ಬುಧವಾರ, 29 ನವೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Twitter Down | ಟ್ವಿಟರ್‌ನಲ್ಲಿ ತಾಂತ್ರಿಕ ಸಮಸ್ಯೆ, ಬಳಕೆದಾರರಿಗೆ ತೊಂದರೆ

ಟ್ವಿಟರ್‌ ವೆಬ್ ಪುಟ ತೆರೆದುಕೊಳ್ಳದೇ ಬಳಕೆದಾರರು ಪರದಾಡಿದ್ದಾರೆ.
Last Updated 4 ನವೆಂಬರ್ 2022, 4:51 IST
ಅಕ್ಷರ ಗಾತ್ರ

ಬೆಂಗಳೂರು: ಟ್ವಿಟರ್ ವೆಬ್ ಅಪ್ಲಿಕೇಶನ್ ಮತ್ತು ವೆಬ್ ಪೇಜ್‌ ತೆರೆದುಕೊಳ್ಳದೇ ಇರುವುದರಿಂದ ಬಳಕೆದಾರರು ಸಮಸ್ಯೆ ಎದುರಿಸಿದ್ದಾರೆ.

ಎಲಾನ್ ಮಸ್ಕ್ ಟ್ವಿಟರ್ ಅನ್ನು ಖರೀದಿಸಿದ ಬಳಿಕ ಕಂಪನಿಯಲ್ಲಿ ಹಲವು ಬದಲಾವಣೆಗಳನ್ನು ಮಾಡುತ್ತಿದ್ದಾರೆ.

ಅದರ ಬೆನ್ನಲ್ಲೇ, ಶುಕ್ರವಾರ ಬೆಳಗ್ಗೆ ಟ್ವಿಟರ್ ಕೈಕೊಟ್ಟಿದ್ದು, ಬಳಕೆದಾರರಿಗೆ ವೆಬ್ ಮತ್ತು ಡೆಸ್ಕ್‌ಟಾಪ್ ಆವೃತ್ತಿ ಲಭ್ಯವಾಗುತ್ತಿಲ್ಲ.

ಸ್ಮಾರ್ಟ್‌ಫೋನ್ ಆ್ಯಪ್‌ನಲ್ಲಿ ಟ್ವಿಟರ್ ಕಾರ್ಯನಿರ್ವಹಿಸುತ್ತಿದೆ.

ಹೊಸ ಕಾರ್ಯತಂತ್ರದ ಭಾಗವಾಗಿ ಟ್ವಿಟರ್, ವೆರಿಫೈಡ್ ಖಾತೆಗಳಿಗೆ ಶುಲ್ಕ ವಿಧಿಸಲು ಮುಂದಾಗಿದೆ. ತಿಂಗಳ ಚಂದಾದಾರಿಕೆ ಶುಲ್ಕವನ್ನು ಟ್ವಿಟರ್ ಬಳಕೆದಾರರಿಗೆ ವಿಧಿಸಲಿದೆ.

ಜತೆಗೆ ಉದ್ಯೋಗ ಕಡಿತಕ್ಕೂ ಮುಂದಾಗಿದ್ದು, ಶುಕ್ರವಾರದಿಂದಲೇ ವಿವಿಧ ಹಂತಗಳಲ್ಲಿ ಕ್ರಮ ಕೈಗೊಳ್ಳುವುದಾಗಿ ಕಂಪನಿ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT