ಶನಿವಾರ, ಜೂನ್ 19, 2021
21 °C

ಪ್ರಿಯಾಂಕಾ ಚೋಪ್ರಾ ಕಪಟಿ: ಸಾಮಾಜಿಕ ತಾಣದಲ್ಲಿ ಟ್ರೋಲ್‌

ಹರವು ಸ್ಫೂರ್ತಿ Updated:

ಅಕ್ಷರ ಗಾತ್ರ : | |

Prajavani

ಜನಾಂಗೀಯ ದ್ವೇಷದ ಹಿನ್ನೆಲೆಯಲ್ಲಿ ಅಮೆರಿಕದಲ್ಲಿ ಹತ್ಯೆಯಾದ ಜಾರ್ಜ್‌ ಫ್ಲಾಯ್ಡ್‌ಗೆ ನ್ಯಾಯ ಸಿಗಬೇಕೆಂದು ನಡೆಸುತ್ತಿರುವ #BlackLivesMatter  ಅಭಿಯಾನಕ್ಕೆ ಬೆಂಬಲ ವ್ಯಕ್ತಪಡಿಸಿರುವ ಬಾಲಿವುಡ್‌ನಟಿ ಪ್ರಿಯಾಂಕ ಚೋಪ್ರ ವಿರುದ್ಧ ನೆಟ್ಟಿಗರು ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಮಾಡುತ್ತಿದ್ದಾರೆ.

ಪ್ರಿಯಾಂಕ, ಫೇರ್‌ನೆಸ್‌ ಕ್ರೀಮ್‌ವೊಂದಕ್ಕೆ ಜಾಹಿರಾತು ನೀಡಿದ್ದನ್ನು ಉಲ್ಲೇಖಿಸುತ್ತಿರುವ ಟ್ರೋಲಿಗರು, ’ಚರ್ಮ ಬೆಳ್ಳಗಾಗಿಸುವ ಕ್ರೀಂ ಬಳಸಿ ಎಂದು ಹೇಳಿದ್ದ ಪ್ರಿಯಾಂಕಾ ಈಗ ಜನಾಂಗೀಯ ವಿರೋಧಿ ಚಳುವಳಿಯಲ್ಲಿ ಹೇಗೆ ಭಾಗವಹಿಸುತ್ತಾರೆ‘ ಎಂದು ಪ್ರಶ್ನಿಸುತ್ತಾ, ಅವರನ್ನು ‘ಕಪಟಿ‘ ಎಂದು ಕರೆದಿದ್ದಾರೆ. 

ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಿರುವ ಈ ಟ್ರೋಲ್‌ಗಳಿಗೆ ಪ್ರಿಯಾಂಕಾ ಇನ್ನೂ ಪ್ರತಿಕ್ರಿಯೆ ನೀಡಿಲ್ಲ. ಆದರೆ ಪ್ರಿಯಾಂಕಾ ಅಭಿಮಾನಿಗಳು, ಫ್ಯಾನ್‌ ಪೇಜ್‌ಗಳು ಈ ಟ್ರೋಲ್‌ಗಳ ವಿರುದ್ಧ ಸಿಡಿದೆದ್ದಿವೆ.

‘2015ರಲ್ಲಿ ಪ್ರಿಯಾಂಕ ಚೋಪ್ರಾ ಅವರು ಸಂದರ್ಶನವೊಂದರಲ್ಲಿ ಈ ವಿಷಯಕ್ಕೆ ಸಂಬಂಧಿಸಿದಂತೆ  ಸ್ಪಷ್ಟನೆ ನೀಡಿದ್ದಾರೆ‘ ಎಂದು ಅವರ ಅಭಿಮಾನಿಗಳು ಟ್ರೋಲ್‌ಗಳಿಗೆ ಉತ್ತರ ನೀಡುತ್ತಾ, ಆ ಸಂದರ್ಶನದ ವಿಡಿಯೊಗಳನ್ನು ಹಂಚಿಕೊಳ್ಳುತ್ತಿದ್ದಾರೆ. ‘ಆ ಸಂದರ್ಶನದಲ್ಲಿ ಈ ಜಾಹೀರಾತು ಮಾಡಿದಕ್ಕೆ ತೀವ್ರವಾಗಿ ಬೇಸರ ವ್ಯಕ್ತಪಡಿಸಿದ್ದರು. ಈ ಜಾಹೀರಾತು ಮಾಡಿದ ಮೇಲೆ ಈ ಬಗ್ಗೆ ಅರಿವಾಗಿ ಪಶ್ಚಾತಾಪ ಪಟ್ಟಿದ್ದೇನೆ‘ ಎಂದೂ ಹೇಳಿದ್ದರು. ಈ ಜಾಹೀರಾತು ಮಾಡಿ ತಪ್ಪು ಮಾಡಿದೆ ಎಂದು ಹೇಳಿದ್ದರು. ಪ್ರಿಯಾಂಕಾಗೆ ಅವರ ತಪ್ಪಿನ ಅರಿವಾಗಿದೆ.  ಈಗ ಯಾಕೆ ಅವರನ್ನು ಎಳೆಯುತ್ತಿದ್ದೀರಿ‘ ಎಂದು ಅಭಿಮಾನಿಗಳು ಪ್ರತಿಕ್ರಿಯಿಸುತ್ತಿದ್ದಾರೆ.

ಪ್ರಿಯಾಂಕಾ ಜತೆ ಸೋನಂ ಕಪೂರ್, ದಿಶಾ ಪಟಾಣಿ ಇನ್ನೂ ಹಲವರು ಈ ಅಭಿಯಾನದಲ್ಲಿ ಭಾಗಿಯಾಗಿದ್ದಾರೆ.

ಈ ಬಗ್ಗೆ ಬಿಬಿಸಿಗೆ ನೀಡಿದ ಸಂದರ್ಶದಲ್ಲಿ ಮಾತನಾಡಿರುವ ನಟಿ ಕಂಗನಾ ರಣೌಟ್‌, ’ಇವರೆಲ್ಲರೂ ಕಪಟಿಗಳು, ಕಪ್ಪು ವರ್ಣಿಯರನ್ನು ಅಸಮಾನತೆಯಿಂದ ಕಾಣುವುದು ನಮ್ಮ ಚಿತ್ರರಂಗದಲ್ಲೂ ಇದೆ. ಬಾಲಿವುಡ್‌ನ ಎಷ್ಟು ಸಿನಿಮಾಗಳಿಗೆ ಕಪ್ಪು ವರ್ಣದವರನ್ನು ಆಯ್ದುಕೊಂಡಿದ್ದಾರೆ. ಈ ಬಗ್ಗೆ ಯಾರಾದರೂ ಮಾತನಾಡಿದ್ದಾರಾ. ಇದ್ದಕ್ಕಿದ್ದಂತೆ #BlackLivesMatter ಅಭಿಯಾನಕ್ಕೆ ಜೈ ಎಂದರೆ ಸಾಕೇ‘ ಎಂದು ‍ಪ್ರಶ್ನಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು