಂಪನಗಳಾದರೆ ಅವುಗಳ ಬಗ್ಗೆ ಅಧ್ಯಯನ ಮಾಡಲು ಅನುಕೂಲವಾಗುತ್ತದೆ’ ಎಂದು ವಿಜ್ಞಾನಿ ಫಿಲಿಪ್ಪ್‌ ಲಾಗ್ನೊನ್ನ್‌ ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು