ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಳ್ಳಿಗಾಡಿನ ಪಾಕ ಪ್ರವೀಣರ ಯೂಟ್ಯೂಬ್ ಚಾನೆಲ್ಗೆ 1 ಕೋಟಿ ಚಂದಾದಾರರು!

ಅಕ್ಷರ ಗಾತ್ರ

ಬೆಂಗಳೂರು; 'ದಿ ವಿಲೇಜ್ ಕುಕ್ಕಿಂಗ್ ಚಾನೆಲ್' ಎಂಬ ಯೂಟ್ಯೂಬ್ ಚಾನೆಲ್ 10 ಮಿಲಿಯನ್ (1ಕೋಟಿ) ಚಂದಾದಾರರನ್ನು ಸಂಪಾದಿಸಿ ಗಮನ ಸೆಳೆದಿದೆ.

ತಮಿಳುನಾಡಿನ ರೈತ ಕುಟುಂಬವೊಂದು ಹುಟ್ಟಿಹಾಕಿರುವ ಈ ಯೂಟ್ಯೂಬ್ ಚಾನೆಲ್ ಭಾರಿ ಪ್ರಸಿದ್ಧಿ ಪಡೆದಿದೆ. ಪುಡುಕೊಟ್ಟೈನ ಚಿನ್ನಾ ವೀರಮಂಗಳಂ ಅವರ ಐದು ಜನ ಮೊಮ್ಮಕ್ಕಳು ಸೇರಿಕೊಂಡು ದೇಶಿ ಅಡುಗೆ ತಯಾರಿಕೆ ಬಗ್ಗೆ The Village Cooking Channel (VCC) ನ್ನು 2018 ರಲ್ಲಿ ಆರಂಭಿಸಿದ್ದರು. ಚಾನೆಲ್ ಮೂರೇ ವರ್ಷದಲ್ಲಿ ಅದ್ಭುತ ಸಾಧನೆ ಮಾಡಿದೆ.

ಚಿನ್ನಾ ಅವರ ತಂಡದಲ್ಲಿ ಅವರ ಮೊಮ್ಮಕ್ಕಳಾದ ಮುರುಗೇಶನ್, ತಮಿಳ್ ಸೆಲ್ವನ್, ಅಯ್ಯನಾರ್, ಮುತ್ತುಮಾಣಿಕಂ, ಸುಬ್ರಮಣಿಯನ್ ಮತ್ತು ಪೆರಿಯಾತಂಬಿ ಇದ್ದಾರೆ. ಇದರಲ್ಲಿ ಸುಬ್ರಮಣಿಯನ್ ಅಡುಗೆ ವಿಷಯದಲ್ಲಿ ಉನ್ನತ ವ್ಯಾಸಂಗ ಮಾಡಿದ್ದಾರೆ. ಚಿನ್ನಾ ಅವರ ದೇಶಿ ಅಡುಗೆ ತಯಾರಿಕೆಯಿಂದ ಪ್ರೇರಣೆಗೊಂಡು ಈ ಅಡುಗೆ ಚಾನೆಲ್ ಆರಂಭವಾಗಿದೆ.

ಒಂದು ಕೋಟಿ ಚಂದಾದಾರರನ್ನು ಗಳಿಸಿದ್ದಕ್ಕೆ ಯೂಟ್ಯೂಬ್ ಇವರಿಗೆ ಇತ್ತೀಚೆಗೆ ಡೈಮಂಡ್ ಬಟನ್ ಪ್ರಶಸ್ತಿ ನೀಡಿ ಅಭಿನಂದಿಸಿದೆ.ಚಾನೆಲ್ ಇಲ್ಲಿಯವರೆಗೂ 200 ಕೋಟಿಗೂ ಅಧಿಕ ವೀಕ್ಷಣೆಗಳನ್ನು ಕಂಡಿದೆ.

ಈ ಚಾನೆಲ್ ವಾರದಲ್ಲಿ ನಾಲ್ಕು ವಿಡಿಯೊಗಳನ್ನು ಬಿಡುಗಡೆ ಮಾಡುತ್ತೆ. ಲಾಕ್ಡೌನ್ ಇದ್ದಾಗ ವಾರದಲ್ಲಿ ಒಂದೇ ವಿಡಿಯೊ ಹಾಕಲಾಗುತ್ತಿತ್ತು. ಇವರು ಮಾಡುವ ಬಗೆ ಬಗೆಯ ದೇಶಿಯ ಅಡುಗೆ ಹಾಗೂ ವಿಶಿಷ್ಠವಾದ ನಿರೂಪಣಾ ಶೈಲಿಯನ್ನು ಜನ ಮೆಚ್ಚಿಕೊಂಡಿದ್ದಾರೆ. ಅಲ್ಲದೆ, ವಿಡಿಯೊ ತಂತ್ರಜ್ಞಾನ ಹಾಗೂ ಗುಣಮಟ್ಟ ಅತ್ಯ್ಯನ್ನತವಾಗಿರುತ್ತದೆ. ಸಸ್ಯಾಹಾರಿ, ಮಾಂಸಾಹಾರಿ ಖಾದ್ಯಗಳನ್ನು ನದಿ ಅಥವಾ ಗದ್ದೆ ಬದಿಯಲ್ಲಿ ಸಿದ್ದಪಡಿಸಿ ಸ್ಥಳೀಯರಿಗೆ ಉಣಬಡಿಸುತ್ತಾರೆ. ನಂತರ ಆ ವಿಡಿಯೊ ಯೂಟ್ಯೂಬ್ ನಲ್ಲಿ ಪ್ರಸಾರವಾಗುತ್ತೆ.

ವಿಶೇಷವೆಂದರೆ ಈ ಯೂಟ್ಯೂಬ್ ಚಾನೆಲ್ ನಿಂದ ಈ ತಂಡದವರು ಪ್ರತಿ ತಿಂಗಳು 10 ಲಕ್ಷ ರೂಪಾಯಿ ಆದಾಯ ಗಳಿಸುತ್ತಾರೆ. ಇದಕ್ಕಾಗಿ ಒಟ್ಟಾರೆ ಎರಡು ಲಕ್ಷ ರೂಪಾಯಿ ಖರ್ಚು ಮಾಡುತ್ತಾರೆ ಎಂದು ದಿ ನ್ಯೂಸ್ ಮಿನಿಟ್ ವರದಿ ಮಾಡಿದೆ.

ಕಳೆದ ತಮಿಳುನಾಡು ವಿಧಾನಸಭೆ ಚುನಾವಣೆಯ ಪ್ರಚಾರಕ್ಕೆ ತಮಿಳುನಾಡಿಗೆ ಬಂದಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಇದೇ ಚಾನೆಲ್ ಮೂಲಕ ಮಶ್ರೂಮ್ ಬಿರಿಯಾನಿ ತಯಾರಿಸಿ ತಿಂದ ವಿಡಿಯೊ ವೈರಲ್ ಆಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT