ಸೋಮವಾರ, ಜೂನ್ 21, 2021
29 °C

ಕೋವಿಡ್‌: ಕೇಂದ್ರ ಸರ್ಕಾರವನ್ನು ಟೀಕಿಸಿ ಟ್ವೀಟ್‌, ಅಳಿಸಿ ಹಾಕಿದ ಟ್ವಿಟರ್‌!

ಅಜಿತ್ ಅತ್ರಾಡಿ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ದೇಶದಲ್ಲಿ ಕೋವಿಡ್‌–19 ಪರಿಸ್ಥಿತಿ ನಿರ್ವಹಣೆಗೆ ಸಂಬಂಧಿಸಿದಂತೆ ಟೀಕಿಸಿ ಮಾಡಲಾಗಿದ್ದ ಸುಮಾರು 50 ಟ್ವೀಟ್‌ಗಳನ್ನು ಶನಿವಾರ ಟ್ವಿಟರ್‌ ತೆಗೆದು ಹಾಕಿದೆ.

ಕಾಂಗ್ರೆಸ್‌ ವಕ್ತಾರ ಪವನ್‌ ಖೇರಾ, ಕಾಂಗ್ರೆಸ್‌ ಸಂಸದ ರೇವಂತ್‌ ರೆಡ್ಡಿ ಹಾಗೂ ಪಶ್ಚಿಮ ಬಂಗಾಳದ ಸಚಿವ ಮಲಯ್‌ ಘಟಕ್‌ ಸೇರಿದಂತೆ ಹಲವು ಜನರ ಟ್ವೀಟ್‌ಗಳನ್ನು ತೆಗೆದು ಹಾಕಲಾಗಿದೆ. ಬಹುತೇಕ ಟ್ವೀಟ್‌ಗಳಲ್ಲಿ ಎನ್‌ಡಿಎ ಸರ್ಕಾರದ ಕ್ರಮಗಳನ್ನು ಟೀಕಿಸಲಾಗಿತ್ತು.

ಭಾರತದಲ್ಲಿ ಕೋವಿಡ್‌–19 ಹೆಚ್ಚಳ ಮತ್ತು ಕುಂಭ ಮೇಳದ ಕುರಿತು ಟ್ವೀಟ್‌ಗಳಲ್ಲಿ ಪ್ರಸ್ತಾಪಿಸಲಾಗಿತ್ತು. ಕೇಂದ್ರ ಸರ್ಕಾರದ ಮನವಿ ಮೇರೆಗೆ ಸಾಮಾಜಿಕ ಮಾಧ್ಯಮವು ಟ್ವೀಟ್‌ಗಳನ್ನು ಅಳಿಸಿ ಹಾಕಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ದೆಹಲಿಯಲ್ಲಿ ಕೃಷಿ ಕಾಯ್ದೆಗಳನ್ನು ವಿರೋಧಿಸಿ ನಡೆಸಲಾದ ರೈತರ ಪ್ರತಿಭಟನೆಗೆ ಸಂಬಂಧಿಸಿದಂತೆ ಪ್ರಕಟಗೊಂಡಿದ್ದ ಟ್ವೀಟ್‌ಗಳನ್ನು ತೆಗೆಯುವ ಕುರಿತು ಟ್ವಿಟರ್‌, ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ನಡುವೆ ಜಟಾಪಟಿ ನಡೆದಿತ್ತು. ಸರ್ಕಾರದ ವಿರುದ್ಧ ಮಾಡಲಾದ ಟ್ವೀಟ್‌ಗಳನ್ನು ತೆಗೆಯಲು ನಿರಾಕರಿಸಿದ ಟ್ವಿಟರ್, ಅಂತಿಮವಾಗಿ ಎಲ್ಲ ಟ್ವೀಟ್‌ಗಳನ್ನು ತೆಗೆದು ಹಾಕಿತ್ತು.

ಭಾರತದ ಕಾನೂನು ಪಾಲಿಸಲು ವಿಫಲವಾದರೆ ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಸರ್ಕಾರವು ಟ್ವಿಟರ್‌ಗೆ ಎಚ್ಚರಿಕೆ ನೀಡಿತ್ತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು