ಸೋಮವಾರ, ಡಿಸೆಂಬರ್ 5, 2022
23 °C

ನೂತನ ಬಾಹ್ಯಾಕಾಶ ತಂತ್ರಜ್ಞಾನದಿಂದ ಐದೇ ನಿಮಿಷದಲ್ಲಿ ಕಾರು ಚಾರ್ಜ್‌ ಸಾಧ್ಯ: ನಾಸಾ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ವಾಷಿಂಗ್ಟನ್‌ (ಪಿಟಿಐ): ಭವಿಷ್ಯದ ಬಾಹ್ಯಾಕಾಶ ಕಾರ್ಯಕ್ರಮಗಳಿಗಾಗಿ ಅಭಿವೃದ್ಧಿಪಡಿಸಿರುವ ನೂತನ ತಂತ್ರಜ್ಞಾನ ಬಳಸಿ, ವಿದ್ಯುತ್ ಚಾಲಿತ ಕಾರುಗಳನ್ನು ಕೇವಲ ಐದು ನಿಮಿಷಗಳಲ್ಲಿ ಚಾರ್ಜ್‌ ಮಾಡಲು ಸಾಧ್ಯವಿದೆ ಎಂದು ಅಮೆರಿಕ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾ ತಿಳಿಸಿದೆ.

ಸದ್ಯ ವಿದ್ಯುತ್‌ ಚಾಲಿತ ಕಾರುಗಳನ್ನು ಚಾರ್ಜ್‌ ಮಾಡಲು ಕನಿಷ್ಠ 20 ನಿಮಿಷದಿಂದ 60 ನಿಮಿಷಗಳು ಬೇಕಾಗುತ್ತಿವೆ. ಇದರಿಂದಲೇ ಜನರು ವಿದ್ಯುತ್‌ ಚಾಲಿತ ಕಾರು ಖರೀದಿಗೆ ಹಿಂದೇಟು ಹಾಕುತ್ತಿದ್ದಾರೆ. ಈ ನೂತನ ತಂತ್ರಜ್ಞಾನದ ಆವಿಷ್ಕಾರದಿಂದಾಗಿ ವಿದ್ಯುತ್‌ ಚಾಲಿತ ಕಾರುಗಳತ್ತ ಜನರ ಒಲವು ಹೆಚ್ಚಾಗಲಿದೆ ಎಂದು ನಾಸಾ ವಿಶ್ವಾಸ ವ್ಯಕ್ತಪಡಿಸಿದೆ.

ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ (ಐಎಸ್‌ಎಸ್‌) ಪರಿಸರದಲ್ಲಿ ಕಡಿಮೆ ಅವಧಿಯಲ್ಲಿ ವಿದ್ಯುತ್‌ ಪ್ರಸರಣ ಸಾಧ್ಯವಾಗಿಲು ನೂತನ ತಂತ್ರಜ್ಞಾನವನ್ನು (ಎಫ್‌ಬಿಸಿಇ) ಅಭಿವೃದ್ಧಿಪಡಿಸಲಾಗಿದೆ. ಈ ತಂತ್ರಜ್ಞಾನವನ್ನು ಭೂಮಿಯ ಮೇಲೂ ಬಳಸಿ, ವಿದ್ಯುತ್‌ ಚಾಲಿತ ವಾಹನಗಳನ್ನು ಕಡಿಮೆ ಅವಧಿಯಲ್ಲಿ ಚಾರ್ಚ್‌ ಮಾಡಲು ಸಾಧ್ಯವಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು