ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಿಟನೊಸಾರಸ್‌ನ 90ಕ್ಕೂ ಅಧಿಕ ಗೂಡುಗಳ ತಾಣ ಪತ್ತೆ

Last Updated 23 ಜನವರಿ 2023, 14:46 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಟಿಟನೊಸಾರಸ್‌ಗಳಿಗೆ (ಅತ್ಯಂತ ದೊಡ್ಡ ಡೈನೋಸಾರ್‌ ಸಂತತಿ) ಸಂಬಂಧಿಸಿದ 92 ಗೂಡುಕಟ್ಟುವ ತಾಣಗಳು ಹಾಗೂ ಆ ಸ್ಥಳಗಳಲ್ಲಿದ್ದ ಅವುಗಳ 256 ಮೊಟ್ಟೆಯ ಪಳೆಯುಳಿಕೆಗಳನ್ನು ಮಧ್ಯಪ್ರದೇಶದ ಧಾರ್‌ ಜಿಲ್ಲೆಯ ನರ್ಮದಾ ಕಣಿವೆಯಲ್ಲಿ ಸಂಶೋಧಕರು ಕೆಲದಿನಗಳ ಹಿಂದೆ ಪತ್ತೆ ಹಚ್ಚಿದ್ದಾರೆ.

‘ಪ್ಲಸ್‌ ಒನ್‌’ ನಿಯತಕಾಲಿಕೆಯಲ್ಲಿ ಈ ಕುರಿತ ಮಾಹಿತಿ ಪ್ರಕಟಿಸಲಾಗಿದೆ. ಭಾರತದ ಉಪಖಂಡದಲ್ಲಿ ಟಿಟನೊಸಾರಸ್‌ಗಳು ದೊಡ್ಡ ಸಂಖ್ಯೆಯಲ್ಲಿ ನೆಲೆಸಿದ್ದವು ಎಂಬುದು ಇದರಿಂದ ಬಹಿರಂಗವಾಗಿದೆ.

‘ಈ ಪ್ರದೇಶದಲ್ಲಿ ಒಟ್ಟು ಆರು ಬಗೆಯ ಮೊಟ್ಟೆಯ ಪಳೆಯುಳಿಕೆಗಳು ಪತ್ತೆಯಾಗಿವೆ. ಟಿಟನೊಸಾರಸ್‌ಗಳು ಮೊಸಳೆಗಳ ಹಾಗೆ ಆಳವಿಲ್ಲದ ಹೊಂಡಗಳಲ್ಲಿ ತಮ್ಮ ಮೊಟ್ಟೆಗಳನ್ನು ಅಡಗಿಸಿಡುತ್ತಿದ್ದವು ಎಂಬುದು ಗೂಡುಗಳ ವಿನ್ಯಾಸದ ಅಧ್ಯಯನದಿಂದ ತಿಳಿದು ಬಂದಿದೆ’ ಎಂದು ಸಂಶೋಧಕರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT