ಬೆಂಗಳೂರು: ಜಗತ್ತಿನಾದ್ಯಂತ ಕೋವಿಡ್–19 ಸಮರ ಮುಂದುವರಿದಿದ್ದು, ಹಿರಿಯ ನಾಗರಿಕರು ಕೊರೊನಾ ವೈರಸ್ ಸೋಂಕು ಪ್ರಭಾವಕ್ಕೆ ಬಹುಬೇಗ ಒಳಗಾಗುತ್ತಿದ್ದಾರೆ. ಹಿರಿಯ ನಾಗರಿಕರಿಗೆ ಸೋಂಕು ತಗುಲಿರುವ ಬಗ್ಗೆ ಆರಂಭದಲ್ಲಿಯೇ ಅಪಾಯ ಪತ್ತೆ ಮಾಡುವ 'ಸೇಫ್‌ಸೀನಿಯರ್ಸ್' (SafeSeniors)ಸಾಧನವನ್ನು ಅಭಿವೃದ್ಧಿ ಪಡಿಸಲಾಗಿದೆ.

ಭಾರತದಲ್ಲಿರುವ ಹಿರಿಯ ನಾಗರಿಕರ ಸಂಖ್ಯೆ ಸುಮಾರು 12 ಕೋಟಿ. ಕೋವಿಡ್–19 ಅಪಾಯವನ್ನು ಆರಂಭದಲ್ಲಿಯೇ ಪತ್ತೆ ಮಾಡುವ ಮೂಲಕ ಪ್ರಾಣಾಪಾಯವನ್ನು ತಪ್ಪಿಸಲು ಈ ಮೇಲ್ವಿಚಾರಣೆ ನಡೆಸುವ ಸೇಫ್‌ಸೀನಿಯರ್ಸ್ ಟೂಲ್ ನೆರವಾಗಲಿದೆ ಎಂದು ಆರ್‌ಪಿಜಿ ಲೈಫ್ ಸೈನ್ಸಸ್‌ನ ವ್ಯವಸ್ಥಾಪಕ ನಿರ್ದೇಶಕ ಯುಗಲ್ ಸಿಕ್ರಿ ಹೇಳಿದ್ದಾರೆ.

ಸೋಂಕು ರೋಗಗಳು, ಸಮುದಾಯ ವೈದ್ಯಕೀಯ, ಚಿಕಿತ್ಸಾತ್ಮಕ ಔಷಧ ತಯಾರಿಕೆ ಮತ್ತು ಕೋವಿಡ್–19 ನಿರ್ವಹಣೆಯ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿರುವ ತಜ್ಞರೊಡನೆ ಸಮಾಲೋಚಿಸುವ ಮೂಲಕ ಈ ವಿಶ್ಲೇಷಣಾ ಸಾಧನವನ್ನು ಅಭಿವೃದ್ಧಿಪಡಿಸಲಾಗಿದೆ.

ಹಿರಿಯ ನಾಗರಿಕರಲ್ಲಿ ಹಿಂದಿನಿಂದಲೂ ಇರುವ ಆರೋಗ್ಯ ಸಮಸ್ಯೆಗಳು, ಆರೋಗ್ಯ ಸ್ಥಿತಿಯ ಕುರಿತು ದಾಖಲೆಗಳು, ಜ್ವರ, ಕೆಮ್ಮು ಸೇರಿದಂತೆ ಇತರೆ ಲಕ್ಷಣಗಳನ್ನು ನಿತ್ಯವೂ ನಮೂದಿಸಬೇಕಾಗುತ್ತದೆ. ಕೆಲವೇ ಕ್ಲಿಕ್‌ಗಳಲ್ಲಿ ಆರೋಗ್ಯದ ಮೇಲ್ವಿಚಾರಣೆ ನಡೆಸುತ್ತದೆ. ಹಿರಿಯ ನಾಗರಿಕರು ಮತ್ತು ಅವರ ಪ್ರೀತಿಪಾತ್ರರಿಗೆ ಕೋವಿಡ್–19 ಅಪಾಯ ಮುನ್ಸೂಚನೆಗಳ ಬಗ್ಗೆ ಎಚ್ಚರಿಕೆ ರವಾನಿಸಿ ಚಿಕಿತ್ಸೆ ಪಡೆಯುವಂತೆ ಸೂಚಿಸುತ್ತದೆ.

ಸೇಫ್‌ಸೀನಿಯರ್ಸ್ ಟೂಲ್ ಕಾರ್ಯಾಚರಣೆ 12 ಭಾಷೆಗಳಲ್ಲಿ ಲಭ್ಯವಿದೆ. ಸಂಸ್ಥೆಯ ಅಧಿಕೃತ ವೆಬ್‌ಸೈಟ್ safeseniors.in ಮೂಲಕ ಹೆಚ್ಚಿನ ಮಾಹಿತಿ ಪಡೆಯಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.