ಬುಧವಾರ, ಡಿಸೆಂಬರ್ 7, 2022
21 °C

ಅಮೆರಿಕದ ಮಾಜಿ ಅಧ್ಯಕ್ಷ ಟ್ರಂಪ್‌ ಟ್ವಿಟರ್‌ ಖಾತೆ ವಾಪಸ್‌: ಇಲಾನ್ ಮಸ್ಕ್

ಪಿಟಿಐ  Updated:

ಅಕ್ಷರ ಗಾತ್ರ : | |

ನವದೆಹಲಿ: ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಟ್ವಿಟರ್ ಖಾತೆಯನ್ನು ಮರುಸ್ಥಾಪಿಸಲಾಗಿದೆ ಎಂದು ಟ್ವಿಟರ್ ಕಂಪನಿಯ ಮಾಲೀಕ ಇಲಾನ್ ಮಸ್ಕ್‌ ಹೇಳಿದ್ದಾರೆ. 

ಟ್ರಂಪ್ ಅವರನ್ನು ಮತ್ತೆ ಸಾಮಾಜಿಕ ಮಾಧ್ಯಮ ವೇದಿಕೆಗೆ ಮರಳಿ ಕರೆತರುವ ಕುರಿತು ಸಮೀಕ್ಷೆ ನಡೆಸಿ, ಟ್ವಿಟರ್‌ ಬಳಕೆದಾರರ ಪ್ರತಿಕ್ರಿಯೆ ಆಧರಿಸಿ ಟ್ರಂಪ್‌ ಟ್ವಿಟರ್ ಖಾತೆಯನ್ನು ಮರುಸ್ಥಾಪಿಸಲಾಗುವುದು ಎಂದು ಮಸ್ಕ್‌ ಶನಿವಾರ ಹೇಳಿದ್ದರು. 

ಟ್ರಂಪ್ ಟ್ವಿಟರ್ ಖಾತೆ ಮರುಸ್ಥಾಪಿಸಬೇಕೆ ಎಂದು ಮಸ್ಕ್ ಕೇಳಿದ್ದ ಪ್ರಶ್ನೆಗೆ ಉತ್ತರವಾಗಿ 15 ಮಿಲಿಯನ್‌ಗಿಂತಲೂ ಹೆಚ್ಚು ಮಂದಿ ಪ್ರತಿಕ್ರಿಯಿಸಿದ್ದಾರೆ. ಟ್ರಂಪ್ ಟ್ವಿಟರ್‌ಗೆ ಮರಳುವ ಪರವಾಗಿ ಶೇ 52ರಷ್ಟು ಜನರು ಸಮ್ಮತಿ ಸೂಚಿಸಿದ್ದಾರೆ. ಈ ಫಲಿತಾಂಶ ಆಧರಿಸಿ 22 ತಿಂಗಳ ಕಾಲ ಅಮಾನತುಗೊಂಡಿದ್ದ ಟ್ರಂಪ್ ಟ್ವಿಟ್ಟರ್ ಖಾತೆಯನ್ನು ಮರುಸ್ಥಾಪಿಸಲಾಗಿದೆ. 

2021ರ ಜನವರಿ 6ರಂದು ಯುಎಸ್ ಕ್ಯಾಪಿಟಲ್‌ನಲ್ಲಿ ನಡೆದ ಗಲಭೆ ಕುರಿತು ಪ್ರಚೋದನಾಕಾರಿ ಪೋಸ್ಟ್ ಪ್ರಕಟಿಸಿದಕ್ಕಾಗಿ ಟ್ರಂಪ್ ಟ್ವಿಟರ್‌ ಖಾತೆಯನ್ನು ನಿರ್ಬಂಧಿಸಲಾಗಿತ್ತು. 2021ರ ಜನವರಿ 8ರಂದು ಟ್ರಂಪ್ ಮಾಡಿದ್ದ ಟ್ವೀಟ್ ಕೊನೆಯದ್ದಾಗಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು