ಶನಿವಾರ, 2 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟ್ವಿಟರ್‌ ಮಾರಾಟ: ಸಾಮಾಜಿಕ ಜಾಲತಾಣಗಳಲ್ಲಿ ಮೀಮ್ಸ್‌

Last Updated 28 ಅಕ್ಟೋಬರ್ 2022, 21:30 IST
ಅಕ್ಷರ ಗಾತ್ರ

ನವದೆಹಲಿ: ಇಲಾನ್‌ ಮಸ್ಕ್‌ ಟ್ವಿಟರ್‌ ಕಂಪನಿಯನ್ನು ಖರೀದಿಸಿರುವ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಬಗೆ ಬಗೆಯ ಮೀಮ್ಸ್‌ಗಳು ಹರಿದಾಡುತ್ತಿವೆ. ತಮಾಷೆಯ ವಿಡಿಯೊಗಳು ಮತ್ತು ಪೋಸ್ಟ್‌ಗಳು ಗಮನ ಸೆಳೆಯುತ್ತಿವೆ.

ಮಸ್ಕ್‌ ವೇಷ ತೊಟ್ಟ ವ್ಯಕ್ತಿಯೊಬ್ಬ ಕಾರಿನ ಕಿಟಕಿಯಿಂದ ತಲೆಯನ್ನು ಹೊರಗೆ ಹಾಕಿ ಮಾರಾಟಗಾರನಿಂದ ಹಕ್ಕಿಗಳನ್ನು ಖರೀದಿಸಿ ಒಂದೊಂದಾಗಿಯೇ ಹೊರಬಿಡುತ್ತಿರುವ ಮೀಮ್ಸ್‌ ಮಾಡಲಾಗಿದೆ.

ಮಸ್ಕ್‌ ಅವರು ಟ್ವಿಟರ್ ಖರೀದಿಸಿದ್ದು, ಆ ಬಳಿಕ ಉನ್ನತ ಹುದ್ದೆಯಲ್ಲಿದ್ದವರನ್ನು ವಜಾ ಮಾಡಿರುವುದನ್ನು ಬಾಲಿವುಡ್‌ ನಟ ಗೋವಿಂದ ಅವರ ಚಲನಚಿತ್ರದ ತುಣುಕೊಂದನ್ನು ಬಳಸಿಕೊಂಡು ಮೀಮ್ಸ್‌ ಮಾಡಲಾಗಿದೆ. ಚಿತ್ರದಲ್ಲಿ ಗೋವಿಂದ ಅವರು ಪ್ರತಿ
ಯೊಂದು ಕ್ಯಾಬಿನ್‌ಗೂ ಹೋಗಿ ಅಲ್ಲಿದ್ದ ನೌಕರರನ್ನು ವಜಾ ಮಾಡುವ ಸನ್ನಿವೇಶ ಇದೆ.

ಪರಾಗ್‌ ಅವರು ಟ್ವಿಟರ್‌ ಮುಖ್ಯ ಕಚೇರಿಯ ಎದುರು ‘ಅಗ್ರವಾಲ್‌ ಸ್ವೀಟ್ಸ್‌ ಶಾಪ್‌’ ತೆಗೆದಿರುವ ಚಿತ್ರವೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ‘#ParagAgrawal is back with a bang in front of Twitter HQ’ ಎನ್ನುವ ಶೀರ್ಷಿಕೆ ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT