ಮುಂಬೈ: ಚೀನಾದ 59 ಆ್ಯಪ್‌ಗಳನ್ನು ಕೇಂದ್ರ ಸರ್ಕಾರ ನಿಷೇಧಿಸಿದ ಬೆನ್ನಲ್ಲೇ ಫೇಸ್‌ಬುಕ್ ಒಡೆತನದ ಇನ್‌ಸ್ಟಾಗ್ರಾಮ್ 'ಟಿಕ್‌ಟಾಕ್' ಬಳಕೆದಾರರನ್ನು ಸೆಳೆಯಲು 'ರೀಲ್ಸ್' ಆರಂಭಿಸುತ್ತಿದೆ. ಕಿರು ವಿಡಿಯೊ ಮಾಡಲು ಮತ್ತು ಹಂಚಿಕೊಳ್ಳಲು ಮೇಡ್ ಇನ್ ಇಂಡಿಯಾ ಆ್ಯಪ್‌ಗಳು ಪ್ರಚುರಗೊಳ್ಳುತ್ತಿವೆ. ಈ ನಡುವೆ ನೆಟಿಜನ್‌ಗಳ ಮಾಹಿತಿ ಕಸಿಯಲು 'ಟಿಕ್‌ಟಾಕ್ ಪ್ರೊ' ಹೆಸರಿನ ಕುತಂತ್ರಾಂಶದ (ಮಾಲ್‌ವೇರ್) ಮೂಲಕ ಪ್ರಯತ್ನಿಸಲಾಗುತ್ತಿದೆ.

ಆನ್‌ಲೈನ್ ವಂಚಕರು ಟಿಕ್‌ಟಾಕ್ ಪ್ರೊ ಹೆಸರಿನಲ್ಲಿ ಲಿಂಕ್ ಸೃಷ್ಟಿಸಿ ವಾಟ್ಸ್‌ಆ್ಯಪ್ ಸಂದೇಶಗಳ ಮೂಲಕ ಹರಿಯಬಿಡುತ್ತಿದ್ದಾರೆ. ಭಾರತದಲ್ಲಿ ನಿಷೇಧಿಸಲಾಗಿರುವ 'ಟಿಕ್‌ಟಾಕ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಲು ಈ ಲಿಂಕ್ ಬಳಸಿ' ಎಂಬ ಸಂದೇಶಗಳು ಈಗಾಗಲೇ ಭಾರತದ ಯುವ ಜನರನ್ನು ಸೆಳೆದಿದೆ. ಆ ಲಿಂಕ್ ಮೇಲೆ ಕ್ಲಿಕ್ ಮಾಡಿ ಡೌನ್‌ಲೋಡ್ ಪ್ರಯತ್ನಿಸಿದರೆ ಬಳಕೆದಾರರ ಮಾಹಿತಿ ಮೋಸಗಾರರ ವಶವಾಗುತ್ತದೆ ಎಂದು ಮಹಾರಾಷ್ಟ್ರ ಸೈಬರ್ ಘಟಕದ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

ಕುತಂತ್ರಾಂಶದ ಲಿಂಕ್‌ಗಳು ವಾಟ್ಸ್‌ಆ್ಯಪ್ ಅಲ್ಲದೆ ಟೆಕ್ಸ್ಟ್ ಮೆಸೇಜ್‌ಗಳ ಮೂಲಕವೂ ಹಂಚಿಕೆಯಾಗುತ್ತಿದೆ ಎಂದಿದ್ದಾರೆ. ಟಿಕ್‌ಟಾಕ್‌ಗೆ ಪರ್ಯಾಯ ಆ್ಯಪ್‌ಗಳ ಹುಡುಕಾಟದಲ್ಲಿರುವವರು ಹಾಗೂ ಮಾನಸಿಕವಾಗಿ ಟಿಕ್‌ಟಾಕ್ ಬಳಕೆಯಿಂದ ಇನ್ನೂ ಹೊರಬಾರದ ಬಳಕೆದಾರರೇ ಆನ್‌ಲೈನ್ ವಂಚಕರ ಟಾರ್ಗೆಟ್ ಆಗಿದ್ದಾರೆ.

ಸೆಲ್ಫ್‌ಸ್ಕ್ಯಾನ್: ನಿಷೇಧಿತ ಕ್ಯಾಮ್‌ಸ್ಕ್ಯಾನರ್ ಅಪ್ಲಿಕೇಷನ್‌ಗೆ ಪರ್ಯಾಯವಾಗಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೆಲ್ಫ್‌ಸ್ಕ್ಯಾನ್ (SelfScan)ಬಿಡುಗಡೆ ಮಾಡಿದ್ದಾರೆ. ರಾಜ್ಯದ ಮಾಹಿತಿ ತಂತ್ರಜ್ಞಾನ ಇಲಾಖೆಯಿಂದ ಸೆಲ್ಫ್‌ಸ್ಕ್ಯಾನ್ ಅಭಿವೃದ್ಧಿ ಪಡಿಸಲಾಗಿದೆ. ದಾಖಲೆಗಳು, ಬರಹ, ಲೇಖಗಳನ್ನು ಸ್ಕ್ಯಾನ್ ಮಾಡಲು ಈ ಆ್ಯಪ್ ಬಳಸಬಹುದಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್‌ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.