ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಟ್ಸ್‌ಆ್ಯಪ್ ಗ್ರೂಪ್‌ನ ಯಾವುದೇ ಸಂದೇಶ ಅಳಿಸಿ ಹಾಕಬಹುದು ಅಡ್ಮಿನ್; ಹೊಸ ಫೀಚರ್

Last Updated 30 ಜನವರಿ 2022, 7:05 IST
ಅಕ್ಷರ ಗಾತ್ರ

ನವದೆಹಲಿ: ಮೆಟಾ ಒಡೆತನದ ಜನಪ್ರಿಯ ಮೆಸೇಜಿಂಗ್‌ ಅಪ್ಲಿಕೇಷನ್‌ 'ವಾಟ್ಸ್‌ಆ್ಯಪ್‌' ಮತ್ತೊಂದು ಹೊಸ ವೈಶಿಷ್ಯವನ್ನು ಹೊರ ತರುವ ಪ್ರಯತ್ನದಲ್ಲಿದೆ. ವಾಟ್ಸ್‌ಆ್ಯಪ್‌ ಗುಂಪುಗಳಲ್ಲಿ ಅನಗತ್ಯ ಸಂದೇಶಗಳನ್ನು ನಿಯಂತ್ರಿಸಲು ಅಡ್ಮಿನ್‌ಗಳಿಗೆ ಹೆಚ್ಚುವರಿ ಅವಕಾಶ ಸಿಗಲಿದೆ.

ವಾಟ್ಸ್‌ಆ್ಯಪ್‌ನ ಅಪ್‌ಡೇಟ್‌ಗಳು, ಪ್ರಯೋಗಗಳ ಕುರಿತು ಮಾಹಿತಿ ನೀಡುವ ಡಬ್ಲ್ಯುಎಬೀಟಾಇನ್ಫೊ (WABetaInfo) ಪ್ರಕಾರ, ವಾಟ್ಸ್‌ಆ್ಯಪ್‌ ಗುಂಪಿನಲ್ಲಿರುವ ಯಾವುದೇ ಸದಸ್ಯ ಗುಂಪಿಗೆ ಕಳುಹಿಸುವ ಸಂದೇಶಗಳ ಮೇಲೆ ಅಡ್ಮಿನ್‌ ನಿಯಂತ್ರಣ ಸಾಧಿಸಬಹುದಾಗುತ್ತದೆ. ಅಂದರೆ, ಗುಂಪಿಗೆ ಬರುವ ಸಂದೇಶವನ್ನು ಉಳಿಸಿಕೊಳ್ಳಬೇಕೆ ಅಥವಾ ತೆಗೆದು ಹಾಕಬೇಕೆ ಎಂಬುದನ್ನು ಅಡ್ಮಿನ್‌ ನಿರ್ಧರಿಸಿ ಕ್ರಮ ತೆಗೆದುಕೊಳ್ಳಬಹುದು. ಅಡ್ಮಿನ್‌ ನಿರ್ದಿಷ್ಟ ಸಂದೇಶವನ್ನು ತೆಗೆದು ಹಾಕಿದರೆ, 'ಈ ಸಂದೇಶವು ಅಡ್ಮಿನ್‌ರಿಂದ ಅಳಿಸಿ ಹಾಕಲ್ಪಟ್ಟಿದೆ' ಎಂದು ಕಾಣಿಸಿಕೊಳ್ಳುತ್ತದೆ.

ವಾಟ್ಸ್‌ಆ್ಯಪ್‌ ಬೀಟಾ ಆವೃತ್ತಿಯ ಮುಂದಿನ ಅಪ್‌ಡೇಟ್‌ನಲ್ಲಿ ಈ ಆಯ್ಕೆಯು ಸೇರ್ಪಡೆಯಾಗಲಿದೆ. ಮುಂದೆ ಗುಂಪಿನ ಅಡ್ಮಿನ್‌, ಗುಂಪಿನ ಯಾವುದೇ ಸದಸ್ಯರ ಸಂದೇಶವನ್ನು ಅಳಿಸಿ ಹಾಕುವುದು ಸಾಧ್ಯವಾಗಲಿದೆ. ಈ ಕುರಿತು ಡಬ್ಲ್ಯುಎಬೀಟಾಇನ್ಫೊ ಸ್ಕ್ರೀನ್‌ಶಾಟ್‌ ಅನ್ನು ಟ್ವೀಟಿಸಿದೆ.

ಇದರೊಂದಿಗೆ ವಾಟ್ಸ್‌ಆ್ಯಪ್‌ ತನ್ನ ಡೆಸ್ಕ್‌ಟಾಪ್‌ ಆ್ಯಪ್‌ ಮತ್ತು ವೆಬ್‌ ಆವೃತ್ತಿಗೆ ಎರಡು ಹಂತಗಳ ಪರಿಶೀಲನಾ ವ್ಯವಸ್ಥೆಯನ್ನು ಅಭಿವೃದ್ಧಿ ಪಡಿಸುತ್ತಿದೆ. ವಾಟ್ಸ್‌ಆ್ಯಪ್‌ ಮೊಬೈಲ್‌ ಆ್ಯಪ್‌ ಆವೃತ್ತಿಯಲ್ಲಿ ಈಗಾಗಲೇ ಟು ಸ್ಟೆಪ್‌ ವೆರಿಪಿಕೇಷನ್‌ ಆಯ್ಕೆಯು ಲಭ್ಯವಿದೆ. ವಾಟ್ಸ್‌ಆ್ಯಪ್‌ಗೆ ಮೊಬೈಲ್‌ ಸಂಖ್ಯೆ ನೋಂದಾಯಿಸುವಾಗ ವೈಯಕ್ತಿಕವಾಗಿ ನಿಗದಿ ಪಡಿಸಿಕೊಂಡಿರುವ ಪಿನ್‌ ಸಂಖ್ಯೆ ನಮೂದಿಸಬೇಕಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT