ಶುಕ್ರವಾರ, 24 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆನಂದ್‌ ಮಹೀಂದ್ರರ ಶಿಕ್ಷಣದ ಬಗ್ಗೆ ಪ್ರಶ್ನೆ: ಉದ್ಯಮಿಯ ಉತ್ತರಕ್ಕೆ ಶ್ಲಾಘನೆ

ಅಕ್ಷರ ಗಾತ್ರ

ಬೆಂಗಳೂರು: ಮಹೀಂದ್ರ ಗ್ರೂಪ್‌ ಚೇರ್ಮನ್‌ ಆನಂದ್‌ ಮಹೀಂದ್ರ ಅವರ ಶೈಕ್ಷಣಿಕ ಅರ್ಹತೆ ಬಗ್ಗೆ ಟ್ವಿಟರ್‌ ಬಳಕೆದಾರರೊಬ್ಬರು ಪ್ರಶ್ನಿಸಿದ್ದು, ಎಲ್ಲರ ಮೆಚ್ಚುಗೆಗೆ ಪಾತ್ರವಾಗುವಂತಹ ಮಹತ್ವದ ಉತ್ತರವನ್ನು ಉದ್ಯಮಿ ನೀಡಿದ್ದಾರೆ.

ಟ್ವಿಟರ್‌ನಲ್ಲಿ ಅಭಿಶೇಕ್‌ ದುಬೇ ಎಂಬುವವರು ಹಂಚಿಕೊಂಡಿದ್ದ ಫೋಟೊ ಒಂದಕ್ಕೆ ಆನಂದ್‌ ಮಹೀಂದ್ರ ಪ್ರತಿಕ್ರಿಯಿಸಿದ್ದರು. ಅರಣ್ಯ ಪ್ರದೇಶದಲ್ಲಿ ಹುಡುಗಿಯೊಬ್ಬಳು ಓದುತ್ತ ಕುಳಿತಿರುವ ಫೋಟೊಗೆ, ತುಂಬ ಸುಂದರವಾದ ಛಾಯಾಗ್ರಹಣ. ಈಕೆ ನನಗೆ ಸ್ಫೂರ್ತಿ ಎಂದಿದ್ದರು. ಇದರ ಬೆನ್ನಲ್ಲೇ ಅಭಿಶೇಕ್‌ ಅವರ ಪೋಸ್ಟ್‌ ವೈರಲ್‌ ಆಗಿದೆ.

'ಹಿಮಾಚಲದ ಗುಡ್ಡ ಪ್ರದೇಶದಲ್ಲಿ ಚಾರಣ ಮಾಡುತ್ತಿದ್ದಾಗ ಹುಡುಗಿಯೊಬ್ಬಳು ಓದುತ್ತ ಕುಳಿತಿರುವುದನ್ನು ನೋಡಿದೆ. ಆಕೆಯ ತನ್ಮಯತೆ ಬಗ್ಗೆ ಹೇಳಲು ನನಗೆ ಸಾಧ್ಯವಾಗುತ್ತಿಲ್ಲ. ಅದ್ಭುತ' ಎಂದು ಟ್ವಿಟರ್‌ನಲ್ಲಿ ಪ್ರಕಟಿಸಿರುವ ಫೋಟೊ ಬಗ್ಗೆ ಅಭಿಶೇಕ್‌ ವಿವರಿಸಿದ್ದಾರೆ.

ಆನಂದ್‌ ಮಹೀಂದ್ರ ಅವರ ಅಭಿಪ್ರಾಯಕ್ಕೆ ವೈಭವ್‌ ಎಸ್‍‌ಡಿ ಎಂಬ ಟ್ವಿಟರ್‌ ಬಳಕೆದಾರ, 'ಸರ್‌ ನಿಮ್ಮ ಶೈಕ್ಷಣಿಕ ಅರ್ಹತೆ ಏನು ಎಂಬುದನ್ನು ದಯವಿಟ್ಟು ತಿಳಿಸುತ್ತೀರಾ?' ಎಂದು ಕೇಳಿದ್ದಾರೆ. ಇದಕ್ಕೆ ತಾಳ್ಮೆಯಿಂದ ಪ್ರತಿಕ್ರಿಯಿಸಿರುವ 67 ವರ್ಷದ ಆನಂದ್‌ ಮಹೀಂದ್ರ ಅವರು, 'ನೇರವಾಗಿ ಹೇಳಬೇಕೆಂದರೆ, ಈ ನನ್ನ ವಯಸ್ಸಲ್ಲಿ, ಅನುಭವವೇ ನನ್ನ ಏಕೈಕ ಅರ್ಹತೆಯಾಗಿದೆ' ಎಂದಿದ್ದಾರೆ. ಈ ಉತ್ತರಕ್ಕೆ ಭಾರಿ ಪ್ರಶಂಸೆ ವ್ಯಕ್ತವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT