ಟ್ವಿಟರ್ ಯುಗದಲ್ಲಿ ರಾಮಾಯಣದ ರಾಮ, ಸೀತೆ, ಲಕ್ಷ್ಮಣರಿಗೆ ನಕಲಿಗಳ ಕಾಟ

ಇದೊಂದು ಪೀಳಿಗೆಯ ಸಂಘರ್ಷದ ಕಥೆ. ಆ ಕಾಲದಲ್ಲಿ ಟ್ವಿಟರ್, ಫೇಸ್‌ಬುಕ್ ಇರಲಿಲ್ಲ. ಆ ಕಾಲದ ಖ್ಯಾತನಾಮರಿಗೆ ಈಗ ಮರಳಿ ಬೆಲೆ ಬಂದಿದ್ದೇ ತಡ, ಅವರ ಹೆಸರಿನಲ್ಲಿ ಸಾಕಷ್ಟು ಖಾತೆಗಳನ್ನು ಈ ಪೀಳಿಗೆಯ ಮಂದಿ ನೋಂದಾಯಿಸಿಕೊಂಡುಬಿಟ್ಟಿದ್ದಾರೆ. ಅಂದಿನವರು ಸೋಷಿಯಲ್ ಮೀಡಿಯಾಗೆ ಕಾಲಿಡುವಷ್ಟರಲ್ಲಿ ಈ ಪೀಳಿಗೆಯವರು ಅವರ ಹೆಸರಿನಲ್ಲಿ ಖ್ಯಾತಿ ಗಳಿಸಿ ಆಗಿಬಿಟ್ಟಿದೆ! ನಕಲಿಗಳ ನಡುವೆ ಅಸಲಿ ಖಾತೆಗಳು ಕನಲಿ ಹೋಗಿವೆ.
1987ರಲ್ಲಿ ದೇಶದ ಜನರನ್ನು ಜಾತಿ, ಮತ ಭೇದವಿಲ್ಲದೆ ಒಗ್ಗೂಡಿಸಿ ಮನರಂಜಿಸಿದ್ದ ರಾಮಾಯಣ ಧಾರಾವಾಹಿ ಈಗ ಕೊರೊನಾ ವೈರಸ್ ಪೀಡೆಯಿಂದಾಗಿ ಲಾಕ್‌ಡೌನ್ ಮೂಲಕ ಮರಳಿ ಪ್ರಸಾರವಾಗುತ್ತಿರುವಂತೆಯೇ, ಅದರ ಪಾತ್ರಧಾರಿಗಳಿಗೆ ಮತ್ತೆ ಬೆಲೆ ಬಂದಿದೆ; ಅವರ ಮೇಲೆ ಆನ್‌ಲೈನ್‌ನಲ್ಲಿ ಪ್ರೀತಿ ಹುಟ್ಟಿದೆ, ಅಭಿಮಾನ ಹೆಚ್ಚಾಗುತ್ತಿದೆ. ಅಂದು ನಮ್ಮನ್ನು ತುದಿಗಾಲಲ್ಲಿ ನಿಲ್ಲುವಂತೆ ಮಾಡಿದ ಈ ಪೌರಾಣಿಕ ಧಾರಾವಾಹಿಗಳ ಪಾತ್ರಧಾರಿಗಳು ಈಗೆಲ್ಲಿದ್ದಾರೆ, ಏನು ಮಾಡುತ್ತಿದ್ದಾರೆ ಎಂಬ ಕುತೂಹಲ ಸಹಜ. ಅವರನ್ನು ಫೇಸ್‌ಬುಕ್, ಟ್ವಿಟರ್‌ನಲ್ಲಿ ಹುಡುಕಾಡಿದವರಿಗೆ ದೊರೆತದ್ದು ಗೊಂದಲವೇ. ಹೊಸ ಪೀಳಿಗೆಯ ಮಂದಿ ಸೋಷಿಯಲ್ ಮೀಡಿಯಾದಲ್ಲಿ ಫೇಕ್ ಸುದ್ದಿಗಳನ್ನಷ್ಟೇ ಹರಡುತ್ತಿಲ್ಲ, ಫೇಕ್ ಖಾತೆಗಳನ್ನೂ ಮಾಡಿಕೊಂಡು, ಜನರ ದಾರಿ ತಪ್ಪಿಸುತ್ತಿದ್ದಾರೆ ಎಂಬುದು ಕಳವಳದ ವಿಷಯವೂ ಹೌದು.
ರಾಮಾಯಣದಲ್ಲಿ ಎಲ್ಲರ ಗಮನ ಸೆಳೆದಿದ್ದು ಶ್ರೀರಾಮನ ಪಾತ್ರಧಾರಿ ಅರುಣ್ ಗೋವಿಲ್, ಲಕ್ಷ್ಮಣನಾಗಿ ಸುನಿಲ್ ಲೆಹ್ರಿ, ಸೀತೆಯಾಗಿ ದೀಪಿಕಾ ಚಿಖ್ಲಿಯಾ ಟೋಪಿವಾಲ. ಅದೇ ರೀತಿ, ಆ ಕಾಲದ ಮತ್ತೊಂದು ಜನಪ್ರಿಯ ಪೌರಾಣಿಕ ಧಾರಾವಾಹಿ ಮಹಾಭಾರತದಲ್ಲಿ ಕೃಷ್ಣನಾಗಿ ನಟಿಸಿದ್ದ ನಿತೀಶ್ ಭಾರದ್ವಾಜ್, ಭೀಷ್ಮ ಪಾತ್ರಧಾರಿ ಮುಕೇಶ್ ಖನ್ನಾಗೆ ಕೂಡ ಅಭಿಮಾನಿಗಳು ಸಾಕಷ್ಟಿದ್ದಾರೆ. ನಕಲಿಗಳಿಗೂ ಬರವಿಲ್ಲ.
ಇಷ್ಟೇ ಆಗಿದ್ದರೆ ಪರವಾಗಿಲ್ಲ, ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರೇ ಶ್ರೀರಾಮನ ಪಾತ್ರಧಾರಿ ಅರುಣ್ ಗೋವಿಲ್ ಅಂತ ತಿಳಿದು ನಕಲಿ ಟ್ವೀಟ್‌ಗೇ ಅಭಿನಂದಿಸಿದ್ದರು. ಏ.5ರಂದು ಪೋಸ್ಟ್ ಮಾಡಲಾದ 'RealArunGovil' ಖಾತೆಯಲ್ಲಿ, 'ಇಂದು ರಾತ್ರಿ 9 ಗಂಟೆಗೆ 9 ನಿಮಿಷ ಎಲ್ಲರೂ ದೀಪ ಹಚ್ಚೋಣ' ಅಂತ ಟ್ವೀಟ್ ಮಾಡಿದ್ದನ್ನು ಮೋದಿ ಅಭಿನಂದಿಸಿ, "ನಿಮ್ಮ ಈ ಸಂದೇಶವು ಕೊರೊನಾ ವಿರುದ್ಧದ ಹೋರಾಟದ ಸಂಕಲ್ಪ ಶಕ್ತಿಯನ್ನು ಮತ್ತಷ್ಟು ಬಲವಾಗಿಸಿದೆ' ಎಂದು ಉತ್ತರಿಸಿದ್ದರು. ಈಗ ಮೂಲ ಟ್ವೀಟ್ ಅನ್ನು 'ರಿಯಲ್' ಅರುಣ್ ಗೋವಿಲ್ ಅಳಿಸಿದ್ದಾರೆ. ಅರುಣ್ ಗೋವಿಲ್ ಅವರ ಅಸಲಿ ಖಾತೆ @arungovil12. ಮೋದಿ ಟ್ವೀಟ್‌ಗೆ ಅಸಲಿ ಅರುಣ್ ಗೋವಿಲ್ ಧನ್ಯವಾದ ಸಲ್ಲಿಸುತ್ತಾ, ಇದು ತನ್ನ ನಿಜವಾದ ಟ್ವಿಟರ್ ಖಾತೆ ಎಂದು ಹೇಳಬೇಕಾಯಿತು.
आपका यह संदेश कोरोना के खिलाफ लड़ने की संकल्प शक्ति को और मजबूती देगा। #9pm9minute https://t.co/Ms0iIRrOzB
— Narendra Modi (@narendramodi) April 5, 2020
Thank you very much Sir!
My genuine twitter handle is @arungovil12 #ArunGovil— Arun Govil (@arungovil12) April 6, 2020
ಈ ಗೊಂದಲಗಳ ಮಧ್ಯೆ, ನಟರ ಬಗ್ಗೆ ತಿಳಿದಿರುವ ಅಭಿಮಾನಿಗಳು ಟ್ವಿಟರ್‌ಗೆ ಮೊರೆ ಹೋಗಿ, ದಯವಿಟ್ಟು ನಕಲಿ ಖಾತೆಗಳನ್ನು ನಿರ್ಬಂಧಿಸಿ, ಅಸಲಿ ನಟರಿಗೆ ನೀಲಿ ಟಿಕ್ ಗುರುತು (ವೆರಿಫೈಡ್ ಬ್ಯಾಡ್ಜ್) ಒದಗಿಸಿ ಎಂದು ವಿನಂತಿಸಿಕೊಂಡಿದ್ದಾರೆ. 'ಲಕ್ಷ್ಮಣ' ಖ್ಯಾತಿಯ ಸುನಿಲ್ ಲೆಹ್ರಿ (ಅಸಲಿ ಖಾತೆ @LahriSuni) ಅವರಂತೂ, ನಕಲಿ ಖಾತೆಗಳನ್ನು ಬಂದ್ ಮಾಡಿ, ಇಲ್ಲವೇ ಪೊಲೀಸರಿಗೆ ದೂರು ನೀಡಬೇಕಾಗುತ್ತದೆ ಅಂತ ವಿಡಿಯೊ ಮಾಡಿ ಹಂಚಿಕೊಂಡಿದ್ದಾರೆ.
Request and warning to people who are operating our fake accounts pic.twitter.com/dNqsVkymuN
— Sunil lahri (@LahriSunil) April 8, 2020
'ರಾಮ' ಪಾತ್ರದಿಂದಾಗಿ ಜನಪ್ರಿಯತೆ ಪಡೆದುಕೊಂಡಿರುವ ಅರುಣ್ ಗೋವಿಲ್ ಹೆಸರಿನಲ್ಲಿ ಸಾಕಷ್ಟು ನಕಲಿ ಖಾತೆಗಳು ಹುಟ್ಟಿಕೊಂಡಿದ್ದು, ಅಭಿಮಾನಿಗಳ ಖಾತೆಯೊಂದು 'ಹೇ ಭಗವಾನ್ ಈ ರಾಕ್ಷಸನಿಂದ (ನಕಲಿ ಖಾತೆಯಿಂದ) ರಾಮನನ್ನು ರಕ್ಷಿಸು' ಎಂದು ಹಾಸ್ಯಭರಿತವಾಗಿ ಕೇಳಿಕೊಳ್ಳುವ ಪೋಸ್ಟ್ ಕೂಡ ಇದೆ.
ಅರುಣ್ ಗೋವಿಲ್ (ಅಧಿಕೃತ ಟ್ವಿಟರ್ ಖಾತೆ @arungovil12)
नमस्कार भाइयों एवं बहनो,
एक आवश्यक सूचना आपको इस विडीओ के माध्यम से देना चाहता हूँ ।
आशा करताहूँ आप अवश्य समर्थन करेंगे !@realarungovil से विनती करें कि वो ऐसा ना करें ! pic.twitter.com/k7k9j8eWvi— Arun Govil (@arungovil12) April 6, 2020
'ರಾಮ'ನ ನಕಲಿ ಖಾತೆಗಳು:
@RealArunGovil
@RealArunGovil1
@arungovil01
@ArunGovil11
@Arungovil8
@Arungovil_real
@ArunGovilG
TheArunGoviL
@_TheArunGovil
@RealArunGovil1
'ಸೀತೆ' ದೀಪಿಕಾ ಚಿಖ್ಲಿಯಾ ಟೋಪಿವಾಲಾ ಅವರ ಅಸಲಿ ಖಾತೆ @ChikhliaDipika
ನಕಲಿ ಖಾತೆಗಳು ಹೀಗಿವೆ:
@DipikaChikhlia
@ChikhliaDipika_
@DeepikaChikhlia
@DipikaChikhliaG
@ChikhliaDipika1
@official_dipika
@DipikaChikhalia
@Dipikachikhliya
@DeepikaChikhal6
@TheSeetaMaa (ಅಭಿಮಾನಿಗಳ ಗುಂಪು)
ಮಹಾಭಾರತದ ಕೃಷ್ಣ ನಿತೀಶ್ ಭಾರದ್ವಾಜ್ (ಅಸಲಿ ಖಾತೆ @nitishkrishna8)
ನಕಲಿ ಖಾತೆಗಳು
@NitisBharadwaj
@Kanha_Nitish
@Real_bharadwaj
@RealNiBhardwaj
@NitishAsKrishna
@mNitishBhardwaj
@realnitish_
ಮಹಾಭಾರತದ ಭೀಷ್ಮ ಮುಕೇಶ್ ಖನ್ನಾ (ಅಸಲಿ ಖಾತೆ @actmukeshkhanna)
ನಕಲಿ ಖಾತೆಗಳು
@SirMukeshKhanna
@iMukeshKhanna
@M_Khannaa
@TheMukeshk
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.