ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

1000 ಕೋಟಿ ನಕಲಿ ಫೋನ್‌ ನಂಬರ್ ಕಿತ್ತು ಹಾಕಿದ ಅಮೆಜಾನ್‌

Last Updated 10 ಮೇ 2021, 6:43 IST
ಅಕ್ಷರ ಗಾತ್ರ

ನ್ಯೂಯಾರ್ಕ್‌: ‘ಕಳೆದ ವರ್ಷ ತನ್ನ ವೆಬ್‌ಸೈಟ್‌ನಿಂದ 1000 ಕೋಟಿ ನಕಲಿ ಫೋನ್ ನಂಬರ್‌ಗಳನ್ನು ಬ್ಲಾಕ್‌ ಮಾಡಲಾಗಿದೆ’ ಎಂದು ಅಮೆಜಾನ್‌ ಸೋಮವಾರ ತಿಳಿಸಿದೆ.

2019ರಲ್ಲಿ ಈ ಬಗ್ಗೆ ಪತ್ತೆ ಹಚ್ಚಲು ಅಮೆಜಾನ್‌, ಹೊಸ ತಂತ್ರಜ್ಞಾನವನ್ನು ಅಳವಡಿಸಿತ್ತು. ಈ ಬಳಿಕ ಅಮೆಜಾನ್‌ ನಕಲಿ ಖಾತೆಗಳ ನಿಗ್ರಹ ಸಂಬಂಧಿತ ಮೊದಲ ವರದಿಯನ್ನು ಬಿಡುಗಡೆ ಮಾಡಿತು. ಇದರಲ್ಲಿ ನಕಲಿ ಫೋನ್ ನಂಬರ್‌ಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡಲಾಗಿದೆ. 2019ಕ್ಕೆ ಹೋಲಿಸಿದರೆ ಕಳೆದ ವರ್ಷ ಶೇಕಡ 67ರಷ್ಟು ನಕಲಿ ಸಂಖ್ಯೆಗಳನ್ನು ಬ್ಲಾಕ್‌ ಮಾಡಲಾಗಿದೆ.

‘ಈ ಕೋವಿಡ್‌ ಪಿಡುಗಿನ ಸಂದರ್ಭದಲ್ಲಿ ಹೆಚ್ಚಿನ ಗ್ರಾಹಕರು ಆನ್‌ಲೈನ್‌ನಿಂದ ಖರೀದಿಗಳನ್ನು ಮಾಡುತ್ತಿದ್ದಾರೆ. ಇದನ್ನೇ ಬಂಡವಳನ್ನಾಗಿ ಮಾಡಿಕೊಂಡಿರುವ ನಕಲಿ ಮಾರಾಟಗಾರರು, ಗ್ರಾಹಕರಿಗೆ ಮೋಸ ಮಾಡಿ, ಲಾಭವನ್ನು ಪಡೆಯಲು ಪ್ರಯತ್ನಿಸುತ್ತಾರೆ’ ಎಂದು ಅಮೆಜಾನ್‌ ಹೇಳಿದೆ.

‘ಅಮೆಜಾನ್‌ ಕಳೆದ ಹಲವಾರು ವರ್ಷಗಳಿಂದ ಈ ಸಮಸ್ಯೆಯನ್ನು ಎದುರಿಸುತ್ತಿದೆ. ಆದರೆ 2019ರಲ್ಲಿ ಇದರಲ್ಲಿ ಏರುಗತಿ ಕಂಡಿದೆ. ಇದರಿಂದಾಗಿ ಸಂಸ್ಥೆಯ ಘನತೆಗೆ ಧಕ್ಕೆ ಉಂಟಾಗಿದೆ. ತಮ್ಮ ಬ್ರ್ಯಾಂಡ್‌ಗಳ ನಕಲಿ ವಸ್ತುಗಳನ್ನು ವೆಬ್‌ಸೈಟ್‌ನಲ್ಲಿ ಮಾರಾಟ ಮಾಡಲಾಗುತ್ತಿದೆ ಎಂಬುದನ್ನು ಅರಿತ ಬ್ರ್ಯಾಂಡ್‌ಗಳು ಅಮೆಜಾನ್‌ ಜತೆ ಕೈಜೋಡಿಸಲು ಹಿಂಜರಿಯಬಹುದು. ಅಲ್ಲದೆ ಗ್ರಾಹಕರೂ ಕೂಡ ಅಮೆಜಾನ್‌ ಮೇಲಿನ ಭರವಸೆಯನ್ನು ಕಳೆದುಕೊಳ್ಳಬಹುದು’ ಎಂದು ಸಂಸ್ಥೆ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT