ಇನ್ಸ್ಟಾಗ್ರಾಂನಲ್ಲಿ 30 ಕೋಟಿ ಫಾಲೋವರ್ಸ್ ಪಡೆದ ಕ್ರಿಸ್ಟಿಯಾನೊ ರೊನಾಲ್ಡೊ

ಬೆಂಗಳೂರು: ಯುರೋ ಕಪ್ ಫುಟ್ಬಾಲ್ ಪಂದ್ಯಾವಳಿಯ ಸಂದರ್ಭದಲ್ಲಿ ಕೊಕಾ ಕೋಲಾ ಕುರಿತ ವಿಚಾರವಾಗಿ ಸುದ್ದಿಯಲ್ಲಿರುವ ಖ್ಯಾತ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಈಗ ಮತ್ತೊಮ್ಮೆ ಫೇಮಸ್ ಆಗಿದ್ದಾರೆ.
ಇನ್ಸ್ಟಾಗ್ರಾಂನಲ್ಲಿ ಕ್ರಿಸ್ಟಿಯಾನೊ ರೊನಾಲ್ಡೊ ಹಿಂಬಾಲಕರ ಸಂಖ್ಯೆ 30 ಕೋಟಿಗೆ ತಲುಪಿದ್ದು, ಗರಿಷ್ಠ ಸಂಖ್ಯೆಯ ಫಾಲೋವರ್ಸ್ ಹೊಂದಿದ ಮೊದಲ ಸೆಲೆಬ್ರಿಟಿ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ.
ಫೇಸ್ಬುಕ್ ಒಡೆತನದ ಇನ್ಸ್ಟಾಗ್ರಾಂ ಕಂಪನಿಯ ಖಾತೆಗೆ 33.9 ಕೋಟಿ ಹಿಂಬಾಲಕರು ಇದ್ದಾರೆ. ಆದರೆ ಸೆಲೆಬ್ರಿಟಿಗಳ ಪೈಕಿ 30 ಕೋಟಿಗೂ ಅಧಿಕ ಫಾಲೋವರ್ಸ್ ಹೊಂದಿರುವ ಮೊದಲಿಗ ಎನ್ನುವ ಖ್ಯಾತಿ ಕ್ರಿಸ್ಟಿಯಾನೊ ರೊನಾಲ್ಡೊ ಪಾಲಾಗಿದೆ.
ಕ್ರಿಸ್ಟಿಯಾನೊ ರೊನಾಲ್ಡೊ ನಂತರದ ಸ್ಥಾನದಲ್ಲಿ ಅರಿಯಾನಾ ಗ್ರಾಂಡೆ ಇದ್ದು, 17.3 ಕೋಟಿ ಫಾಲೋವರ್ಸ್ ಪಡೆದಿದ್ದಾರೆ.
ಕ್ರಿಸ್ಟಿಯಾನೊ ರೊನಾಲ್ಡೊಗೂ ಮೊದಲೇ ನೀರು ಕುಡಿಯಿರಿ ಎಂದಿದ್ದ ಅಮೃತಾ ರಾವ್!
ಯುರೋ ಕಪ್ ಫುಟ್ಬಾಲ್ ಟೂರ್ನಿಯಲ್ಲಿ ಕೊಕಾ ಕೋಲಾ ತ್ಯಜಿಸಿ, ನೀರು ಕುಡಿಯಿರಿ ಎಂದು ಕ್ರಿಸ್ಟಿಯಾನೊ ರೊನಾಲ್ಡೊ ಹೇಳಿರುವುದು ಚರ್ಚೆಯಲ್ಲಿದೆ.
ನೀರು ಕುಡಿಯಿರಿ ಎಂದ ರೊನಾಲ್ಡೊ: ಕೋಕಾ ಕೋಲಾ ಕಂಪನಿಗೆ ₹29 ಸಾವಿರ ಕೋಟಿ ನಷ್ಟ!
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.