ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏರ್‌ ಟ್ಯಾಕ್ಸಿ ಪರೀಕ್ಷಿಸಲಿರುವ ನಾಸಾ ವಿಜ್ಞಾನಿಗಳು

Last Updated 5 ಸೆಪ್ಟೆಂಬರ್ 2021, 9:23 IST
ಅಕ್ಷರ ಗಾತ್ರ

ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು (ನಾಸಾ) ಇದೇ ಮೊದಲ ಬಾರಿಗೆಎಲೆಕ್ಟ್ರಿಕ್‌ ಏರ್‌ ಟ್ಯಾಕ್ಸಿಯನ್ನು ಪರೀಕ್ಷಿಸಲಿದೆ.

ಕ್ಯಾಲಿಫೋರ್ನಿಯಾದ ಕಂಪೆನಿ ಜಾಬಿ ಏವಿಯೇಷನ್‌ ಆರು ರೋಟರ್‌ಗಳನ್ನು ಹೊಂದಿರುವ ಎಲೆಕ್ಟ್ರಿಕ್‌ ಹೆಲಿಕಾಪ್ಟರ್‌ ಅಭಿವೃದ್ಧಿಪಡಿಸಿದೆ. ನಾಸಾ ವಿಜ್ಞಾನಿಗಳು ಇದರ ಪ್ರಾಯೋಗಿಕ ಪರೀಕ್ಷೆ ನಡೆಸಲಿದ್ದಾರೆ.

ಅತ್ಯಂತ ಜನನಿಬಿಡ ನಗರಗಳಲ್ಲೂ ಶಬ್ದ ಮಾಡದೆ ಹಾರಾಡುವಂತಹ ಹೆಲಿಕಾಪ್ಟರ್‌ ಅನ್ನು ಜಾಬಿ ಏವಿಯೇಷನ್‌ ವಿನ್ಯಾಸ ಮಾಡಿದೆ. ನಾಸಾ ವಿಜ್ಞಾನಿಗಳು ಇದರ ಶಬ್ದದ ದತ್ತಾಂಶಗಳನ್ನು ಸಂಗ್ರಹಿಸಿ ಅಧ್ಯಯನ ನಡೆಸಲಿದ್ದಾರೆ.

ಈ ಏರ್‌ ಟ್ಯಾಕ್ಸಿ ಹೆಲಿಕಾಪ್ಟರ್‌ ಗಂಟೆಗೆ 320 ಕಿ.ಮೀ ವೇಗದಲ್ಲಿ ಚಲಿಸಲಿದೆ. ಒಮ್ಮೆ ಚಾರ್ಜ್‌ ಮಾಡಿದರೆ 240 ಕಿ.ಮೀ ಕ್ರಮಿಸಬಲ್ಲದು ಎಂದುಜಾಬಿ ಏವಿಯೇಷನ್‌ ತಿಳಿಸಿದೆ.

ಸಾಮಾನ್ಯವಾಗಿ ಹೆಲಿಕಾಪ್ಟರ್‌ಗಳು ಹೆಚ್ಚು ಶಬ್ಧವನ್ನು ಹೊರಸೂಸುತ್ತವೆ. ಕಡಿಮೆ ಸದ್ದು ಬರುವಂತೆ ಮಾಡುವುದಕ್ಕಾಗಿ ನಾಸಾ ವಿಜ್ಞಾನಿಗಳು ಇದರ ಅಧ್ಯಯನ ನಡೆಸಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT