ಶನಿವಾರ, ಜನವರಿ 23, 2021
20 °C

Parler App: ಗೂಗಲ್ ಪ್ಲೇ ಸ್ಟೋರ್‌ನಿಂದ ಪಾರ್ಲರ್ ಅ್ಯಪ್ ಔಟ್

Deccan Herald Updated:

ಅಕ್ಷರ ಗಾತ್ರ : | |

Credit: AFP File Photo

ಡೊನಾಲ್ಡ್ ಟ್ರಂಪ್ ಬೆಂಬಲಿಗರು ಅಮೆರಿಕದ ಕ್ಯಾಪಿಟಲ್ ಕಟ್ಟಡದ ಮೇಲೆ ದಾಳಿ ನಡೆಸಿದ ಬಳಿಕ ಅವರನ್ನು ಬಂಧಿಸಿ ವಿಚಾರಣೆ ನಡೆಸುವುದು ಸೇರಿದಂತೆ ಅವರ ಸಾಮಾಜಿಕ ತಾಣಗಳ ಮಾಹಿತಿ ಕಲೆಹಾಕಲಾಗುತ್ತಿದೆ. ಅಲ್ಲದೆ, ಕೆಲವರ ಸಾಮಾಜಿಕ ಮಾಧ್ಯಮದ ಖಾತೆ ಸ್ಥಗಿತವಾಗಿದ್ದರೆ, ಮತ್ತೆ ಕೆಲವರ ಖಾತೆಯಲ್ಲಿರುವ ಆಕ್ಷೇಪಾರ್ಹ ಬರಹವನ್ನು ತೆಗೆದುಹಾಕಲಾಗುತ್ತಿದೆ.

ಡೊನಾಲ್ಡ್ ಟ್ರಂಪ್ ಟ್ವಿಟರ್ ಖಾತೆಯನ್ನು ಶಾಶ್ವತವಾಗಿ ರದ್ದುಪಡಿಸಲಾಗಿದ್ದರೆ, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂ ಖಾತೆಯನ್ನು ತಾತ್ಕಾಲಿಕವಾಗಿ ರದ್ದುಪಡಿಸಲಾಗಿದೆ. ಇದರ ಮುಂದುವರಿದ ಕ್ರಮವಾಗಿ ಗೂಗಲ್, ಪ್ಲೇ ಸ್ಟೋರ್‌ನಿಂದ ಪಾರ್ಲರ್ ಅ್ಯಪ್ ಅನ್ನು ತೆಗೆದುಹಾಕಿದೆ.

ಪಾರ್ಲರ್ ತುಂಬಾ ಟ್ರಂಪ್ ಅಭಿಮಾನಿಗಳು!

ಕ್ಯಾಪಿಟಲ್ ಕಟ್ಟಡದ ಮೇಲಿನ ದಾಳಿ ಬಳಿಕ ಅಮೆರಿಕದಲ್ಲಿ ಟ್ವಿಟರ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂ ಖಾತೆಗಳನ್ನು ಬಳಸಿ ಹಿಂಸಾತ್ಮಕ ಮತ್ತು ಗಲಭೆಗೆ ಪ್ರಚೋದನೆ ನೀಡುತ್ತಿದ್ದ ಟ್ರಂಪ್ ಬೆಂಬಲಿಗರ ಖಾತೆಯನ್ನು ಸ್ಥಗಿತಗೊಳಿಸಲಾಗುತ್ತಿದೆ. ಅಲ್ಲದೆ, ಈಗಾಗಲೇ ಪೋಸ್ಟ್ ಮಾಡಿರುವ ಆಕ್ಷೇಪಾರ್ಹ ವಿಚಾರಗಳನ್ನು ತೆಗೆದುಹಾಕಲಾಗುತ್ತಿದೆ. ಹೀಗೆ ಪ್ರಮುಖ ಸಾಮಾಜಿಕ ತಾಣಗಳಲ್ಲಿ ಖಾತೆ ಕಳೆದುಕೊಂಡ ಟ್ರಂಪ್ ಬೆಂಬಲಿಗರು ಅಮೆರಿಕದ ಜನಪ್ರಿಯ ಸಾಮಾಜಿಕ ಜಾಲತಾಣ ಪಾರ್ಲರ್ ಸೇರಿಕೊಂಡಿದ್ದಾರೆ.

ಇದನ್ನೂ ಓದಿ: 

ಗೂಗಲ್ ಪ್ಲೇ ಸ್ಟೋರ್‌ನಿಂದ ಪಾರ್ಲರ್ ಔಟ್

ಪಾರ್ಲರ್ ಅ್ಯಪ್ ಆಕ್ಷೇಪಾರ್ಹ ಕಂಟೆಂಟ್ ಅನ್ನು ತೆಗೆದುಹಾಕುವವರೆಗೂ ಪ್ಲೇ ಸ್ಟೋರ್‌ನಲ್ಲಿ ಸೇರಿಸಿಕೊಳ್ಳುವುದಿಲ್ಲ ಎಂದು ಗೂಗಲ್ ಹೇಳಿದೆ. ಅದೇ ರೀತಿ ಅ್ಯಪಲ್ ಕೂಡ ವಿವರಣೆ ಕೇಳಿ ನೋಟಿಸ್ ನೀಡಿದೆ. ಮತ್ತೊಂದೆಡೆ ಟ್ವಿಟರ್ ಮತ್ತು ಫೇಸ್‌ಬುಕ್, ಗಲಭೆಗೆ ಸಂಬಂಧಿಸಿದ ಪೋಸ್ಟ್ ಅನ್ನು ತೆಗೆದುಹಾಕುತ್ತಿವೆ.

ಇದನ್ನೂ ಓದಿ : 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು