ಬೆಂಗಳೂರು: ಜನಪ್ರಿಯ ಉದ್ಯೋಗ ಕೇಂದ್ರಿತ ಸಾಮಾಜಿಕ ಮಾಧ್ಯಮ ವೇದಿಕೆ LinkedIn ನಲ್ಲಿ ಎರಡು ವರ್ಷದ ಬಾಲಕನೊಬ್ಬನ ಅಕೌಂಟ್ ಕ್ರಿಯೇಟ್ ಆಗಿರುವುದು ಗಮನ ಸೆಳೆದಿದೆ.
ಅಲ್ಲದೇ ಈ ವಿಚಾರ ಅಂತರ್ಜಾಲದಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಹುಟ್ಟುಹಾಕಿದೆ. ಅನೇಕರು ವ್ಯಂಗ್ಯಭರಿತವಾಗಿ ಪ್ರತಿಕ್ರಿಯಿಸಿದ್ದಾರೆ.
ಟೈಗರ್ ಚೌಹಾಣ್ ಎನ್ನುವ ಬಾಲಕ, I am just a kid, trying to find my place in this world. Turned two today ( 26/08/24 ). My father's friend always says that "Network is Networth". So I am here to network which will help me in my career. ಎಂದು ಬರೆದುಕೊಂಡಿದ್ದಾನೆ.
ಸಂಪರ್ಕವೇ ಸಂಪತ್ತು ಎಂಬ ಅರ್ಥವನ್ನು ಬಾಲಕ ಹೇಳಿರುವುದಕ್ಕೆ ಅನೇಕರು ಮೆಚ್ಚಿಕೊಂಡಿದ್ದಾರೆ.
ಈ ಬಾಲಕನ ತಂದೆ ಶಿವೇಶ್ ಚೌಹಾಣ್ ಬಾಲಕನ ಪ್ರೊಫೈಲ್ ಹಂಚಿಕೊಂಡು ವಿಶ್ ಮಾಡಿದ್ದಾರೆ.
ನೆಟ್ಟಿಗರೊಬ್ಬರು ಅಯ್ಯೋ ಶಿವನೇ ಎರಡು ವರ್ಷ ಲೇಟಾಯಿತಲ್ಲೋ ಎಂದು ವ್ಯಂಗ್ಯವಾಡಿದ್ದಾರೆ. ಏನೇ ಇರಲಿ ಬಾಲಕ Network is Networth ಎಂದು ಬರೆದುಕೊಂಡಿರುವುದು ಹಲವರ ಮೆಚ್ಚುಗೆ ಗಳಿಸಿದೆ.