ಬುಧವಾರ, ಆಗಸ್ಟ್ 10, 2022
21 °C

ಟ್ವಿಟರ್‌ ಟ್ರೆಂಡ್ #TuluOfficialinKA_KL: ತುಳು ಭಾಷೆ ಮಾನ್ಯತೆಗೆ ಒತ್ತಾಯ

ಪ್ರಜಾವಾಣಿ ವೆಬ್‌ ಡೆಸ್ಕ್ Updated:

ಅಕ್ಷರ ಗಾತ್ರ : | |

PV Photo

ಬೆಂಗಳೂರು: ತುಳು ಭಾಷೆಗೆ ಅಧಿಕೃತ ಮಾನ್ಯತೆ ನೀಡಬೇಕು ಹಾಗೂ ಕರ್ನಾಟಕ ಮತ್ತು ಕೇರಳದಲ್ಲಿ ತುಳು ಭಾಷೆಯನ್ನು ಅಧಿಕೃತ ಎಂದು ಘೋಷಿಸಬೇಕು ಎಂದು ಒತ್ತಾಯಿಸಿ ಭಾನುವಾರ ಜೂನ್ 13ರಂದು ಟ್ವೀಟ್ ಅಭಿಯಾನ ನಡೆಯುತ್ತಿದೆ.

#TuluOfficialinKA_KL ಎಂಬ ಹ್ಯಾಶ್‌ಟ್ಯಾಗ್ ಅಡಿಯಲ್ಲಿ ಜನರು ಟ್ವೀಟ್ ಮಾಡುತ್ತಿದ್ದು, ಬೆಳಗ್ಗೆ 6 ಗಂಟೆಯಿಂದ ಆರಂಭವಾದ ಅಭಿಯಾನ ರಾತ್ರಿ 12ರವರೆಗೆ ನಡೆಯಲಿದೆ.

ಮಧ್ಯಾಹ್ನದವರೆಗೆ #TuluOfficialinKA_KL ಟ್ರೆಂಡ್ ಆಗಿದ್ದು, ಬೆಳಗ್ಗಿನಿಂದ ಮಧ್ಯಾಹ್ನದವರೆಗೆ 1 ಲಕ್ಷಕ್ಕೂ ಅಧಿಕ ಟ್ವೀಟ್ ಮಾಡಲಾಗಿದೆ. ಟ್ವಿಟರ್ ಇಂಡಿಯಾ ಟ್ರೆಂಡ್‌ನಲ್ಲಿ #TuluOfficialinKA_KL ಹ್ಯಾಶ್‌ಟ್ಯಾಗ್ ಜನಪ್ರಿಯತೆ ಪಡೆದುಕೊಂಡಿದೆ.

ತುಳು ಭಾಷೆಗೆ ಮಾನ್ಯತೆ ಕೋರಿ ಟ್ವೀಟ್ ಮಾಡಿರುವವರು ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಸಿಎಂ ಬಿಎಸ್ ಯಡಿಯೂರಪ್ಪ ಹಾಗೂ ಕರಾವಳಿ ಭಾಗದ ಸಂಸದರನ್ನು ಟ್ಯಾಗ್ ಮಾಡಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು