ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Trump Youtube: ಡೊನಾಲ್ಡ್ ಟ್ರಂಪ್ ಯೂಟ್ಯೂಬ‌್‌ ಕೂಡ ಸ್ಥಗಿತ!

Last Updated 13 ಜನವರಿ 2021, 7:10 IST
ಅಕ್ಷರ ಗಾತ್ರ

ನ್ಯೂಯಾರ್ಕ್: ಅಮೆರಿಕದ ಅಧ್ಯಕ್ಷ ಹುದ್ದೆಗೆ ಎರಡನೇ ಅವಧಿಗೆ ಸ್ಪರ್ಧಿಸಿದ ದಿನದಿಂದಲೂ ಡೊನಾಲ್ಡ್ ಟ್ರಂಪ್ ಸದಾ ಒಂದಿಲ್ಲೊಂದು ವಿವಾದಕ್ಕೆ ಸುದ್ದಿಯಾಗುತ್ತಿದ್ದಾರೆ. ಜನವರಿ ಮೊದಲ ವಾರದಲ್ಲಿ ಟ್ರಂಪ್ ಬೆಂಬಲಿಗರು ಅಮೆರಿಕದ ಕ್ಯಾಪಿಟಲ್ ಕಟ್ಟಡದ ಮೇಲೆ ದಾಳಿ ನಡೆಸಿದ್ದರು. ಹಿಂಸಾಚಾರದಲ್ಲಿ ಐವರು ಬಲಿಯಾಗಿದ್ದರು. ಅದರ ಬೆನ್ನಲ್ಲೇ ಡೊನಾಲ್ಡ್ ಟ್ರಂಪ್ ಟ್ವಿಟರ್ ಖಾತೆಯನ್ನು ಸ್ಥಗಿತಗೊಳಿಸಲಾಗಿತ್ತು. ಅದಾದ ಬಳಿಕ ಟ್ರಂಪ್ ಯೂಟ್ಯೂಬ್ ಖಾತೆಯನ್ನು ಕೂಡ 7 ದಿನಗಳ ಕಾಲ ಸ್ಥಗಿತಗೊಳಿಸಿದೆ.

ಸಾಮಾಜಿಕ ತಾಣಗಳಿಂದ ಬಹಿಷ್ಕಾರ

ಡೊನಾಲ್ಡ್ ಟ್ರಂಪ್ ತಮ್ಮ ಅಧಿಕೃತ ಖಾತೆಯಿಂದ ಪ್ರಚೋದನಾತ್ಮಕ ಹೇಳಿಕೆ ನೀಡುತ್ತಿದ್ದಾರೆ ಎನ್ನುವ ಆರೋಪ ಒಂದೆಡೆಯಾದರೆ, ಮತ್ತೊಂದೆಡೆ ಸಾಮಾಜಿಕ ಜಾಲತಾಣಗಳ ನಿಯಮಗಳನ್ನು ಪಾಲಿಸಿಲ್ಲ ಎಂದು ಟ್ರಂಪ್ ಟ್ವಿಟರ್ ಖಾತೆಯನ್ನು ಶಾಶ್ವತವಾಗಿ ಸ್ಥಗಿತಗೊಳಿಸಲಾಗಿದೆ. ಅಲ್ಲದೆ, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂ ಖಾತೆಯನ್ನು ಕೂಡ ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ.

ಟ್ರಂಪ್ ಹೊಂದಿದ್ದ ಸ್ನ್ಯಾಪ್‌ಚಾಟ್, ರೆಡ್ಡಿಟ್ ಮತ್ತು ಟ್ವಿಚ್ ಖಾತೆ ಕೂಡ ತಾತ್ಕಾಲಿಕ ನಿಷೇಧಕ್ಕೆ ಸಿಲುಕಿದೆ. ಅದರ ಬೆನ್ನಲೇ, ಗೂಗಲ್ ಒಡೆತನದ ಯೂಟ್ಯೂಬ್ ಕೂಡ ಟ್ರಂಪ್ ಚಾನಲ್ ಅನ್ನು ಏಳು ದಿನಗಳ ಅವಧಿಗೆ ಸ್ಥಗಿತಗೊಳಿಸಿದೆ.

ಯೂಟ್ಯೂಬ್ ನಿರ್ಬಂಧ

ಡೊನಾಲ್ಡ್ ಟ್ರಂಪ್ ಯೂಟ್ಯೂಬ್ ಖಾತೆಯಲ್ಲಿ ಹೊಸ ವಿಡಿಯೋ ಪೋಸ್ಟ್ ಮಾಡುವಂತಿಲ್ಲ, ಅಲ್ಲದೆ, ಕಾಮೆಂಟ್ಸ್ ನಿರ್ಬಂಧಿಸಲಾಗಿದೆ. ಟ್ರಂಪ್ ಯೂಟ್ಯೂಬ್‌ಗೆ 28 ಲಕ್ಷ ಚಂದಾದಾರರಿದ್ದಾರೆ. ಯೂಟ್ಯೂಬ್ ಪಾಲಿಸಿಯನ್ನು ಪಾಲಿಸದ ಟ್ರಂಪ್ ಖಾತೆಯನ್ನು ತಾತ್ಕಾಲಿಕವಾಗಿ ವಾರದ ಮಟ್ಟಿಗೆ ಸ್ಥಗಿತಗೊಳಿಸಿರುವ ಬಗ್ಗೆ ಗೂಗಲ್ ಸ್ಪಷ್ಟನೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT