ಭಾನುವಾರ, ಮೇ 22, 2022
21 °C

Whatsapp Privacy: ವಿರೋಧವಿದ್ದರೂ ಅಪ್‌ಡೇಟ್ ಪರಿಚಯಿಸಲು ಮುಂದಾದ ವಾಟ್ಸ್ ಆ್ಯಪ್

ರಾಯಿಟರ್ಸ್ Updated:

ಅಕ್ಷರ ಗಾತ್ರ : | |

DH File

ನವದೆಹಲಿ: ಫೇಸ್‌ಬುಕ್ ಒಡೆತನದ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸ್ ಆ್ಯಪ್, ಹೊಸದಾಗಿ ಪರಿಚಯಿಸಲು ಉದ್ದೇಶಿಸಿರುವ ಖಾಸಗಿತನ ಕುರಿತ ಅಪ್‌ಡೇಟ್ ಅನ್ನು ಜಾರಿಗೆ ತರುತ್ತಿರುವುದಾಗಿ ಘೋಷಿಸಿದೆ. ಸಾಕಷ್ಟು ವಿರೋಧ ಕೇಳಿಬಂದರೂ, ವಾಟ್ಸ್ ಆ್ಯಪ್, ಹೊಸ ಅಪ್‌ಡೇಟ್ ಅನ್ನು ಜಾರಿ ಮಾಡುತ್ತಿದ್ದು, ಹೆಚ್ಚುವರಿ ಮಾಹಿತಿಯನ್ನು ಆ್ಯಪ್‌ನಲ್ಲಿ ಬ್ಯಾನರ್ ಮೂಲಕ ಪ್ರದರ್ಶಿಸಿ ಜನರಿಗೆ ತಿಳಿವಳಿಕೆ ನೀಡಲು ಮುಂದಾಗಿದೆ.

ಜನವರಿಯಲ್ಲಿ ವಾಟ್ಸ್ ಆ್ಯಪ್ ಹೊಸ ಖಾಸಗಿತನ ನೀತಿಯ ಕುರಿತು ಪ್ರಕಟಿಸಿತ್ತು. ಇದರ ಪ್ರಕಾರ, ಫೇಸ್‌ಬುಕ್ ಮತ್ತು ಸಮೂಹದ ಇತರ ಆ್ಯಪ್‌ಗಳು ಬಳಕೆದಾರರ ಮಾಹಿತಿ ಹಂಚಿಕೊಳ್ಳುವ ಅವಕಾಶವಿದ್ದು, ಅದರ ಜತೆಗೇ ಫೋನ್ ನಂಬರ್ ಮತ್ತು ಲೊಕೇಶನ್ ಕೂಡ ಪಡೆದುಕೊಳ್ಳಲು ಅವಕಾಶ ಕಲ್ಪಿಸಲಿದೆ ಎಂದಿತ್ತು. ಈ ಹೊಸ ನೀತಿ ಬಳಕೆದಾರರಲ್ಲಿ ಅಸಮಾಧಾನ ಸೃಷ್ಟಿಸಿದ್ದು, ಹೆಚ್ಚಿನ ಜನತೆ ಪ್ರತಿಸ್ಪರ್ಧಿ ಆ್ಯಪ್‌ಗಳಾದ ಟೆಲಿಗ್ರಾಂ ಮತ್ತು ಸಿಗ್ನಲ್‌ನತ್ತ ಹೊರಳಿದ್ದರು.

ಹೊಸ ಅಪ್‌ಡೇಟ್ ವಿವಾದ ಸೃಷ್ಟಿಗೆ ಕಾರಣವಾಗುತ್ತಲೇ, ಫೆಬ್ರುವರಿಯಲ್ಲಿ ಬಿಡುಗಡೆಗೆ ಉದ್ದೇಶಿಸಿದ್ದ ನೂತನ ನೀತಿಯನ್ನು ವಾಟ್ಸ್ ಆ್ಯಪ್, ಮೇ ತಿಂಗಳಿಗೆ ಮುಂದೂಡಿತ್ತು. ಅಲ್ಲದೆ, ಬ್ಯುಸಿನೆಸ್ ಸಂವಹವನ್ನು ಮಾತ್ರ ಹಂಚಿಕೊಳ್ಳುವುದಾಗಿ ಹೇಳಿದ್ದ ಫೇಸ್‌ಬುಕ್, ಇತರ ಯಾವುದೇ ಮಾಹಿತಿ ಹಂಚಿಕೊಳ್ಳುವುದಿಲ್ಲ ಎಂದಿತ್ತು.

ಆದರೆ ಇತ್ತೀಚಿನ ಬ್ಲಾಗ್ ಪೋಸ್ಟ್‌ನಲ್ಲಿ, ಬಳಕೆದಾರರಿಗೆ ನೂತನ ಅಪ್‌ಡೇಟ್ ಅನ್ನು ಒದಗಿಸುತ್ತಿರುವುದಾಗಿಯೂ, ಆ್ಯಪ್ ಬಳಸಲು ಇಚ್ಛಿಸಿದ್ದರೆ, ಹೊಸ ಅಪ್‌ಡೇಟ್ ನೀತಿಯನ್ನು ಒಪ್ಪಿಕೊಳ್ಳುವಂತೆಯೂ ಸೂಚನೆ ನೀಡಲು ಮುಂದಾಗುತ್ತಿದ್ದೇವೆ ಎಂದು ಹೇಳಿದೆ. ಅಲ್ಲದೆ, ಈ ಕುರಿತು ಬಳಕೆದಾರರಿಗೆ ಸಂಶಯಗಳಿದ್ದರೆ ಅದನ್ನು ಪರಿಹರಿಸುತ್ತೇವೆ ಎಂದು ವಾಟ್ಸ್ ಆ್ಯಪ್ ಹೇಳಿದೆ.

ಇದನ್ನೂ ಓದಿ: 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು