ಕೋಯಿಕ್ಕೋಡ್: ಇಲ್ಲಿ ನಡೆದ ಕೇರಳ ಸಾಹಿತ್ಯ ಉತ್ಸವ (ಕೆಎಫ್ಎಲ್)– 2026ರಲ್ಲಿ ನಟ ಪ್ರಕಾಶ್ ರಾಜ್ ಅವರು ನಾಸಾದ ನಿವೃತ್ತ ಗಗನಯಾನಿ ಸುನಿತಾ ವಿಲಿಯಮ್ಸ್ ಅವರನ್ನು ಭೇಟಿಯಾಗಿದ್ದಾರೆ.

ಈ ಕುರಿತು ಸುನಿತಾ ಅವರೊಂದಿಗಿರುವ ಫೋಟೊವನ್ನು ಪ್ರಕಾಶ್ ರಾಜ್ ಅವರು ಸಾಮಾಜಿಕ ಜಾಲತಾಣದ ತಮ್ಮ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ‘ನಮ್ಮ ಕಾಲದ ಧೈರ್ಯಶಾಲಿ ಮಹಿಳೆಯನ್ನು ಭೇಟಿಯಾಗುವುದು ಎಂದರೆ ಎಂತಹ ಕ್ಷಣ’ ಎಂದು ಬರೆದುಕೊಂಡಿದ್ದಾರೆ.

ಸದ್ಯ ಈ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

ಸುನಿತಾ ವಿಲಿಯಮ್ಸ್ ಅವರು ಇತ್ತೀಚೆಗೆ ನಾಸಾದಿಂದ ನಿವೃತ್ತಿಯಾಗಿದ್ದಾರೆ. 27 ವರ್ಷಗಳ ತಮ್ಮ ವೃತ್ತಿ ಬದುಕಿನಲ್ಲಿ, ಅವರು ಮೂರು ಬಾರಿ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ(ಐಎಸ್ಎಸ್) ಪಯಣಿಸಿದ್ದಾರೆ. ಜೊತೆಗೆ ಮಾನವಸಹಿತ ಗಗನಯಾನದ ಪ್ರವರ್ತಕರೂ ಹೌದು.

ಮೊದಲ ಬಾರಿ ಹೋಗಿದ್ದಾಗ ನಾಲ್ಕು ಬಾರಿ ಬಾಹ್ಯಾಕಾಶ ನಡಿಗೆ ಮಾಡಿದ್ದ ಸುನಿತಾ ಅವರು, 62 ಗಂಟೆ 6 ನಿಮಿಷಗಳ ಬಾಹ್ಯಾಕಾಶ ನಡಿಗೆ ಕೈಗೊಂಡು ಅತಿ ಹೆಚ್ಚು ಅವಧಿ ಬಾಹ್ಯಾಕಾಶ ನಡಿಗೆ ಕೈಗೊಂಡ ಮಹಿಳೆ ಎಂಬ ಕೀರ್ತಿಗೂ ಭಾಜನರಾಗಿದ್ದಾರೆ.
.ಆಳ ಅಗಲ | ಜಗಮೆಚ್ಚಿದ ಗಗನಯಾತ್ರಿ.ಬಾಹ್ಯಾಕಾಶದಿಂದ ನೋಡಿದರೆ ಭೂಮಿಯ ವಾಕ್ಸಮರ ಕ್ಷುಲ್ಲಕ ಎನಿಸುತ್ತವೆ: ವಿಲಿಯಮ್ಸ್.
ಕೇರಳ ಸಾಹಿತ್ಯ ಉತ್ಸವದಲ್ಲಿ ಭಾಗಿಯಾಗಿದ್ದ ಪ್ರಕಾಶ್ ರಾಜ್, ಮುಖ್ಯವಾಹಿನಿ ಮಾಧ್ಯಮಗಳ ನಾಚಿಕೆ ಇಲ್ಲದ ಶರಣಾಗತಿ ಮತ್ತು ಕುಂದುತ್ತಿರುವ ನ್ಯಾಯಾಂಗ ಸ್ವಾತಂತ್ರ್ಯದ ಕುರಿತಂತೆ ತನಿಖಾ ಪತ್ರಕರ್ತ ಜೋಸಿ ಜೋಸೆಫ್ ನಡೆಸಿದ ಸಂವಾದದಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ‘ಪ್ರಶ್ನಿಸುವವರ ಧ್ವನಿಯನ್ನೇ ವ್ಯವಸ್ಥಿತವಾಗಿ ಮೌನವಾಗಿಸುವ ಆಡಳಿತವು ಕೇಂದ್ರದಲ್ಲಿದೆ’ ಕೇಂದ್ರ ಸರ್ಕಾರವನ್ನು ಎಂದು ಟೀಕಿಸಿದ್ದಾರೆ.
.ಕೇರಳ ಲಿಟರೇಚರ್ ಫೆಸ್ಟಿವಲ್ | ಪ್ರಶ್ನಿಸುವವರ ಮೌನವಾಗಿಸುವ ಆಡಳಿತ: ಪ್ರಕಾಶ್ರಾಜ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.