ಬುಧವಾರ, 7 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪತನಗೊಳ್ಳಲಿದೆ ನಾಸಾದ38 ವರ್ಷ ಹಳೆಯ ಉಪಗ್ರಹ

Last Updated 7 ಜನವರಿ 2023, 14:44 IST
ಅಕ್ಷರ ಗಾತ್ರ

ಕೇಪ್‌ ಕೆನವೆರಲ್ (ಎ.ಪಿ): ನಾಸಾ 38 ವರ್ಷಗಳ ಹಿಂದೆ ಉಡಾವಣೆ ಮಾಡಿದ್ದ, ಸುಮಾರು 2,450 ಕೆ.ಜಿ. ತೂಕದ ಉಪಗ್ರಹ ‘ಇಆರ್‌ಬಿಎಸ್‌’, ಪತನಗೊಳ್ಳುವ ಸಾಧ್ಯತೆಗಳಿವೆ.

ಈ ಉಪಗ್ರಹದ ಅವಶೇಷಗಳು ಯಾರ ಮೇಲಾದರೂ ಬೀಳುವ ಸಾಧ್ಯತೆಗಳು ಕಡಿಮೆ. ಬಹುತೇಕ ಭಾಗಗಳು ಭೂಮಿಗೆ ಮರುಪ್ರವೇಶದ ಮಾರ್ಗದಲ್ಲಿಯೇ ಸುಟ್ಟುಹೋಗಲಿವೆ. ಕೆಲವೊಂದು ತುಣುಕುಗಳು ಬೀಳಬಹುದಷ್ಟೇ ಎಂದು ನಾಸಾ ಹೇಳಿದೆ.

‘ಭೂ ವಿಕಿರಣದ ಬಜೆಟ್ ಉಪಗ್ರಹ’ (ಇಆರ್‌ಬಿಎಸ್‌) ಹೆಸರಿನ ಈ ಉಪಗ್ರಹವನ್ನು 1984ರಲ್ಲಿ ಉಡಾವಣೆ ಮಾಡಲಾಗಿತ್ತು. ಕಾರ್ಯಾಚರಣೆ ಅವಧಿ ಎರಡು ವರ್ಷ ಎಂದು ಅಂದಾಜಿಸಿದ್ದರೂ ನಿರೀಕ್ಷೆ ಮೀರಿ 2005ರವರೆಗೆ ಕಾರ್ಯ ನಿರ್ವಹಿಸಿತ್ತು. ಸೂರ್ಯನಿಂದ ಹೊಮ್ಮುವ ಶಕ್ತಿಯನ್ನು ಭೂಮಿ ಹೀರಿಕೊಂಡ ಹಾಗೂ ಪರಸರಿಸಿದ್ದು ಹೇಗೆ ಎಂಬುದನ್ನು ಈ ಉಪಗ್ರಹದ ಮೂಲಕ ಅಧ್ಯಯನ ಮಾಡಲಾಗಿತ್ತು.

ಕ್ಯಾಲಿಫೋರ್ನಿಯಾದ ಏರೋಸ್ಪೇಸ್‌ ಕಾರ್ಪೋರೇಷನ್‌ ಪ್ರಕಾರ, ಹೆಚ್ಚುಕಡಿಮೆ 13 ಗಂಟೆಗಳ ಅಂತರದಲ್ಲಿ ಈ ಉಪಗ್ರಹದ ಪತನದ ಮಾರ್ಗ ಆಫ್ರಿಕಾ, ಏಷ್ಯಾ, ಮಧ್ಯಪೂರ್ವ ರಾಷ್ಟ್ರಗಳು, ಉತ್ತರ ಮತ್ತು ದಕ್ಷಿಣ ಅಮೆರಿಕ ಮೇಲೆ ಹಾದುಹೋಗಲಿದೆ.

ಉಪಗ್ರಹದ ಅವಶೇಷಗಳು ಭೂಮಿಗೆ ‌ಬೀಳುವ ಸಂದರ್ಭದಲ್ಲಿ, 9,400 ಜನರಲ್ಲಿ ಒಬ್ಬರಿಗೆ ಪೆಟ್ಟು ಆಗಬಹುದು ಎಂದು ನಾಸಾ ಅಂದಾಜು ಮಾಡಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT