ಉಚಿತ ಸಿಗುತ್ತದೆ ಎಂದರೆ ಎಲ್ಲವೂ ಇರಲಿ ಎಂಬ ಮನಸ್ಥಿತಿ ಅವಸರದ ಈ ಯುಗದಲ್ಲಿ ಬಹುತೇಕರಲ್ಲಿದೆ. ಸಾರ್ವಜನಿಕ ಸ್ಥಳಗಳಲ್ಲಿ ಉಚಿತವಾಗಿ ವೈಫೈ ಇಂಟರ್ನೆಟ್ ಸಂಪರ್ಕ ವ್ಯವಲ್ಥೆ ಸಿಗುತ್ತದೆ ಎಂದರೆ ಯಾರಿಗೆ ಬೇಡ?. ಈ ರೀತಿಯ ವೈಫೈ ಸೌಕರ್ಯ ಇರುವಲ್ಲಿಗೇ ಹೋಗಿ, ಅಲ್ಲಿ ಸಾಕಷ್ಟು ಮೂವಿಗಳನ್ನು ನೋಡುವುದೋ, ಡೌನ್ಲೋಡ್ ಮಾಡುವುದೋ... ಅಂತರಜಾಲ ಜಾಲಾಡುವುದೋ... ಹೀಗೆ ಎಲ್ಲವನ್ನೂ ಮಾಡಿಕೊಂಡು ಮನೆಗೆ ಮರಳುವವರೂ ಇದ್ದಾರೆ. ವಿಶೇಷವಾಗಿ ಈಗಿನ ಮೊಬೈಲ್-ಪ್ರಿಯ ಪೀಳಿಗೆಯ ಯುವಜನರಿಗೆ ತಾವಿರುವ ತಾಣಗಳ ಸುತ್ತಮುತ್ತ ಎಲ್ಲೆಲ್ಲ ಉಚಿತ ವೈಫೈ ಸೌಕರ್ಯ ಸಿಗುತ್ತದೆ ಎಂಬುದು ಬಹುತೇಕ ತಿಳಿದೇ ಇರುತ್ತದೆ.

ಆದರೆ...ಉಚಿತವಾಗಿ ಸಿಗುವುದು ಅಪಾಯಕಾರಿ! ನಾವು ಎಚ್ಚರಿಕೆ ವಹಿಸದಿದ್ದರೆ ಮುಂದೆ ಪಶ್ಚಾತ್ತಾಪ ಪಡುವುದಕ್ಕೆ ಸಮಯವೂ ಇಲ್ಲದಾಗಬಹುದು. ಕಷ್ಟಪಟ್ಟು ಸಂಪಾದಿಸಿದ ಹೆಸರು, ಹಣ, ಖಾಸಗಿ ಮಾಹಿತಿಗಳೆಲ್ಲವೂ ಕೆಲವೇ ಕ್ಷಣಗಳಲ್ಲಿ ಮಣ್ಣುಪಾಲಾಗಬಹುದು.

ಕೆಫೆ, ಮಾಲ್ಗಳು, ರೈಲು ನಿಲ್ದಾಣಗಳು, ಬಸ್ ನಿಲ್ದಾಣಗಳು, ವಿಮಾನ ನಿಲ್ದಾಣ ಮುಂತಾದವುಗಳಲ್ಲಿ ಉಚಿತ ವೈಫೈ ಸಂಪರ್ಕ ಸಿಗುತ್ತದೆ. ನಮ್ಮ ಮೊಬೈಲ್ ಡೇಟಾಕ್ಕಿಂತ ವೇಗವಾಗಿಯೂ, ಅದಕ್ಕೂ ಮೇಲಾಗಿ ಉಚಿತವಾಗಿಯೂ ದೊರೆಯುತ್ತಿರುವುದರಿಂದ ಖುಷಿಯೂ ಆಗುತ್ತದೆ. ಮತ್ತು ಅಮೂಲ್ಯ ಮಾಹಿತಿಗಳ ಆಗರವಾಗಿರುವ ನಮ್ಮ ಮೊಬೈಲ್ ಫೋನ್ ಅಥವಾ ಲ್ಯಾಪ್ಟಾಪನ್ನು ಸಂಪರ್ಕಿಸುತ್ತೇವೆ. ಆದರೆ ಆ ಖುಷಿ ಕ್ಷಣಿಕವಾಗಬಹುದು.

ಏನಾಗಬಹುದು?

ಸರಿಯಾದ ಟೂಲ್ ಹೊಂದಿರುವ, ತಂತ್ರಜ್ಞಾನದ ಅರಿವಿರುವ ಯಾರೇ ಆದರೂ ನಿಮ್ಮ ಖಾಸಗಿ ಮಾಹಿತಿಗಳನ್ನೆಲ್ಲ ಕದಿಯಬಹುದಾಗಿದೆ.

ಸಾರ್ವಜನಿಕ ವೈಫೈ ವ್ಯವಸ್ಥೆಗಳು ಬಹುತೇಕ ಅಸುರಕ್ಷಿತವಾಗಿದ್ದು, ನಮ್ಮ ಡಿಜಿಟಲ್ ಸಾಧನಗಳಿಗೆ ಸುಲಭವಾಗಿ ಮಾಲ್ವೇರ್ಗಳು (ಕುತಂತ್ರಾಂಶಗಳು) ಸ್ವಯಂಚಾಲಿತವಾಗಿ ಅಳವಡಿಕೆಯಾಗಬಹುದು.

ನಿರ್ದಿಷ್ಟ ಕಂಪನಿಗಳು ಸೇವಾ ರೂಪದಲ್ಲಿ ಅವುಗಳನ್ನು ಒದಗಿಸಿರುತ್ತವೆಯಾದರೂ, ನಮ್ಮ ಸಾಧನದ ಸುರಕ್ಷತೆಗೆ ನಾವೇ ಜವಾಬ್ದಾರರು.

ವಂಚಕರು ಆ ಸ್ಥಳದ ಹೆಸರನ್ನೇ ಹೋಲುವಂತಹಾ ಸಾರ್ವಜನಿಕ ವೈಫೈ ಹಾಟ್ಸ್ಪಾಟ್ಗಳನ್ನು ತಮ್ಮ ಸಾಧನಗಳಲ್ಲೇ ತೆರೆಯಬಲ್ಲರು. ಅಂದರೆ ಉಚಿತ ಏರ್ಪೋರ್ಟ್ ವೈಫೈ, ಉಚಿತ ಕೆಫೆ ವೈಫೈ, ಉಚಿತ ಹೋಟೆಲ್ ವೈಫೈ ಮುಂತಾದ ಹೆಸರುಗಳಲ್ಲಿ ವೈಫೈ ಹಾಟ್ಸ್ಪಾಟ್ ಆನ್ ಮಾಡಿಕೊಂಡು, ನಿಮ್ಮ ಸಾಧನಗಳ ಸರ್ಚ್ಗೆ ಸಿಗುವಂತೆ ಮಾಡಿ, ವಂಚನೆಯ ಬಲೆಗೆ ಯಾರು ಬೀಳುತ್ತಾರೆ ಅಂತ ಗಾಳ ಹಿಡಿದು ಕಾದು ಕೂತಿರಬಹುದು.

ವಿವಿಧ ಖಾತೆಗಳಿಗೆ ನಾವು ಬಳಸುವ ಪಾಸ್ವರ್ಡ್ಗಳು, ಇಮೇಲ್ಗಳು, ಕ್ರೆಡಿಟ್ ಕಾರ್ಡ್ ಮಾಹಿತಿ, ವಿಳಾಸ, ಹೆಸರು, ಜನ್ಮದಿನಾಂಕ, ಫೋನ್ ನಂಬರ್ ಮುಂತಾದವೆಲ್ಲವೂ ಇಲ್ಲಿ ಸೋರಿಹೋಗಬಹುದು. ಅವುಗಳನ್ನೆಲ್ಲ ಸಂಗ್ರಹಿಸುವ ಕು-ತಂತ್ರಾಂಶಗಳಿರುತ್ತವೆ ಮತ್ತು ವಂಚಕರ ಕೈಯಲ್ಲಿರುವುದೇ ಇಂಥ ಅತ್ಯಾಧುನಿಕ 'ತಂತ್ರಜ್ಞಾನ' ಎಂಬುದು ನೆನಪಿರಲಿ.

ಮಾಲ್ವೇರ್ಗಳು ಸ್ವಯಂಚಾಲಿತವಾಗಿ ಅಥವಾ ಆಕಸ್ಮಿಕ ಕ್ಲಿಕ್ ಮೂಲಕವೂ ನಮ್ಮ ಸಾಧನಗಳಿಗೆ ಡೌನ್ಲೋಡ್ ಮಾತ್ರವಷ್ಟೇ ಅಲ್ಲ, ಇನ್ಸ್ಟಾಲ್ ಕೂಡ ಆಗಬಲ್ಲವು.

ವೈಫೈಗೆ ಸಂಪರ್ಕಿತವಾಗಿರುವ ಸಾಧನಗಳಿಂದ ಹೆಸರು, ಪಾಸ್ವರ್ಡ್ಗಳು, ಕ್ರೆಡಿಟ್ ಕಾರ್ಡ್ ಮಾಹಿತಿ, ಬ್ಯಾಂಕ್ ಖಾತೆ ವಿವರ, ವಿಳಾಸ ಮುಂತಾದವುಗಳನ್ನೆಲ್ಲ ಈ ಕುತಂತ್ರಾಂಶಗಳು ಕಲೆಹಾಕಿ ತಮ್ಮ ಒಡೆಯನಿಗೆ ರವಾನಿಸುತ್ತವೆ.

ಪರಿಣಾಮಗಳು: ನಮ್ಮ ಐಡೆಂಡಿಟಿಗೆ ಅಪಾಯ, ಬ್ಯಾಂಕ್ ಅಕೌಂಟ್ ಖಾಲಿಯಾಗುವ ಸಾಧ್ಯತೆ, ಸಾಮಾಜಿಕ ಖಾತೆಗಳೇ ಲಾಕೌಟ್ ಆಗುವ ಆತಂಕ, ನಮ್ಮದೇ ಹೆಸರಿನಲ್ಲಿ ಮತ್ತೊಂದು ಖಾತೆ ಸೃಷ್ಟಿಸಿ ಸ್ನೇಹಿತರಲ್ಲಿ ಹಣಕ್ಕಾಗಿ ಕೋರಿಕೆ, ಡಿಜಿಟಲ್ ಅರೆಸ್ಟ್, ಜೊತೆಗೆ, ನಮ್ಮ ಅಂತರಜಾಲಾಟದ ಮಾಹಿತಿಯನ್ನು ಕಾಪಿಡುವ 'ಕುಕೀಸ್'ಗಳ ಜಾಡು ಹಿಡಿದು, ಬ್ಲ್ಯಾಕ್ಮೇಲ್... ಇವೆಲ್ಲವೂ ಪೀಡೆಯಾಗಿ ಕಾಡಬಹುದು.

ಏನು ಮಾಡಬಹುದು?

ಸಾಧನದ 'ವೈಫೈ ಆಟೋ ಕನೆಕ್ಟ್' ವೈಶಿಷ್ಟ್ಯ ಆಫ್ ಮಾಡುವುದು

ವೈಫೈ ನೆಟ್ವರ್ಕ್ ಸಾಚಾ ಇದೆಯೋ ಅಂತ ಆ ಸ್ಥಳದ ಸಿಬ್ಬಂದಿಗಳಿಂದ ಖಚಿತಪಡಿಸಿಕೊಳ್ಳುವುದು

ವರ್ಚುವಲ್ ಪ್ರೈವೇಟ್ ನೆಟ್ವರ್ಕ್ (ವಿಪಿಎನ್) ಆ್ಯಪ್ ಉಪಯೋಗಿಸಿ ಇಂಟರ್ನೆಟ್ ಬಳಸುವುದು (ಶುಲ್ಕ ತೆರಬೇಕಾಗಬಹುದು). ಕೆಲವು ಅತ್ಯಾಧುನಿಕ ಮೊಬೈಲ್ ಸಾಧನಗಳಲ್ಲಿ ಅಂತರ್-ನಿರ್ಮಿತವಾಗಿ ಈ ಸೌಕರ್ಯ ಇರುತ್ತದೆ.

ಸಾರ್ವಜನಿಕ ವೈಫೈ ಬಳಸಲೇಬೇಕಿದ್ದರೆ, ಆನ್ಲೈನ್ ಬ್ಯಾಂಕಿಂಗ್ ಅಥವಾ ಹಣಕಾಸು ವಹಿವಾಟು, ಶಾಪಿಂಗ್, ಲಾಗಿನ್ ಮುಂತಾದವನ್ನು ಮಾಡದಿರುವುದು.

ಅಪರಿಚಿತ ಲಿಂಕುಗಳನ್ನು ತಪ್ಪಿಯೂ ಕ್ಲಿಕ್ ಮಾಡದಿರುವುದು (ಇಮೇಲ್, ವಾಟ್ಸ್ಆ್ಯಪ್, ಎಸ್ಎಂಎಸ್ ಮೂಲಕವೂ ಬಂದಿರಬಹುದು)

ಪಬ್ಲಿಕ್ ವೈಫೈ ಸಂಪರ್ಕಗಳು ಆ ಕ್ಷಣಕ್ಕೆ ಒಂದಿಷ್ಟು ಹಣ ಉಳಿತಾಯ ಮಾಡಬಹುದಾದರೂ, ಆಗಬಹುದಾದ ನಷ್ಟದ ಪ್ರಮಾಣ ಅಳೆಯಲಾಗದು. ಅನುಸರಿಸಬೇಕಾದ ಏಕೈಕ ಎಚ್ಚರಿಕೆ - ಆನ್ಲೈನ್ ಆಗಿರುವಾಗ ಸುರಕ್ಷಿತವಾಗಿರಿ. ಹಿರಿಯರಿಗೆ, ಮಕ್ಕಳಿಗೂ ಇದನ್ನು ಮನದಟ್ಟು ಮಾಡಿಸಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.