ವಾಟ್ಸ್‌ಆ್ಯಪ್: ನಿರ್ದಿಷ್ಟ ಜನರಿಗೆ ಮಾತ್ರ ಪ್ರೊಫೈಲ್ ಫೋಟೊ ಕಾಣಿಸುವ ಅಪ್‌ಡೇಟ್!

ಬೆಂಗಳೂರು: ಇತ್ತೀಚೆಗಷ್ಟೇ ಆ್ಯಂಡ್ರಾಯ್ಡ್ ಸ್ಮಾರ್ಟ್‌ಫೋನ್‌ನಿಂದ ಐಫೋನ್‌ಗೆ ಚಾಟ್, ಡಾಟಾ ವರ್ಗಾಯಿಸುವ ಆಯ್ಕೆ ಪರಿಚಯಿಸಿದ್ದ ವಾಟ್ಸ್‌ಆ್ಯಪ್, ಮತ್ತೊಂದು ಹೊಸ ಅಪ್‌ಡೇಟ್ ಪರಿಚಯಿಸಿದೆ.
ಬಳಕೆದಾರರ ಖಾಸಗಿತನ ಮತ್ತು ಭದ್ರತೆಗೆ ಸಂಬಂಧಿಸಿ ಹೊಸ ಅಪ್‌ಡೇಟ್ ಅನ್ನು ಬಿಡುಗಡೆ ಮಾಡಿರುವ ವಾಟ್ಸ್‌ಆ್ಯಪ್, ಡಿಸ್‌ಪ್ಲೇ ಪಿಕ್ಚರ್ (ಡಿಪಿ) ಅನ್ನು ಯಾರು ನೋಡಬೇಕು ಮತ್ತು ಯಾರು ನೋಡಬಾರದು ಎನ್ನುವ ಆಯ್ಕೆ ಮಾಡುವ ಅವಕಾಶವನ್ನು ಬಳಕೆದಾರರಿಗೆ ಒದಗಿಸಿದೆ.
ವಾಟ್ಸ್‌ಆ್ಯಪ್ ಸೆಟ್ಟಿಂಗ್ಸ್‌ಗೆ ಹೋಗಿ, ಅಲ್ಲಿ ಅಕೌಂಟ್ ಆಯ್ಕೆ ಮಾಡಿ. ಬಳಿಕ, ಪ್ರೈವೆಸಿ ಆಪ್ಷನ್ ಅಡಿಯಲ್ಲಿ ಪ್ರೊಫೈಲ್ ಫೋಟೊ ಎಂದಿರುವಲ್ಲಿ, ನಾಲ್ಕು ಆಯ್ಕೆಗಳಿರುತ್ತವೆ. ಅದರಲ್ಲಿ ನಿಮ್ಮ ಆದ್ಯತೆಗನುಸಾರ ಬೇಕಾಗಿರುವುದನ್ನು ಕ್ಲಿಕ್ ಮಾಡಿದರೆ ಆಯಿತು.
ಲಾಸ್ಟ್ ಸೀನ್‌ಗೂ ಇದೇ ಹಂತಗಳನ್ನು ಅನುಸರಿಸಿದರೆ ಸಾಕು.
ವಾಟ್ಸ್‌ಆ್ಯಪ್ ಸಂದೇಶ: ಬ್ಯಾಕ್ಅಪ್ ಮತ್ತು ಹೊಸ ಫೋನ್ಗೆ ವರ್ಗಾವಣೆ ಮಾಡುವುದು ಹೇಗೆ?
ಬಳಕೆದಾರರು, ತಮ್ಮ ಡಿಪಿ ಮತ್ತು ಲಾಸ್ಟ್ ಸೀನ್ ಅನ್ನು ನಿರ್ದಿಷ್ಟ ಜನರು ಮಾತ್ರ ನೋಡಿದರೆ ಸಾಕು ಎಂದಿದ್ದರೆ, ಇಲ್ಲಿ ಹೇಳಿರುವ ವಿಧಾನ ಅನುಸರಿಸಿ, ಸೆಟ್ಟಿಂಗ್ಸ್ ಬದಲಾಯಿಸಿಕೊಳ್ಳಬಹುದು.
ಆ್ಯಂಡ್ರಾಯ್ಡ್ನಿಂದ ಐಫೋನ್‌ಗೆ ವಾಟ್ಸ್‌ಆ್ಯಪ್ ಚಾಟ್ ವರ್ಗಾವಣೆ: ಹೊಸ ಅಪ್‌ಡೇಟ್
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.