ಮಂಗಳವಾರ, ಜೂನ್ 28, 2022
25 °C

ಕೆನಡಾ ಸೈಟಿಗೂ ಕನ್ನಡಿಗರ ಆಕ್ರೋಶದ ಬಿಸಿ: ವಿವಾದಿತ ಚಿತ್ರ ಬದಲಿಸಿದ ಅಮೆಜಾನ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಗೂಗಲ್ ಬೆನ್ನಲ್ಲೇ ಕನ್ನಡಿಗರ ಹೋರಾಟಕ್ಕೆ ಮಣಿದಿರುವ ಇ-ಕಾಮರ್ಸ್ ದೈತ್ಯ ಅಮೆಜಾನ್, ವಿವಾದಿತ ಕರ್ನಾಟಕದ ಬಾವುಟ ಹಾಗೂ ಲಾಂಛನವನ್ನು ಹೋಲುವ ಮಹಿಳೆಯರ ಒಳ ಉಡುಪಿನ ಚಿತ್ರವನ್ನು ಬದಲಿಸಿದೆ. 

ಅಮೆಜಾನ್ ಕೆನಡಾ ಸಂಸ್ಥೆಯ ವೆಬ್‌ಸೈಟ್‌ನಲ್ಲಿ ಕನ್ನಡದ ಬಾವುಟದ ಬಣ್ಣ ಹಾಗೂ ಕರ್ನಾಟಕದ ರಾಜ್ಯ ಲಾಂಛನವನ್ನು ಹೊಂದಿರುವ ಹೆಣ್ಣುಮಕ್ಕಳ ಒಳ ಉಡುಪನ್ನು ಮಾರಾಟಕ್ಕಿರಿಸಿತ್ತು.

ಇದನ್ನೂ ಓದಿ: 

ಈ ಕುರಿತು ಕನ್ನಡ ಅಭಿಮಾನಿಗಳಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಇದಾದ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಅಮೆಜಾನ್ ವಿವಾದಿತ ಚಿತ್ರವನ್ನು ತೆಗೆದು ಹಾಕಿದೆ. 

ಈ ಪುಟದಲ್ಲೀಗ ಬಿಕಿನಿ ಚಿತ್ರವೊಂದನ್ನು ಹಂಚಿಕೊಳ್ಳಲಾಗಿದೆ. ಹಾಗಿದ್ದರೂ ಹೆಸರಿನಲ್ಲಿ ಈಗಲೂ 'Flag of Karnataka' ಎಂಬ ಪದ ಉಳಿದಿದೆ ಎಂಬುದು ಗಮನಾರ್ಹ. (ಅಮೆಜಾನ್ ಲಿಂಕ್ ಇಲ್ಲಿದೆ)


ವಿವಾದಿತ ಬಿಕಿನಿ ಚಿತ್ರ ಬದಲಿಸಿದ ಅಮೆಜಾನ್

ವಿವಾದ ಬೆಳಕಿಗೆ ಬಂದಿರುವ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ಕರ್ನಾಟಕ ಅರಣ್ಯ,ಕನ್ನಡ ಮತ್ತು ಸಂಸ್ಕೃತಿ ಸಚಿವ ಅರವಿಂದ ಲಿಂಬಾವಳಿ, ಕೆನಡಾ ಸಂಸ್ಥೆಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.

ಕನ್ನಡದ ಭಾಷೆ, ಸಂಸ್ಕೃತಿ ಮತ್ತು ಪರಂಪರೆಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ಕನ್ನಡ ನೆಲದ ಶ್ರೇಷ್ಠತೆಯ ಅರಿವಿಲ್ಲದ ವಿದೇಶಿ ಸಂಸ್ಥೆಗಳು ಕನ್ನಡದ ಅಸ್ಮಿತೆಗೆ ಅವಮಾನ ಮಾಡುವಂತಹ ಯಾವುದೇ ಕೆಲಸ ಮಾಡಿದರೂ ಅದನ್ನು ನಾನು ಪ್ರಬಲವಾಗಿ ಖಂಡಿಸುತ್ತೇನೆ ಎಂದಿದ್ದಾರೆ.
 
ಕೆಲವು ದಿನಗಳ ಹಿಂದೆಯಷ್ಟೇ ಕನ್ನಡಿಗರ ಸ್ವಾಭಿಮಾನದ ಅಲೆಗೆ ಬೆದರಿದ ಗೂಗಲ್, ಕನ್ನಡ ಭಾಷೆಯ ಕುರಿತ ಅವಹೇಳನಕಾರಿ ವಿಷಯ ತೋರಿಸುತ್ತಿದ್ದ ವೆಬ್‌ಸೈಟ್‌ನ ವಿವಾದಾತ್ಮಕ ಪುಟವನ್ನು ತೆರವುಗೊಳಿಸಿತ್ತು. ಅಲ್ಲದೆ ಕನ್ನಡಿಗರ ಭಾವನೆಗಳಿಗೆ ಧಕ್ಕೆ ತಂದಿರುವುದಕ್ಕೆ ಕ್ಷಮೆಯಾಚಿಸಿತ್ತು. 

ಇವನ್ನೂ ಓದಿ:
 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು