ಮಂಡ್ಯ: ಲಾಕ್‌ಡೌನ್ ಅವಧಿಯಲ್ಲಿ ತುರ್ತು ಅಗತ್ಯಗಳಿಗಾಗಿ ಜನರು ವಾಹನ ಸಂಚಾರ ಪಾಸ್ ಪಡೆಯಲು ಅನುಕೂಲವಾಗುವಂತೆ ಜಿಲ್ಲಾ ಪೊಲೀಸ್ ಇಲಾಖೆ ‘ಎಂ– ಪಾಸ್’ ಮೊಬೈಲ್ ಆ್ಯಪ್ ಅಭಿವೃದ್ಧಿಗೊಳಿಸಿದೆ.

‘ತುರ್ತು ಪಾಸ್ ಪಡೆಯಲು ಜನರು ಕಚೇರಿಗಳ ಮುಂದೆ ಸಾಲುಗಟ್ಟಿ ನಿಲ್ಲುತ್ತಿದ್ದು ಇದನ್ನು ತಪ್ಪಿಸಲು ಎಂ–ಪಾಸ್ ಆ್ಯಪ್ ಅಭಿವೃದ್ಧಿಗೊಳಿಸಲಾಗಿದೆ. ಪ್ರಾಯೋಗಿಕವಾಗಿ ರೂಪಿಸಲಾಗಿದ್ದು ಸದ್ಯಕ್ಕೆ ಮಂಡ್ಯ ಜಿಲ್ಲಾ ಪೊಲೀಸ್ ವೆಬ್‌ಸೈಟ್‌ನಲ್ಲಿ ದೊರೆಯುತ್ತಿದೆ, ಶೀಘ್ರ ಪ್ಲೇ ಸ್ಟೋರ್‌ನಲ್ಲೂ ದೊರೆಯಲಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಪರಶುರಾಮ್ ಭಾನುವಾರ ತಿಳಿಸಿದರು.

‘ಸಾರ್ವಜನಿಕರು ಮೊದಲ ಹಂತದಲ್ಲಿ ಆ್ಯಪ್ ಮೂಲಕ ವೈಯಕ್ತಿಕ ಮಾಹಿತಿ, ವಿಳಾಸ, ಸಂಪರ್ಕ ಸಂಖ್ಯೆ, ಭಾವಚಿತ್ರ ಅಪ್‌ಲೋಡ್ ಮಾಡಬೇಕು. ಕಾರಣ, ಪೂರಕ ದಾಖಲಾತಿಗಳನ್ನೂ ಒದಗಿಸಬೇಕು. ಎರಡನೇ ಹಂತದಲ್ಲಿ ಅರ್ಜಿಯನ್ನು ಪರಿಶೀಲನೆ ನಡೆಸಲಾಗುವುದು. ಸಕಾರಣವಿದ್ದರೆ ತಕ್ಷಣ ಪಾಸ್ ನೀಡಲು ಶಿಫಾರಸು ಮಾಡಲಾಗುವುದು, ಇಲ್ಲದಿದ್ದರೆ ಕಾರಣ ಸಮೇತ ತಿರಸ್ಕರಿಸಲಾಗುವುದು’ ಎಂದು ಹೇಳಿದರು.

‘ಅರ್ಜಿ ಸ್ವೀಕೃತಗೊಂಡಿದ್ದರೆ ಪಾಸ್ ಡೌನ್‌ಲೋಡ್ ಮಾಡಿಕೊಳ್ಳಬಹುದು. ಪ್ರಿಂಟ್‌ಔಟ್ ಪಡೆಯುವ ಅವಶ್ಯಕತೆ ಇಲ್ಲ, ಮೊಬೈಲ್ ನಲ್ಲಿರುವ ಪಾಸ್ ತೋರಿಸಿದರೆ ಸಾಕು. ವೈದ್ಯಕೀಯ ಕಾರಣಗಳಿಗಾಗಿ ಹೊರ ಜಿಲ್ಲೆ, ಹೊರ ರಾಜ್ಯಗಳಿಗೆ ತೆರಳುವವರಿಗೆ ಇದು ಅನುಕೂಲವಾಗಲಿದೆ’ ಎಂದು ಹೇಳಿದರು.

ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಆ್ಯಪ್‌ಗೆ ಚಾಲನೆ ನೀಡಿದರು. ಜಿಲ್ಲಾ ಪಂಚಾಯಿತಿ ಸಿಇಒ ಕೆ.ಯಾಲಕ್ಕಿಗೌಡ, ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ ಶೋಭಾರಾಣಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.