ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಲಾನ್ ಮಸ್ಕ್ ಟ್ವಿಟರ್ ಖರೀದಿ: ಷೇರುದಾರರಿಗೆ ಮತದಾನಕ್ಕೆ ಅವಕಾಶ ಒದಗಿಸಿದ ಕಂಪನಿ

ಅಕ್ಷರ ಗಾತ್ರ

ಬೆಂಗಳೂರು: ಮೈಕ್ರೋಬ್ಲಾಗಿಂಗ್ ತಾಣ ಟ್ವಿಟರ್ ಖರೀದಿ ಕುರಿತಂತೆ ಅಭಿಪ್ರಾಯ ದಾಖಲಿಸಲು ಷೇರುದಾರರಿಗೆ ಮತದಾನದ ಅವಕಾಶವನ್ನು ಕಂಪನಿ ಕಲ್ಪಿಸುತ್ತಿದೆ.

ಸಿಎನ್‌ಎನ್‌ ವರದಿ ಮಾಡಿರುವ ಪ್ರಕಾರ, ಟ್ವಿಟರ್ ತಮ್ಮ ಷೇರುದಾರರಿಗೆ ಪತ್ರ ಬರೆದಿದ್ದು, ಸೆಪ್ಟೆಂಬರ್ 13ರಂದು ವರ್ಚುವಲ್ ಮೀಟಿಂಗ್ ಕರೆಯಲಾಗಿದೆ. ಅದರಲ್ಲಿ ಭಾಗವಹಿಸಿ, ಆನ್‌ಲೈನ್ ಮೂಲಕ ಮತದಾನ ಮಾಡಲು ಅವಕಾಶ ಕಲ್ಪಿಸಲಾಗಿದೆ.

ಟ್ವಿಟರ್ ಅನ್ನು ಇಲಾನ್ ಮಸ್ಕ್ ಅವರಿಗೆ ಮಾರಾಟ ಮಾಡುವ ಕುರಿತಂತೆ ಕಂಪನಿ ಷೇರುದಾದರು ಮತದಾನ ಮಾಡಬಹುದಾಗಿದೆ.

ಟ್ವಿಟರ್ ಅನ್ನು ಖರೀದಿಸುವ ಕುರಿತಂತೆ ಇಲಾನ್ ಮಸ್ಕ್ ಅವರು ನೀಡಿದ್ದ ಪ್ರಸ್ತಾವನೆ ಚರ್ಚೆಗೆ ಗುರಿಯಾಗಿತ್ತು. ಅಲ್ಲದೆ, ಟ್ವಿಟರ್‌ನಲ್ಲಿರುವ ನಕಲಿ ಖಾತೆಗಳ ಕುರಿತು ಸೂಕ್ತ ಮಾಹಿತಿ ನೀಡದಿದ್ದರೆ ಟ್ವಿಟರ್ ಖರೀದಿಸುವುದಿಲ್ಲ ಎಂದು ಇಲಾನ್ ಮಸ್ಕ್ ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT