ಮ್ಯಾಗಿ ಅಂದ್ರೆ ಯಾರಿಗೆ ಇಷ್ಟವಿಲ್ಲ ಹೇಳಿ. ತ್ವರಿತವಾಗಿ ಆಗುವ ಮ್ಯಾಗಿ ಅಂದ್ರೆ ಸಣ್ಣ ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಬಾಯಿ ಚಪ್ಪರಿಕೊಂಡು ತಿನ್ನುತ್ತಾರೆ. ಈ ನ್ಯೂಡಲ್ಸ್ ಕೇವಲ ಆಹಾರವಲ್ಲ, ಬದಲಿಗೆ ಅದೊಂದು ಭಾವನೆ ಎಂಬುದನ್ನು ಮ್ಯಾಗಿ ಪ್ರಿಯರೇ ಒಪ್ಪುತ್ತಾರೆ. ಈಗ ಅದೇ ಮ್ಯಾಗಿಯದ್ದೇ ವಿಚಾರಕ್ಕೆ ಟ್ವೀಟೊಂದು ಹಲವರ ಗಮನ ಸೆಳೆಯುತ್ತಿದೆ. ನೀವು ಕೂಡ ಮ್ಯಾಗಿ ಪ್ರಿಯರಾಗಿದ್ದರೆ ಈ ಸುದ್ದಿ ಓದಿ...

ಟ್ವಿಟರ್ ಬಳಕೆದಾರ ಸುಶಾಂತ್ ದ್ವಿವೇದಿ ಎಂಬುವವರು ಒಂದೇ ಮ್ಯಾಗಿ ಪ್ಯಾಕೆಟ್ನಲ್ಲಿ ಎರಡು ಮಸಾಲ ಸ್ಯಾಚೆಗಳು ಲಭ್ಯವಾಗಿರುವುದನ್ನು ಫೊಟೊ ಸಮೇತ ಟ್ವೀಟ್ ಮಾಡಿದ್ದಾರೆ.

'ನಿಜವಾಗಿಯೂ, ನಾನೇನು ಇದನ್ನು ಬೇಕಂತ ಮುನ್ನೆಲೆಗೆ ತರುತ್ತಿಲ್ಲ. ಆದರೆ ನನ್ನ ಮ್ಯಾಗಿ ಪ್ಯಾಕೇಟ್ನಲ್ಲಿ ಎರಡು ಮಸಾಲ ಸ್ಯಾಚೆಗಳು ಲಭ್ಯವಾಗಿವೆ' ಎಂದು ಬರೆದುಕೊಂಡಿದ್ದಾರೆ.

ಇದನ್ನು ನೋಡಿದ ಟ್ವೀಟಿಗರು ತರಹೇವಾರಿ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ಟ್ವೀಟ್ ಮಾಡಿದಾಗಿನಿಂದ ಈವರೆಗೂ 9,200 ಜನರು ಲೈಕ್ ಮಾಡಿದ್ದು, 727 ಜನರು ಕಮೆಂಟ್ ಮತ್ತು 749 ಜನರು ರೀಟ್ವೀಟ್ ಮಾಡಿದ್ದಾರೆ.

ಯಾವುದಾದರೂ ಒಂದನ್ನು ಆಯ್ಕೆ ಮಾಡಿ ಎಂದು ಟ್ವಿಟರ್ ಬಳಕೆದಾರರೊಬ್ಬರು ಸಲಹೆ ನೀಡಿದ್ದಾರೆ.
ಮತ್ತೊಬ್ಬರು ಕಳೆದ ಕೆಲ ತಿಂಗಳ ಹಿಂದೆ ನನಗೂ ಕೂಡ ಎರಡು ಮಸಾಲಾ ಸ್ಯಾಚೆಗಳು ಸಿಕ್ಕಿದ್ದವು ಎಂದು ಹೇಳಿದ್ದಾರೆ.

ಇತರರು ನೀಡಿರುವ ಪ್ರತಿಕ್ರಿಯೆಗಳು ಹೀಗಿವೆ ನೋಡಿ...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.