ಇನ್‌ಸ್ಟಾಗ್ರಾಂ ಸೇವೆ ವ್ಯತ್ಯಯ: ಟ್ವಿಟರ್‌ನಲ್ಲಿ ಪೇಚಾಡಿದ ಬಳಕೆದಾರರು

7

ಇನ್‌ಸ್ಟಾಗ್ರಾಂ ಸೇವೆ ವ್ಯತ್ಯಯ: ಟ್ವಿಟರ್‌ನಲ್ಲಿ ಪೇಚಾಡಿದ ಬಳಕೆದಾರರು

Published:
Updated:

ಫೋಟೊ ಮತ್ತು ವಿಡಿಯೊಗಳನ್ನು ಪ್ರಕಟಿಸಿಕೊಳ್ಳಲು ಇರುವ ಫೇಸ್‌ಬುಕ್‌ನ ಸಾಮಾಜಿಕ ಸಂಪರ್ಕ ತಾಣ ಇನ್‌ಸ್ಟಾಗ್ರಾಂ ಪುಟಗಳಿಗೆ ಭೇಟಿ ನೀಡಲು ಸಾಧ್ಯವಾಗದೆ ಜಗತ್ತಿನಾದ್ಯಂತ ಬುಧವಾರ ಬಳಕೆದಾರರು ಪೇಚಾಡಿಕೊಂಡರು. 

ತನ್ನ ನೆಚ್ಚಿನ ಸ್ಟಾರ್‌ಗಳು, ಸ್ನೇಹಿತರು, ಪ್ರೀತಿಪಾತ್ರರ ಹೊಸ ಫೋಟೊಗಳನ್ನು ಕಾಣಲಾಗದೆ ಸಾಮಾಜಿಕ ಮಾಧ್ಯಮ ಟ್ವಿಟರ್‌ನಲ್ಲಿ ತಮ್ಮ ಅಳಲು ತೋಡಿಕೊಂಡರು. ಭಾರತ, ಅಮೆರಿಕ, ಇಂಗ್ಲೆಂಡ್‌, ಸಿಂಗಾಪುರ, ಆಸ್ಟ್ರೇಲಿಯಾ ಸೇರಿದಂತೆ ಜಗತ್ತಿನ ಹಲವು ಭಾಗಗಳಲ್ಲಿ ಸುಮಾರು ಒಂದು ಗಂಟೆ ಇನ್‌ಸ್ಟಾಗ್ರಾಂ ಸೇವೆ ಕಡಿತಗೊಂಡಿತ್ತು. ಇನ್‌ಸ್ಟಾಗ್ರಾಂಡೌನ್‌ ಹ್ಯಾಷ್‌ಟ್ಯಾಗ್‌ (#instagramdown) ಟ್ವಿಟರ್‌ನಲ್ಲಿ ಟ್ರೆಂಡ್‌ ಆಗಿದ್ದು, ಇನ್‌ಸ್ಟಾ ಬಳಕೆದಾರರು ತಮ್ಮ ಅಳಲು–ದೂರುಗಳನ್ನು ಇದೇ ಹ್ಯಾಷ್‌ಟ್ಯಾಗ್‌ ಬಳಸಿ ಪ್ರಕಟಸಿಕೊಂಡಿದ್ದಾರೆ. 

ಇನ್‌ಸ್ಟಾಗ್ರಾಂ ಆ್ಯಪ್‌ “couldn't refresh feed” ಎಂಬ ಎರರ್‌ ಮೆಸೇಜ್‌ ತೋರಿಸಿದರೆ, ವೆಬ್‌ಸೈಟ್‌ ಪುಟ ಬಳಕೆದಾರರಿಗೆ ತೆರೆದುಕೊಳ್ಳಲೇ ಇಲ್ಲ. ಡೌನ್‌ಡಿಟೆಕ್ಟರ್‌ ವೆಬ್‌ಸೈಟ್‌ ಸಹ, ಇನ್‌ಸ್ಟಾಗ್ರಾಂ ಸೇವೆ ವ್ಯತ್ಯಯವನ್ನು ದಾಖಲಿಸಿದೆ. ಲೈವ್‌ ಮ್ಯಾಪ್‌ ಕೂಡ ಪ್ರಕಟಿಸಿದ್ದು, ಉತ್ತರ ಅಮೆರಿಕ, ಯುರೋಪ್‌, ಆಸ್ಟ್ರೇಲಿಯಾ, ಭಾರತ, ಸಿಂಗಾಪುರ ಸೇರಿದಂತೆ ವಿವಿಧ ಭಾಗಗಳಲ್ಲಿ ಇನ್‌ಸ್ಟಾಗ್ರಾಂ ಸೇವೆಯ ವ್ಯತ್ಯಯವನ್ನು ಗಮನಿಸಬಹುದಾಗಿದೆ. 

ಪ್ರಸ್ತುತ ಈ ಆ್ಯಪ್‌ನ್ನು ಜಗತ್ತಿನಾದ್ಯಂತ 100 ಕೋಟಿ ಜನರು ಬಳಸುತ್ತಿದ್ದಾರೆ. ಸಂದೇಶ ರವಾನೆ ಹಾಗೂ ಚಿಕ್ಕ ವಿಡಿಯೊಗಳನ್ನು ಹಂಚಿಕೊಳ್ಳುವ ಅವಕಾಶವನ್ನು ಒದಗಿಸುತ್ತಿದ್ದಂತೆ ಬಳಕೆದಾರರ ಸಂಖ್ಯೆ ಇನ್ನಷ್ಟು ಹೆಚ್ಚಳವಾಗಿದೆ. ಬುಧವಾರ ಮಧ್ಯಾಹ್ನ 12ರಿಂದ 2 ಗಂಟೆ ವರೆಗೂ ಈ ಸಾಮಾಜಿಕ ಸಂಪರ್ಕ ತಾಣದ ವ್ಯತ್ಯದ ಕುರಿತು ಬಳಕೆದಾರರು ದೂರಿದ್ದಾರೆ. ಇದೀಗ ಸೇವೆ ಮತ್ತೆ ಪ್ರಾರಂಭಗೊಂಡಿದೆ. 

ಇತ್ತೀಚೆಗಷ್ಟೇ ಆ್ಯಡಮ್‌ ಮೊಸೇರಿ ಇನ್‌ಸ್ಟಾಗ್ರಾಂನ ನೂತನ ಮುಖ್ಯಸ್ಥರಾಗಿ ಅಧಿಕಾರ ವಹಿಸಿದ್ದರು.

ಟ್ವಿಟರ್‌ನಲ್ಲಿ ಇನ್‌ಸ್ಟಾಗ್ರಾಂ ಕುರಿತು ಬಳಷ್ಟು ಜೋಕ್‌, ಮೀಮ್‌ಗಳು ಪ್ರಕಟಗೊಂಡಿವೆ:

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !