ಭಾನುವಾರ, ಅಕ್ಟೋಬರ್ 24, 2021
29 °C

ಶಾರುಖ್ ಖಾನ್‌ಗೆ ಬಹಿಷ್ಕಾರ: ಟ್ವಿಟರ್‌ನಲ್ಲಿ ಟ್ರೆಂಡ್ ಆಯ್ತು ಹ್ಯಾಶ್‌ಟ್ಯಾಗ್!

ಪ್ರಜಾವಾಣಿ ವೆಬ್ ಡೆಸ್ಕ್‌ Updated:

ಅಕ್ಷರ ಗಾತ್ರ : | |

Superstar Shah Rukh Khan. Credit: AFP File Photo

ಬೆಂಗಳೂರು: ಬಾಲಿವುಡ್ ನಟ ಶಾರುಖ್ ಖಾನ್ ಅವರಿಗೆ ಟ್ವಿಟರ್‌ನಲ್ಲಿ ಬಹಿಷ್ಕಾರದ ಬಿಸಿ ತಾಗಿದೆ. 

ಶಾರುಖ್ ಖಾನ್ ಅವರು ಪಾಕಿಸ್ತಾನದ ಕ್ರಿಕೆಟಿಗರು ಶ್ರೇಷ್ಠ ಎಂದಿರುವ ಹಳೆಯ ಹೇಳಿಕೆ ಒಂದು ವೈರಲ್ ಆಗಿರುವ ಬೆನ್ನಲ್ಲೇ, ಟ್ವಿಟರ್‌ನಲ್ಲಿ #BoycottSharukhkhan ಎನ್ನುವ ಹ್ಯಾಶ್‌ಟ್ಯಾಗ್ ಟ್ರೆಂಡ್ ಆಗಿದೆ.

ಶಾರುಖ್ ಖಾನ್ ಅವರನ್ನು ಟೀಕಿಸಿ ಹಲವರು ಟ್ವೀಟ್ ಮಾಡಿದ್ದು, ಅವರು ದೇಶದ ಕ್ರಿಕೆಟಿಗರಿಗೆ ಬೆಂಬಲ ನೀಡುತ್ತಿಲ್ಲ, ಶಾರುಖ್ ಸಿನಿಮಾಗಳನ್ನು ಬಹಿಷ್ಕರಿಸಿ ಎಂಬ ಟ್ವೀಟ್‌ಗಳನ್ನು ಮಾಡಿದ್ದಾರೆ.

ಶಾರುಖ್ ಬಹಿಷ್ಕರಿಸಿ ಎನ್ನುವ ಟ್ವೀಟ್ ಹ್ಯಾಶ್‌ಟ್ಯಾಗ್ ಟ್ರೆಂಡ್ ಆದ ಬೆನ್ನಲ್ಲೇ, ನಟನ ಅಭಿಮಾನಿಗಳು, #WeLoveSRK ಎಂಬ ಹ್ಯಾಶ್‌ಟ್ಯಾಗ್ ಮೂಲಕ ಶಾರುಖ್ ಖಾನ್ ಅವರನ್ನು ಬೆಂಬಲಿಸಿ ಟ್ವೀಟ್ ಮಾಡಲಾರಂಭಿಸಿದ್ದಾರೆ.

ಶಾರುಖ್ ಖಾನ್ ಪರ ಮತ್ತು ವಿರೋಧದ ‌ಟ್ವೀಟ್ ಸಮರದಿಂದ ಅಭಿಮಾನಿಗಳ ಮಧ್ಯೆ ಪೈಪೋಟಿ ಕೂಡ ಆರಂಭವಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು