ಭಾನುವಾರ, ಆಗಸ್ಟ್ 1, 2021
21 °C

ಟ್ವಿಟರ್‌ನಲ್ಲಿ ಟ್ರೆಂಡ್‌ ಆದ ‘Rs 8.28’: ಅಸಲಿಗೆ ಏನಿದು?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕಳೆದ 14 ದಿನಗಳಿಂದ ದೇಶದಲ್ಲಿ ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆ ಏರುತ್ತಿದೆ. ಈ ವಿಚಾರ ಈಗ ಟ್ವಿಟರ್‌ನಲ್ಲಿ ಟ್ರೆಂಡ್‌ ಆಗಿದೆ.

ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ 14 ದಿನಗಳಲ್ಲಿ ಪೆಟ್ರೋಲ್‌ ಬೆಲೆ ಲೀಟರ್‌ ಮೇಲೆ ₹7.62 ಹೆಚ್ಚಳವಾಗಿದೆ. ಇನ್ನು ಡೀಸೆಲ್‌ ₹8.28 ಹೆಚ್ಚಳವಾಗಿದೆ. ಈ ವಿಷಯದ ಮೇಲೆ ಟ್ವಿಟರ್‌ ಬಳಕೆದಾರರು ಚರ್ಚೆ ನಡೆಸುತ್ತಿದ್ದಾರೆ. ಅಲ್ಲದೆ, ಮೀಮ್‌ಗಳ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದಾರೆ.

ನವದೆಹಲಿಯಲ್ಲಿ ಶನಿವಾರವೂ ಪೆಟ್ರೋಲ್‌ ದರ ಲೀಟರ್‌ ಮೇಲೆ 51 ಪೈಸೆ ಏರಿಕೆಯಾಗಿದೆ. ಡೀಸೆಲ್‌ 61 ಪೈಸೆ ಏರಿದೆ. ಈಗ ಪೆಟ್ರೋಲ್‌ ಬೆಲೆ ಲೀಟರ್‌ಗೆ ₹78.88 ಆಗಿದ್ದರೆ, ಡೀಸೆಲ್‌ ₹77.67 ಆಗಿದೆ.

ಬೆಂಗಳೂರಿನಲ್ಲಿ ಪೆಟ್ರೋಲ್‌ ಬೆಲೆ ಪ್ರತಿ ಲೀಟರ್‌ಗೆ 57 ಪೈಸೆ ಏರಿದ್ದು ₹81.44 ಆಗಿದೆ. ಡೀಸೆಲ್‌ ಬೆಲೆ 62 ಪೈಸೆ ಏರಿಕೆಯಾಗಿದ್ದು, ₹73.86 ಆಗಿದೆ.

ಇಂಧನ ದರ ಏರಿಕೆ ಕುರಿತು ಸ್ವಾರಸ್ಯಕರ ಚರ್ಚೆಗಳು ಇಲ್ಲಿವೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು