ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

#10YearsChallenge: ಕರ್ನಾಟಕ ಬಿಜೆಪಿ ಟ್ವೀಟಿಸಿದ್ದ ಫೋಟೊ ಸಾಕ್ಷ್ಯಚಿತ್ರದ್ದು!

Last Updated 20 ಜನವರಿ 2019, 9:36 IST
ಅಕ್ಷರ ಗಾತ್ರ

ಬೆಂಗಳೂರು: ಸಾಮಾಜಿಕ ಮಾಧ್ಯಮಗಳಲ್ಲಿ #10YearsChallenge ಟ್ರೆಂಡ್ ಆಗುತ್ತಿದ್ದು,ಜನವರಿ 17ರಂದು ಬಿಜೆಪಿ ಕರ್ನಾಟಕ ಹತ್ತು ವರ್ಷಗಳಲ್ಲಿ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಸಾಧನೆಯನ್ನು ಬಿಂಬಿಸಿ ಕೆಲವು ಚಿತ್ರಗಳನ್ನು ಶೇರ್ ಮಾಡಿತ್ತು.ಈ ಚಿತ್ರಗಳ ಸತ್ಯಾಸತ್ಯತೆ ಏನು ಎಂಬುದರ ಬಗ್ಗೆ ಆಲ್ಟ್ ನ್ಯೂಸ್ ಫ್ಯಾಕ್ಟ್ ಚೆಕ್ ಮಾಡಿದೆ.

ಸ್ಪೆಲಿಂಗ್ ತಪ್ಪು!

ಚಿತ್ರದ ಬಗ್ಗೆ ಮಾತನಾಡುವ ಮುನ್ನ ಬಿಜೆಪಿ ಕರ್ನಾಟಕ ಟ್ವೀಟ್ ಗಮನಿಸಿ. ಇದರಲ್ಲಿ #10YearCallenge Modi style ! 😎 ಎಂದು ಬರೆಯಲಾಗಿದೆ. Challenge ಎಂಬುದು ಇಲ್ಲಿ Callenge ಆಗಿದೆ!.


ಬಿಜೆಪಿ ಸಂಸದಪ್ರತಾಪ್ ಸಿಂಹ ಸೇರಿದಂತೆ ಹಲವಾರು ಮಂದಿ ಇದೇ ಫೋಟೊವನ್ನು ಶೇರ್ ಮಾಡಿದ್ದಾರೆ.

ಪ್ರತಾಪ್ ಸಿಂಹ ಶೇರ್ ಮಾಡಿದ ಈ ಫೋಟೊಗಳನ್ನು ಗಮನಿಸಿದರೆಅದರಲ್ಲಿ Nation with NaMo ಫೇಸ್‍ಬುಕ್ ಪುಟದ ಲೋಗೊ ಇದೆ.

Nation with NaMo ಫೇಸ್‍ಬುಕ್ ಪುಟದಲ್ಲಿ ಇದೇ ಪೋಸ್ಟ್ 3000ಕ್ಕಿಂತಲೂ ಹೆಚ್ಚು ಬಾರಿ ಶೇರ್ ಆಗಿದೆ. Bharat Positive ಎಂಬ ಟ್ವಿಟರ್ ಹ್ಯಾಂಡಲ್‍ನಲ್ಲಿಯೂಇದೇ ಪೋಸ್ಟ್ ಶೇರ್ ಆಗಿದೆ.


ಫೋಟೊ ಹಿಂದಿನ ಸತ್ಯ ಸಂಗತಿ ಏನು?

ಬಿಜೆಪಿ ಕರ್ನಾಟಕ ಟ್ವೀಟಿಸಿರುವ ಈ ಫೋಟೊಗಳ ಮೂಲ ಯಾವುದು ಎಂಬುದನ್ನು ಆಲ್ಟ್ ನ್ಯೂಸ್ ಪತ್ತೆ ಮಾಡಿದೆ. Google reverse image search ಮತ್ತು Yandex image search ಮಾಡಿದಾಗ ಸಿಕ್ಕಿದ ಫಲಿತಾಂಶ ಹೀಗಿದೆ.

ಮೊದಲ ಚಿತ್ರ


ಎಡಭಾಗದಲ್ಲಿರುವ ಮಹಿಳೆಯ ಚಿತ್ರ Vulnerable without a toilet ಎಂಬ ಸಾಕ್ಷ್ಯಚಿತ್ರದ ದೃಶ್ಯದ್ದಾಗಿದೆ. 2014, ಮೇ.23ರಂದುVideo Volunteers ಈ ಸಾಕ್ಷ್ಯಚಿತ್ರವನ್ನು ಅಪ್‍ಲೋಡ್ ಮಾಡಿದೆ.

ಉತ್ತರಪ್ರದೇಶದ ವಾರಣಾಸಿ ಜಿಲ್ಲೆಯಲ್ಲಿ ನೈರ್ಮಲ್ಯಕ್ಕಾಗಿ ಮೂಲ ಸೌಕರ್ಯದ ಕೊರತೆ ಇರುವುದನ್ನು ತೋರಿಸುವ ವಿಡಿಯೊ ಇದಾಗಿದೆ.

ಎರಡನೇ ಚಿತ್ರ ನೇರಳೆ ಬಣ್ಣದ ಸೀರೆಯುಟ್ಟ ಮಹಿಳೆಯ ಚಿತ್ರ 2011 ಅಕ್ಟೋಬರ್ 11ರಂದು ಲೈವ್ಮಿಂಟ್‍ನಲ್ಲಿ ಪ್ರಕಟವಾದ ಲೇಖನದಲ್ಲಿ ಬಳಸಿದ ಚಿತ್ರವಾಗಿದೆ.ಸ್ವಚ್ಛ ಭಾರತ ಅಭಿಯಾನದಡಿಯಲ್ಲಿ ಉಚಿತ ಟಾಯ್ಲೆಟ್ ನಿರ್ಮಾಣದ ಬಗ್ಗೆ ಬರೆದಿರುವ ಲೇಖನದಲ್ಲಿ ಈ ಚಿತ್ರ ಬಳಕೆಯಾಗಿದೆ.

ಇರುಂಗಟ್ಟುಕೋಟ್ಟೈ ಗ್ರಾಮದಲ್ಲಿ ಹುಂಡೈ ನಿರ್ಮಿಸಿದ ಟಾಯ್ಲೆಟ್‍ನ್ನು ಬಳಸುತ್ತಿರುವ ಮಹಿಳೆ ಎಂದು ಈ ಚಿತ್ರಕ್ಕೆ ಶೀರ್ಷಿಕೆ ನೀಡಲಾಗಿದೆ.ಟ್ಲಾಯ್ಲೆಟ್ ಸೌಕರ್ಯವಿಲ್ಲದಿರುವ 205 ಮನೆಗಳಿಗೆ ಹುಂಡೈ ಮೊಟಾರ್ಸ್ ಲಿಮಿಟೆಡ್ ನಿರ್ಮಿಸಿಕೊಟ್ಟಿರುವ ಬಗ್ಗೆ ಈ ಲೇಖನ ಪ್ರಕಟವಾಗಿದೆ.

ಎರಡನೇ ಚಿತ್ರ


ಎಡಭಾಗದಲ್ಲಿರುವ ಈ ಚಿತ್ರವನ್ನು ಹಲವಾರು ಲೇಖನಗಳಲ್ಲಿ ಸಾಂದರ್ಭಿಕ ಚಿತ್ರವಾಗಿ ಬಳಸಲಾಗಿದೆ.ಈ ಚಿತ್ರದ ಮೂಲ ಹುಡುಕಿದಾಗ ಇದು ಆಗಸ್ಟ್ 7, 2012ರಂದು Green Drinks Singapore ಎಂಬ ವೆಬ್‍ಸೈಟ್‍ನಲ್ಲಿ ಪ್ರಕಟವಾದ ಫೋಟೊ ಇದಾಗಿದೆ.

ಈ ಫೊಟೊ ಕೃಪೆ Global Alliance For Clean Cookstoves ನದ್ದು, Global Alliance For Clean Cookstoves 2010ರಲ್ಲಿ ಆರಂಭವಾದ ಎನ್‍ಜಿಒ ಆಗಿದೆ.

ಬಲಭಾಗದಲ್ಲಿರುವಮಹಿಳೆಯ ಚಿತ್ರDown to Earth ನಲ್ಲಿ 2018ರಂದು ಪ್ರಕಟವಾದ ಲೇಖನವೊಂದರಲ್ಲಿ ಬಳಸಲಾದ ಚಿತ್ರವಾಗಿದೆ, ಉಜ್ವಲ ಯೋಜನೆಯ 2 ಕೋಟಿ ಫಲಾನುಭವಿಗಳಲ್ಲಿ ಒಬ್ಬರಾದ ಸ್ವಾಲಿಯಾ ಬೀಬಿ ಎಂಬವರದ್ದಾಗಿದೆ.

ಮೂರನೇ ಚಿತ್ರ


ಎಡಭಾಗದಲ್ಲಿರುವ ಈ ಚಿತ್ರ ವಿದ್ಯುತ್ ಕೊರತೆ ಬಗ್ಗೆ ಬರೆದ ಹಲವಾರು ಲೇಖನ, ಬ್ಲಾಗ್‍ನಲ್ಲಿ ಸಾಂದರ್ಭಿಕ ಚಿತ್ರವಾಗಿ ಬಳಕೆಯಾಗಿದೆ. 2011, ಜನವರಿ 10ರಂದು ಪ್ರಕಟವಾದ ಬ್ಲಾಗ್ ಒಂದರಲ್ಲಿಈ ಚಿತ್ರ ಪ್ರಕಟವಾಗಿದ್ದು ಬಿಹಾರದ ತಹೀಪುರ್ ಗ್ರಾಮದಲ್ಲಿ ವಿದ್ಯಾರ್ಥಿಗಳು ಚಿಮಿಣಿ ದೀಪದಡಿಯಲ್ಲಿ ಓದುತ್ತಿರುವುದು ಎಂಬ ಶೀರ್ಷಿಕೆ ನೀಡಲಾಗಿದೆ.

ಈ ಚಿತ್ರದ ಕೃಪೆ Greenpeace ಎಂಬ ಎನ್‍ಜಿಒ ಎಂದು ಲೇಖನದಲ್ಲಿ ಉಲ್ಲೇಖಿಸಲಾಗಿದೆ.

ಬಲಭಾಗದಲ್ಲಿರುವ ಫೊಟೊ ಬಗ್ಗೆ ಹೇಳುವುದಾದರೆ 2010 ಫೆಬ್ರುವರಿಯಲ್ಲಿ ಪ್ರಕಟವಾದ ಲೇಖನವೊಂದರಲ್ಲಿಯೂ ಇದೇ ಚಿತ್ರ ಬಳಕೆಯಾಗಿದೆ.

ಲೈವ್ಮಿಂಟ್‍ನಲ್ಲಿ ಪ್ರಕಟವಾದ ಫೋಟೊ Getty Image ನಲ್ಲಿದೆ.ಮಿಂಟ್‍ನಲ್ಲಿ ಇದೇ ಚಿತ್ರದ ಶೀರ್ಷಿಕೆ ಕರ್ನಾಲ್‍ನಲ್ಲಿ 2010, ಫೆಬ್ರುವರಿ 24ರಂದು ಕ್ಲಿಕ್ಕಿಸಿದ ಫೋಟೊ ಇದಾಗಿದ್ದು, ಬಜಿಡಾ ಝಟ್ಟಾನ್ ಗ್ರಾಮದಲ್ಲಿನ ವಿದ್ಯುತ್ ಬೆಳಕು ಎಂದು ಉಲ್ಲೇಖವಿದೆ.

ಬಿಜೆಪಿ ಬಳಸಿರುವ ಈ ಚಿತ್ರಗಳ ಬಗ್ಗೆ ದಿ ಪ್ರಿಂಟ್ ಕೂಡಾ ಫ್ಯಾಕ್ಟ್ ಚೆಕ್ ಮಾಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT