ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಲಸ ಕೊಡಿ ಎಂದು ಟ್ವಿಟರ್‌ನಲ್ಲಿ‌ ಪ್ರಧಾನಿ ಮೋದಿಯ ದುಂಬಾಲು ಬಿದ್ದ ದೇಶದ ಯುವಜನ

Last Updated 3 ಸೆಪ್ಟೆಂಬರ್ 2020, 17:00 IST
ಅಕ್ಷರ ಗಾತ್ರ

ಬೆಂಗಳೂರು: ‘ಉದ್ಯೋಗ ಕೊಡಿ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಕೇಳುವ ಟ್ರೆಂಡ್‌ ಟ್ವಿಟರ್‌ನಲ್ಲಿ ಗುರುವಾರ ಸಾಕಷ್ಟು ಜೋರಾಗಿತ್ತು.#PMModi_RozgarDo (ಪ್ರಧಾನಿ ಮೋದಿ ಉದ್ಯೋಗ ಕೊಡಿ) ಎಂಬ ಹ್ಯಾಶ್‌ಟ್ಯಾಗ್‌ ಬಳಸಿರಾತ್ರಿ 8 ಗಂಟೆ ವೇಳೆಗೆ 15.4 ಲಕ್ಷ ಟ್ವೀಟ್‌ ದಾಖಲಾದವು. 4 ತಾಸು ಟ್ವಿಟರ್‌ ಇಂಡಿಯಾದಲ್ಲಿ ಅದು ಅಗ್ರ‌ ಟ್ರೆಂಡಿಂಗ್‌ನಲ್ಲಿತ್ತು. ಜತೆಗೆ #Nation_Hate_Modi ಹ್ಯಾಶ್‌ಟ್ಯಾಗ್ ಕೂಡ ಟ್ರೆಂಡ್ ಸೃಷ್ಟಿಸಿತ್ತು.

ಕೊರೊನಾ ಹಾಗೂ ಅದರಿಂದ ಸೃಷ್ಟಿಯಾಗಿರುವ ಆರ್ಥಿಕ ಬಿಕ್ಕಟ್ಟಿನಿಂದ ಯುವಕರಿಗೆ ಉದ್ಯೋಗ ಸಿಗುತ್ತಿಲ್ಲ ಎಂದಿರುವ ಟ್ವೀಟಿಗರು, ನೌಕರಿ ಕೊಡಿ ಎಂದು ನೇರವಾಗಿಯೇ ಪ್ರಧಾನಿ ಬಳಿ ಮೊರೆ ಇಟ್ಟಿದ್ದಾರೆ. ಲಕ್ಷಾಂತರ ಯುವಕರು ಪ್ರಧಾನಿ ಮೋದಿಯವರ ಅಧಿಕೃತ ಖಾತೆಗೆ ಟ್ಯಾಗ್‌ ಮಾಡಿದ್ದಾರೆ.

‘ಉದ್ಯೋಗಗಳು ಎಲ್ಲಿವೆ ಎಂದು ಕೇಳಲುದೇಶ ಬಯಸುತ್ತದೆ. ದೇಶದ ಜನರಿಗೆ ಉದ್ಯೋಗ ಬೇಕೇ
ಹೊರತು ಸುಳ್ಳುಗಳಲ್ಲ. ಪ್ರತಿದಿನ ಸರ್ಕಾರಿ ಉದ್ಯೋಗ
ಗಳು ಕಡಿಮೆಯಾಗುತ್ತಿವೆ. ವಿದ್ಯಾರ್ಥಿಗಳ ಜೀವನದ ಜೊತೆ ಆಟವಾಡಬೇಡಿ’ ಎಂದು ದಿಲೀಪ್ ಸತ್ತಾವನ್ (@dilip007meena) ಟ್ವೀಟ್ ಮಾಡಿದ್ದಾರೆ.

ರೋಹಿತ್ ತ್ರಿಪಾಠಿ (@RohitTr34741425) ಎಂಬ ಟ್ವಿಟರ್ ಬಳಕೆದಾರರು ಪ್ರಶ್ನೋತ್ತರ ಮಾದರಿಯಲ್ಲಿ ಟ್ವೀಟ್ ಮಾಡಿದ್ದಾರೆ. ‘2014ರಲ್ಲಿ ಮೋದಿ ಅವರುಪ್ರತಿವರ್ಷ 2 ಕೋಟಿ ಉದ್ಯೋಗ ಸೃಷ್ಟಿಸುವ ವಾಗ್ದಾನ ನೀಡಿದ್ದರು. ಆದರೆ 2020ರಲ್ಲಿ ಉದ್ಯೋಗ ಸೃಷ್ಟಿ ಮಾತು ಒತ್ತಟ್ಟಿಗಿರಲಿ, 12 ಲಕ್ಷ ಉದ್ಯೋಗ ನಷ್ಟವಾಗಿದೆ ಎಂಬ ಸುದ್ದಿ ಪ್ರಕಟವಾಗಿದೆ. ವರ್ಷಕ್ಕೆ 2 ಕೋಟಿಯಂತೆ 6 ವರ್ಷಗಳಲ್ಲಿ 12 ಕೋಟಿ ಉದ್ಯೋಗಗಳು ಎಲ್ಲಿವೆ ಎಂದು ವಿದ್ಯಾರ್ಥಿಗಳು ಪ್ರಶ್ನಿಸುತ್ತಿದ್ದಾರೆ. ಆದರೆ ಮೋದಿ ಅವರು ‘ಯಾವ ಶ್ವಾನ ಸೂಕ್ತ’ ಎಂದು ಸಲಹೆ ನೀಡುವ ಅಸಂಬದ್ಧ ವಿಷಯಗಳನ್ನು ಚರ್ಚಿಸುತ್ತಿದ್ದಾರೆ’ ಎಂದು ತ್ರಿಪಾಠಿ ಆಕ್ರೋಶ ವ್ಯಕ್ತ
ಪಡಿಸಿದ್ದಾರೆ.

ಮತ್ತೊಬ್ಬ ಟ್ವಿಟರ್ ಬಳಕೆದಾರ ವಿನೋದ್ (@binod_budy) ಅವರ ಮಾತು ಸರ್ಕಾರ ಉರುಳಿಸುವ ಆಕ್ರೋಶ ಹೊಂದಿತ್ತು. ‘ಮೋದಿ ಸರ್ಕಾರವು ವಿದ್ಯಾರ್ಥಿಗಳನ್ನು ಕಡೆಗಣಿಸುವಂತಿಲ್ಲ. ಕೇಂದ್ರದಲ್ಲಿ ಸರ್ಕಾರವನ್ನು ಬುಡಸಮೇತ ಕಿತ್ತುಹಾಕಲು ವಿದ್ಯಾರ್ಥಿಗಳಿಗೆ ಸಾಧ್ಯವಿದೆ. ಏಕೆಂದರೆ ದೇಶದಲ್ಲಿ ನಿರುದ್ಯೋಗ ಎಂಬುದು ಗರಿಷ್ಠ ಮಟ್ಟವನ್ನು ಮುಟ್ಟಿದೆ’ ಎಂದು ಅವರು ಬರೆದಿದ್ದಾರೆ.

ನಿರುದ್ಯೋಗವನ್ನು ಬಗಲಲ್ಲಿ ಇಟ್ಟುಕೊಂಡು ಪ್ರಧಾನಿ ಘೋಷಿಸಿದ ಆತ್ಮನಿರ್ಭರ ಭಾರತವನ್ನು ಹೇಗೆ ಸಾಕಾರಗೊಳಿಸಲು ಸಾಧ್ಯ ಎಂದುಅಶ್ವನಿ ಕುತಾರ್‌ ಎಂಬುವವರು ಪ್ರಶ್ನೆ ಎತ್ತಿದ್ದಾರೆ.

ಮೋದಿ ಅವರ ‘ಮನದ ಮಾತು’ ಬಾನುಲಿ ಕಾರ್ಯಕ್ರಮದ ಆಗಸ್ಟ್ 30ರ ಆವೃತ್ತಿಗೆ ಸಾಮಾಜಿಕ ಜಾಲತಾಣಗಳಲ್ಲಿ ತೀಕ್ಷ್ಣ ಪ್ರತಿಕ್ರಿಯೆ
ವ್ಯಕ್ತವಾಗಿತ್ತು. ಬಿಜೆಪಿಯ ಅಧಿಕೃತ ಯುಟ್ಯೂಬ್ ಚಾನೆಲ್‌ನಲ್ಲಿ ಪೋಸ್ಟ್ ಮಾಡಲಾಗಿರುವ ವಿಡಿಯೊವನ್ನು ಸುಮಾರು 10 ಲಕ್ಷದಷ್ಟು ಜನರು ‘ಡಿಸ್‌ಲೈಕ್’ ಮಾಡಿದ್ದರು. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ನಡೆಯುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT