ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಕಲಿ ಫೇಸ್‌ಬುಕ್ ಪೇಜ್‌ಗಳ ಹಾವಳಿ: ಎಚ್ಚರಿಕೆ ಕೊಟ್ಟ ಉದ್ಯಮಿ ರತನ್ ಟಾಟಾ

ಅಕ್ಷರ ಗಾತ್ರ

ಬೆಂಗಳೂರು: ಇತ್ತೀಚೆಗಂತೂ ನಕಲಿ ಫೇಸ್‌ಬುಕ್ ಅಕೌಂಟ್‌ಗಳ ಹಾವಳಿ ವಿಪರೀತ ಹೆಚ್ಚಾಗುತ್ತಿದೆ. ಅಮಾಯಕರನ್ನು ವಂಚನೆ ಮಾಡುವುದೇ ಇವುಗಳ ಮೂಲ ಕಸುಬು.

ಇದೇ ಫೇಸ್‌ಬುಕ್ ನಕಲಿ ಪೇಜ್‌ಗಳ ಬಗ್ಗೆ ಗರಂ ಆಗಿರುವ ಖ್ಯಾತ ಉದ್ಯಮಿ ರತನ್ ಟಾಟಾ ಅವರು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಫೇಸ್‌ಬುಕ್‌ನಲ್ಲಿ 'ರತನ್ ಟಾಟಾ ಪೌಂಢೇಶನ್' ಹೆಸರಿನಲ್ಲಿ ಪೇಜ್ ಒಂದನ್ನು ತೆರೆಯಲಾಗಿದ್ದು ಈ ಬಗ್ಗೆ ತೀವ್ರ ಕಿಡಿಕಾರಿರುವ ರತನ್ ಟಾಟಾ ಅವರು, ‘ಈ ಪೇಜ್ ನಕಲಿಯಾಗಿದ್ದು, ನಮ್ಮ ಸಹೋದ್ಯೋಗಿಗಳ ಹೆಸರಿನಲ್ಲಿ ಯೂಸರ್‌ನೇಮ ತೆಗೆದುಕೊಂಡು ಪೇಜ್ ಮಾಡಲಾಗಿದೆ. ಈ ಪೇಜ್‌ನ ಕಿಡಗೇಡಿಗಳು ಅಮಾಯಕರಿಂದ ಹಣ ವಸೂಲಿ ಮಾಡುತ್ತಿದ್ದಾರೆಎಂಬ ದೂರುಗಳು ನನ್ನ ಗಮನಕ್ಕೆ ಬಂದಿವೆ. ನಾವು ಸಾರ್ವಜನಿಕರಿಂದ ಯಾವುದೇ ದೇಣಿಗೆ ಸ್ವೀಕರಿಸುವುದಿಲ್ಲ. ನಾವು ಈ ಬಗ್ಗೆ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ. ಇಂತಹ ಪೇಜ್‌ಗಳು ಕಂಡು ಬಂದರೆ ನೀವು ಕೂಡ ಫೇಸ್‌ಬುಕ್‌ಗೆ ರಿಪೋರ್ಟ್ ಮಾಡಿ’ ಎಂದು ಮನವಿ ಮಾಡಿಕೊಂಡಿದ್ದಾರೆ.

ಟಾಟಾ ಕಂಪನಿಗಳ ಬಗ್ಗೆ ಪೌಂಢೇಶನ್ ಬಗ್ಗೆ ಏನಾದರೂ ಅನುಮಾನ ಬಂದರೆ ಜನ Talktous@tatatrusts.org ಗೆ ಈಮೇಲ್ ಮಾಡುವ ಮೂಲಕ ಖಚಿತ ಪಡಿಸಿಕೊಳ್ಳಬಹುದು ಎಂದು ರತನ್ ಟಾಟಾ ಹೇಳಿದ್ದಾರೆ.

ರತನ್ ಟಾಟಾ ಅವರು ಹೇಳಿರುವ ನಕಲಿ ಫೇಸ್‌ಬುಕ್ ಪೇಜ್ ಇದೀಗ ಡಿಲೀಟ್ ಆಗಿರುವುದು ಕಂಡು ಬಂದಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT