ಸೋಮವಾರ, 17 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

LS Polls Results: ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ಮೀಮ್ಸ್‌ಗಳಿವು

Published 4 ಜೂನ್ 2024, 11:27 IST
Last Updated 4 ಜೂನ್ 2024, 11:27 IST
ಅಕ್ಷರ ಗಾತ್ರ

ನವದೆಹಲಿ: ಲೋಕಸಭಾ ಚುನಾವಣೆಯ ಮತ ಎಣಿಕೆ ನಡೆಯುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ಮೀಮ್ಸ್‌ಗಳು ಹರಿದಾಡುತ್ತಿವೆ. ಸಂಖ್ಯೆಗಳ ಏರಿತದ ಬಗ್ಗೆ ಜನಪ್ರಿಯ ಟಿವಿ ಶೋ ‘ಪಂಚಾಯತ್‌’ ‘ಹೇರಾ ಫೆರಿ’ ಮತ್ತು ‘ಚುಪ್ ಚುಪ್ ಕೆ’ ನಂತಹ ಚಲನಚಿತ್ರಗಳನ್ನು ಆಧರಿಸಿದ ಮೀಮ್ಸ್‌ಗಳು ವ್ಯಾಪಕವಾಗಿ ಹರಿದಾಡುತ್ತಿವೆ.

ಬೆಳಿಗ್ಗೆ ಮತ ಎಣಿಕೆ ಆರಂಭವಾಗುತ್ತಿದ್ದಂತೆ ಷೇರು ಪೇಟೆಯಲ್ಲಾದ ರಕ್ತಪಾತವು ಹೂಡಿಕೆದಾರರಲ್ಲಿ ಭಯಹುಟ್ಟಿಸಿತ್ತು. ಈ ಕುರಿತು ಎಕ್ಸ್‌ ಬಳಕೆದಾರರೊಬ್ಬರು ‘ಇಂದು ನಿಫ್ಟಿ-ಸೆನ್ಸೆಕ್ಸ್!’ ಎಂಬ ಕ್ಯಾಪ್ಶನ್‌ ನೀಡುವ ಮೂಲಕ ಹುಲ್ಲಿನ ಇಳಿಜಾರಿನಲ್ಲಿ ಉರುಳುತ್ತಿರುವ ಪಾಂಡಾ ಮರಿಗಳ ವಿಡಿಯೊವನ್ನು ಹಂಚಿಕೊಂಡಿದ್ದಾರೆ. ಮತ್ತೊಬ್ಬರು ಶಾಹಿದ್ ಕಪೂರ್ ಅಭಿನಯದ ‘ಚುಪ್ ಚುಪ್ ಕೆ’ ಚಿತ್ರದ ಸ್ಕ್ರೀನ್‌ಗ್ರಾಬ್ ಅನ್ನು ಪೋಸ್ಟ್ ಮಾಡಿದ್ದಾರೆ.

ಕೆಲವು ಎಕ್ಸ್ ಬಳಕೆದಾರರು ಟಿವಿ ಚಾನೆಲ್‌ಗಳ ಮತಗಟ್ಟೆ ಸಮೀಕ್ಷೆಗಳ ಕುರಿತು ಮೀಮ್ಸ್‌ ಮಾಡಿ ಹಂಚಿಕೊಂಡಿದ್ದಾರೆ.

ಸ್ಮೃತಿ ಇರಾನಿ ಅವರ ಸೋಲಿಗೆ ಅವರ ಫೋಟೊ ಹಂಚಿಕೊಂಡಿದ್ದಾರೆ. ಇನ್ನೊಂದೆಡೆ ಪ್ರಧಾನಿ ಮೋದಿ ಅವರು ಚಂದ್ರಬಾಬು ನಾಯ್ಡು ಅವರಿಗೆ ಕರೆ ಮಾಡಿದ್ದಾರೆ ಎನ್ನುವುದಕ್ಕೆ ಮೋದಿ ಚಂದ್ರ ಬಾಬು ನಾಯ್ಡು ಅವರ ಕೈ ಹಿಡಿದು ಎಳೆಯುತ್ತಿರುವ ಹಳೆಯ ವಿಡಿಯೊವನ್ನು ಹಂಚಿಕೊಳ್ಳಲಾಗುತ್ತಿದೆ.

ಉತ್ತರಪ್ರದೇಶದಲ್ಲಿ ಬಿಜೆಪಿಗೆ ಹಿನ್ನಡೆಯಾದ ವಿಡಿಯೊ, ಚುನಾವಣಾ ಫಲಿತಾಂಶವನ್ನು ಅಚ್ಚರಿಯಿಂದ ನೋಡುವ ಬಗೆ ಹೇಗಿರಲಿದೆ, ಕೇಜ್ರಿವಾಲ್‌ ಜೈಲಿನಿಂದಲೇ ಮತ ಎಣಿಕೆ ನೋಡುತ್ತಿರುವ ಬಗೆ ಹೇಗೆ ಎನ್ನುವ ಮೀಮ್‌ಗಳು‌ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT