ಗುರುವಾರ , ಏಪ್ರಿಲ್ 2, 2020
19 °C

‘ಮೋದಿ ವಿಚಾರದಿಂದ ದೇಶ ಹಾಳಾಗ್ತಿದೆ’: ಹರಿಹಾಯ್ದ ರಾಹುಲ್ ಗಾಂಧಿ, ಚಿದಂಬರಂ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ಬಿಜೆಪಿ ಆಡಳಿತವನ್ನು ಟೀಕಿಸಲು ಕಾಂಗ್ರೆಸ್‌ಗೆ ಯೆಸ್ ಬ್ಯಾಂಕ್ ಬಿಕ್ಕಟ್ಟು ಒಂದು ಅಸ್ತ್ರವಾಗಿ ಒದಗಿದೆ. 

ಬ್ಯಾಂಕ್‌ ಹೆಸರಿನಲ್ಲಿರುವ ‘ಯೆಸ್‌’ ಪದವನ್ನೇ ಲೇವಡಿ ಮಾಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ‘ನೋ ಯೆಸ್ ಬ್ಯಾಂಕ್. ಮೋದಿ ಮತ್ತು ಅವರ ವಿಚಾರಗಳು ದೇಶದ ಆರ್ಥಿಕತೆಯನ್ನೇ ಹಾಳು ಮಾಡುತ್ತಿವೆ’ ಎಂದು ಹೇಳಿದ್ದಾರೆ.

ರಾಹುಲ್ ಟ್ವೀಟ್‌ಗೆ ಕಾಮೆಂಟ್ ಮಾಡಿರುವ ಹಲವರು ಯೆಸ್‌ ಬ್ಯಾಂಕ್‌ನ ಆಡಳಿತ ವಿದ್ಯಮಾನಗಳನ್ನು ಸರಿಯಾಗಿ ವರದಿ ಮಾಡದೆ ಮುಚ್ಚಿಟ್ಟ ಮಾಧ್ಯಮಗಳ ವಿರುದ್ಧವೂ ಹರಿಹಾಯ್ದಿದ್ದಾರೆ.

ಮತ್ತೋರ್ವ ಕಾಂಗ್ರೆಸ್ ನಾಯಕ ಪಿ.ಚಿದಂಬರಂ, ‘ಬಿಜೆಪಿಯ ಆಡಳಿತ ಸಾಮರ್ಥ್ಯಕ್ಕೆ ಇದು ನಿದರ್ಶನ’ ಎಂದು ವ್ಯಂಗ್ಯವಾಡಿದ್ದಾರೆ.

‘ಕಳೆದ ಆರು ವರ್ಷಗಳಿಂದ ಬಿಜೆಪಿ ಅಧಿಕಾರದಲ್ಲಿದೆ. ಆಡಳಿತ ನಡೆಸುವ ಮತ್ತು ಹಣಕಾಸು ಸಂಸ್ಥೆಗಳನ್ನು ನಿರ್ವಹಿಸುವ ಅವರ ಸಾಮರ್ಥ್ಯವನ್ನು ಯೆಸ್‌ ಬ್ಯಾಂಕ್ ಬಿಕ್ಕಟ್ಟು ಬಹಿರಂಗಗೊಳಿಸಿದೆ. ಆಗ ಪಿಎಂಸಿ ಬ್ಯಾಂಕ್ ಆಯ್ತು, ಈಗ ಯೆಸ್ ಬ್ಯಾಂಕ್. ಸರ್ಕಾರಕ್ಕೆ ಏನಾದರೂ ಕಾಳಜಿ ಎಂಬುದು ಇದೆಯೇ? ತನ್ನ ಜವಾಬ್ದಾರಿಯಿಂದ ಸರ್ಕಾರ ನುಣುಚಿಕೊಳ್ಳಲು ಸಾಧ್ಯವೇ? ಮತ್ತೊಂದು ಬ್ಯಾಂಕ್ ಇದೇ ಸಾಲಿನಲ್ಲಿದೆಯೇ?’ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

ಇನ್ನಷ್ಟು... 

Explainer | ಯೆಸ್‌ ಬ್ಯಾಂಕ್ ಕುಸಿಯಲು ಎಷ್ಟೆಲ್ಲಾ ಕಾರಣಗಳು? ಮುಂದೇನಾಗುತ್ತೆ?

ಹಣಕಾಸು ಬಿಕ್ಕಟ್ಟಿಗೆ ಸಿಲುಕಿದ ಯೆಸ್‌ ಬ್ಯಾಂಕ್‌– ಗ್ರಾಹಕರಲ್ಲಿ ತೀವ್ರ ಆತಂಕ

ಯೆಸ್‌ ಬ್ಯಾಂಕ್‌ ಬಿಕ್ಕಟ್ಟು; ತೀವ್ರ ತೊಂದರೆಯಲ್ಲಿ ಫೋನ್‌ ಪೇ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು