ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ಟ್ವಿಟರ್‌ ಬ್ಲೂ' ಮಾಸಿಕ ಚಂದಾದಾರಿಕೆ ಸೇವೆ ಆರಂಭ

Last Updated 6 ನವೆಂಬರ್ 2022, 3:24 IST
ಅಕ್ಷರ ಗಾತ್ರ

ನವದೆಹಲಿ: ಟ್ವಿಟರ್‌ನಲ್ಲಿ ವೆರಿಫೈಡ್ ಖಾತೆಗಳಿಗೆ (ಬ್ಲೂ ಟಿಕ್) ಮಾಸಿಕ ಎಂಟು ಡಾಲರ್ ಶುಲ್ಕ ವಿಧಿಸಲಾಗುವುದು ಎಂದು ಘೋಷಿಸಿದ್ದ ನೂತನ ಮಾಲೀಕ ಎಲಾನ್ ಮಸ್ಕ್, ಈಗ ಈ ಪ್ರಕ್ರಿಯೆಗೆ ಐಒಎಸ್ ಮೂಲಕ ಚಾಲನೆ ನೀಡಿದ್ದಾರೆ.

ಸದ್ಯ ಐಫೋನ್‌ಗಳಲ್ಲಿ ಮಾತ್ರ 'ಟ್ವಿಟರ್ ಬ್ಲೂ' ಚಂದಾದಾರಿಕೆ ಸೇವೆ ಲಭ್ಯವಿದೆ.

ಆ್ಯಪಲ್ ಆ್ಯಪ್ ಸ್ಟೋರ್‌ನಲ್ಲಿ ಬಳಕೆದಾರರಿಗೆ ಹೊಸ 'ಟ್ವಿಟರ್ ಬ್ಲೂ' ಅಪ್‌ಡೇಟ್ ಕಾಣಿಸಿಕೊಂಡಿದೆ. ಪ್ರಸ್ತುತ ಚಂದಾದಾರಿಕೆ ಸೇವೆ ಸದ್ಯ ಅಮೆರಿಕ, ಕೆನಡಾ, ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಬ್ರಿಟನ್‌ನಲ್ಲಿ ಲಭ್ಯವಿದೆ.

ಈ ಕುರಿತು ಟ್ವೀಟ್ ಮಾಡಿರುವ ಎಲಾನ್ ಮಸ್ಕ್ 'ಜನರಿಗೆ ಅಧಿಕಾರ' ಎಂದು ಹೇಳಿದ್ದಾರೆ. ಸೆಲೆಬ್ರಿಟಿ, ಕಂಪನಿ, ರಾಜಕಾರಣಿಗಳಂತೆಯೇ ನಿಮ್ಮ ಖಾತೆಯು ಬ್ಲೂ ಟಿಕ್ ಮಾರ್ಕ್ ಪಡೆಯಲಿದೆ ಎಂದು ಟ್ವಿಟರ್ ಹೇಳಿದೆ.

ಐಫೋನ್‌ನಲ್ಲಿ ಬಳಕೆದಾರರಿಗೆ ಹೊಸ ಟ್ವಿಟರ್ ಬ್ಲೂ ವರ್ಷನ್‌ಗೆ ಮಾಸಿಕ ಎಂಟು ಡಾಲರ್ ಶುಲ್ಕದೊಂದಿಗೆ ಸೈನ್ ಅಪ್ ಆಗುವ ಚಂದಾದಾರಿಕೆ ಸೇವೆ ಆರಂಭಿಸಲಾಗಿದೆ. ಇದರಲ್ಲಿ ಜಾಹೀರಾತು ಕಡಿಮೆಯಿರಲಿದೆ.

ಟ್ವಿಟರ್ ಚಿತ್ರ
ಟ್ವಿಟರ್ ಚಿತ್ರ

ಮಾನವ ಹಕ್ಕುಗಳಿಗೆ ಗೌರವಿಸಲು ಟ್ವಿಟರ್‌ಗೆ ವಿಶ್ವಸಂಸ್ಥೆ ಮನವಿ...
ಟ್ವಿಟರ್ ಕಂಪನಿಯು ಅರ್ಧದಷ್ಟು ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕಿತ್ತು. ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಹೈಕಮಿಷನ್ ವೋಲ್ಕರ್ ಟರ್ಕ್, ಮೈಕ್ರೋಬ್ಲಾಗಿಂಗ್ ತಾಣವು ಮಾನವ ಹಕ್ಕುಗಳನ್ನು ಗೌರವಿಸುವಂತೆ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT