ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟ್ವೀಟ್‌ಗೆ ಯಾರೆಲ್ಲ ಪ್ರತಿಕ್ರಿಯಿಸಬಹುದು?; ಟ್ವಿಟರ್ ನೀಡಲಿದೆ ನಿಯಂತ್ರಿಸೊ ಆಯ್ಕೆ

Last Updated 9 ಜನವರಿ 2020, 10:19 IST
ಅಕ್ಷರ ಗಾತ್ರ

ಲಾಸ್‌ ವೇಗಾಸ್‌:ಬಳಕೆದಾರರು ಕಿರುಕುಳಕ್ಕೆ ಒಳಗಾಗುವುದರಿಂದ ತಪ್ಪಿಸಲು ಟ್ವಿಟರ್‌ ನಾಲ್ಕು ಹೊಸ ಆಯ್ಕೆಗಳನ್ನು ಪರಿಚಯಿಸುತ್ತಿದೆ. ತಮ್ಮ ಟ್ವೀಟ್‌ ಅಥವಾ ಸರಣಿ ಟ್ವೀಟ್‌ಗಳಿಗೆ ಯಾರೆಲ್ಲ ಪ್ರತಿಕ್ರಿಯಿಸಬಹುದು ಎಂಬುದನ್ನು ಟ್ವೀಟಿಗರೇ ನಿರ್ಬಂಧಿಸಿಕೊಳ್ಳಬಹುದಾಗಿದೆ.

ಸಾಮಾಜಿಕ ಮಾಧ್ಯಮಗಳಲ್ಲಿ ಪ್ರತಿ ಫೋಸ್ಟ್‌ಗೂ ಹತ್ತಾರು ಕಮೆಂಟ್‌ಗಳ ಮೂಲಕ ಜಿದ್ದು ಸಾಧಿಸುವಂತೆ ವರ್ತಿಸುವುದು, ಕಿರುಕುಳ ನೀಡುವುದು ದಿನೇದಿನೇ ಹೆಚ್ಚುತ್ತಿದೆ. ಇದನ್ನು ತಪ್ಪಿಸಿ ಮುಕ್ತವಾಗಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಲು ಅನುವಾಗುವಂತೆ ಟ್ವಿಟರ್‌ ಶೀಘ್ರದಲ್ಲಿಯೇನಾಲ್ಕು ಹೊಸ ಆಯ್ಕೆಗಳನ್ನು ನೀಡಲಿದೆ.

ಬಳಕೆದಾರ ತಾನು ಮಾಡಿದ ಟ್ವೀಟ್‌ಗೆ ಯಾರು ಬೇಕಾದರೂ ಪ್ರತಿಕ್ರಿಯಿಸಲು ಅವಕಾಶ ನೀಡಲು ಬಯಸಿದರೆ 'ಗ್ಲೋಬಲ್‌' (Global) ಆಯ್ಕೆ ಮಾಡಬಹುದು. ಎರಡನೇ ಆಯ್ಕೆ 'ಗ್ರೂಪ್‌' (Group); ಬಳಕೆದಾರ ಫಾಲೋ ಮಾಡುತ್ತಿರುವವರು ಮತ್ತು ಸೂಚಿಸಿದವರು ಮಾತ್ರ ಟ್ವೀಟ್‌ಗಳಿಗೆ ಪ್ರತಿಕ್ರಿಯೆ ನೀಡಬಹುದಾಗಿರುತ್ತದೆ.

ಬಳಕೆದಾರ ಆಯ್ಕೆ ಮಾಡಿದ ಟ್ವೀಟಗರು ಮಾತ್ರವೇ ಪ್ರತಿಕ್ರಿಯೆ ನೀಡುವಂತೆ ಮಾಡಲು 'ಪ್ಯಾನಲ್' (Panel) ಹಾಗೂ ಪ್ರತಿಕ್ರಿಯೆ ಪೂರ್ಣ ನಿರ್ಬಂಧಿಸಲು 'ಸ್ಟೇಟ್‌ಮೆಂಟ್‌' (Statement) ಆಯ್ಕೆ ಸಿಗಲಿದೆ ಎಂದು ಟ್ವಿಟರ್‌ನ ಪ್ರಾಡಕ್ಟ್‌ ಮ್ಯಾನೇಜ್‌ಮೆಂಟ್‌ ನಿರ್ದೇಶಕ ಸುಜೇನ್ ಕ್ಸಿಅಂತರರಾಷ್ಟ್ರೀಯ ಎಲೆಕ್ಟ್ರಾನಿಕ್ಸ್‌ ಉಪಕರಣಗಳ ಬೃಹತ್‌ ಪ್ರದರ್ಶನ ಮೇಳ(ಸಿಇಎಸ್‌)ದಲ್ಲಿ ಬುಧವಾರ ಪ್ರಕಟಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT