ಸೋಮವಾರ, ಮಾರ್ಚ್ 1, 2021
29 °C

ಅಮೆಜಾನ್ 'ಗ್ರೇಟ್ ರಿಪಬ್ಲಿಕ್ ಡೇ' ಮಾರಾಟದಲ್ಲಿ ಏನೇನಿವೆ ಗೊತ್ತೇ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಇ–ಕಾಮರ್ಸ್‌ ದೈತ್ಯ ಸಂಸ್ಥೆ ‘ಅಮೆಜಾನ್‌ ಡಾಟ್‌ ಇನ್‌’, ಇದೇ 19ರಿಂದ 23ರ ವರೆಗೆ ‘ಗ್ರೇಟ್ ರಿಪಬ್ಲಿಕ್ ಡೇ’ ಆಚರಿಸಲಿದ್ದು, ಖರೀದಿದಾರರಿಗೆ ಭರಪೂರ ರಿಯಾಯ್ತಿಗಳನ್ನು ಘೋಷಿಸಿದೆ.

Amazon.in ಅಂತರ್ಜಾಲ ತಾಣದಲ್ಲಿ ಜನಪ್ರಿಯ ಬ್ರ್ಯಾಂಡ್‌ನ ಉತ್ಪನ್ನಗಳ ವಿಶೇಷ ಮಾರಾಟ ಉತ್ಸವ ಇದಾಗಿದೆ. ಕಡಿಮೆ ಬೆಲೆ, ಆಕರ್ಷಕ ಕೊಡುಗೆ, ಗರಿಷ್ಠ ಪ್ರಮಾಣದ ರಿಯಾಯ್ತಿ, ಸುಲಭ ಕಂತು ಮತ್ತಿತರ ವಿಶೇಷ ಕೊಡುಗೆಗಳು ಲಭ್ಯ ಇರಲಿವೆ.

ಜನವರಿ 20ರಿಂದ 23ರ ವರೆಗೆ ನಡೆಯಲಿರುವ ಈ ಖರೀದಿ ಉತ್ಸವದಲ್ಲಿ ಭಾಗಿಯಾಗುವವರಿಗೆ ಆಕರ್ಷಕ ಕೊಡುಗೆಗಳನ್ನು ನೀಡಲಾಗುವುದು. ಪ್ರೈಮ್‌ ಸದಸ್ಯರು ಜ. 19ರಿಂದಲೇ ಮಹಾ ಕೊಡುಗೆಗಳನ್ನು ತಮ್ಮದಾಗಿಸಿಕೊಳ್ಳಬಹುದು.

'ಬಿಸಿನೆಸ್ ಹೆಚ್ಚಿಸುವುದಕ್ಕೆ ಇದೊಂದು ಸುವರ್ಣಾವಕಾಶವಾಗಿದೆ. ಏಕೆಂದರೆ ದೊಡ್ಡ ಡಿಸ್ಕೌಂಟ್‌ಗಳು, ವಿಶೇಷ ಬಿಸಿನೆಸ್ ಡೀಲ್‌ಗಳ ಮೂಲಕ ಮಾಡಿರುವ ಎಲ್ಲಾ ಖರೀದಿಗಳ ಮೇಲೆ ಹೆಚ್ಚುವರಿಯಾಗಿ ಕನಿಷ್ಠ ಶೇ.15% ವರೆಗೆ ಉಳಿತಾಯವನ್ನು ಮಾಡಬಹುದಾಗಿದೆ. ಇದಲ್ಲದೆ. ಹೆಚ್ಚುವರಿಯಾಗಿ ಇನ್‌ವಾಯ್ಸ್‌ಗಳ ಮೇಲೆ ತೆರಿಗೆ ಕ್ರೆಡಿಟ್ ಕೂಡಾ ಪಡೆಯುವಿರಿ. ಇವೆಲ್ಲವೂ ಅಮೆಜಾನ್ ಬಿಸಿನೆಸ್‌ನಲ್ಲಿ ಮಾತ್ರವೇ ಲಭ್ಯವಿದೆ' ಎಂದು ಅಮೆಜಾನ್‌ ತಿಳಿಸಿದೆ.

ಏನೆಲ್ಲಾ ಲಭ್ಯವಿದೆ?

ಸ್ಮಾರ್ಟ್‌ಫೋನ್‌ಗಳು, ಎಲೆಕ್ಟ್ರಾನಿಕ್ಸ್, ಫ್ಯಾಶನ್ ಮತ್ತು ಸೌಂದರ್ಯ ವರ್ಧಕ ಸಾಧನಗಳು, ಹೋಮ್ ಮತ್ತು ಕಿಚನ್, ದೊಡ್ಡ ಗೃಹೋಪಯೋಗಿ ಉಪಕರಣಗಳು, ಟಿವಿ, ಪ್ರತಿದಿನದ ಅಗತ್ಯ ವಸ್ತುಗಳು ಹಾಗೂ ಇನ್ನಷ್ಟು ಪ್ರೋಡಕ್ಟ್‌ಗಳ ಮೇಲೆ ಮಾರಾಟಗಾರರಿಂದ ಟಾಪ್ ಡೀಲ್‌ಗಳು ಲಭ್ಯವಿದೆ.

ಸಣ್ಣ ಮತ್ತು ಮಧ್ಯಮ ಬಿಸಿನೆಸ್‌ನವರಿಂದ ಅನೇಕ ಪ್ರಕಾರದ ಪ್ರೋಡಕ್ಟ್‌ಗಳು ಆಕರ್ಷಕ ಬೆಲೆಗಳಲ್ಲಿ ಲಭ್ಯವಿದೆ

ಕರ ಕುಶಲಗಾರರು ಮತ್ತು ನೇಕಾರರರು, ಮಹಿಳಾ ಉದ್ಯಮಿಗಳು, ಸ್ಟಾರ್ಟ್-ಅಪ್‌ಗಳು ಮತ್ತು ಸ್ಥಳೀಯ ನೆರೆ-ಕರೆ ಸ್ಟೋರ್‌ಗಳು ಸೇರಿದಂತೆ ಅನೇಕ ಪ್ರಕಾರದ ಮಾರಾಟಗಾರರು ಒದಗಿಸುತ್ತಿರುವ ಮಿಲಿಯಗಟ್ಟಲೆ ಪ್ರೋಡಕ್ಟ್‌ಗಳು ಮಾರಾಟಕ್ಕಿವೆ. ಸ್ಮಾರ್ಟ್‌ಫೋನ್‌ಗಳು, ಕನ್‌ಸ್ಯೂಮರ್ ಇಲೆಕ್ಟ್ರಾನಿಕ್ಸ್, ಫ್ಯಾಶನ್ ಮತ್ತು ಸೌಂದರ್ಯ ವರ್ಧಕ ಸಾಧನಗಳು, ಹೋಮ್ ಮತ್ತು ಕಿಚನ್, ದೊಡ್ಡ ಗೃಹೋಪಯೋಗಿ ಉಪಕರಣಗಳು, ಟಿವಿಗಳು, ಪ್ರತಿದಿನ ಅಗತ್ಯತೆಗಳು ಹಾಗೂ ಇನ್ನಷ್ಟು ವೈವಿಧ್ಯಮಯ ಪ್ರೋಡಕ್ಟ್‌ಗಳು ಇಲ್ಲಿ ಲಭ್ಯವಿದೆ.

ಈ ಬೃಹತ್ ರಿಪಬ್ಲಿಕ್ ಡೇ ಮಾರಾಟ ಅವಧಿಯಲ್ಲಿ ವನ್‌ಪ್ಲಸ್, ಸ್ಯಾಮ್‌ಸಂಗ್, ಕ್ಸಿಯೋಮಿ ಮೊದಲಾದ ಅತಿ ದೊಡ್ಡ ಮೊಬೈಲ್ ಬ್ರಾಂಡ್‌ಗಳು; ಪ್ಯೂಮಾ, ಯುಎಸ್‌ಪಿಎ,  ಹಾಪ್‌ಸ್ಕಾಚ್, ಫಾಸಿಲ್, ಕ್ರಾಕ್ಸ್ ಮೊದಲಾದ ಫ್ಯಾಶನ್ ಬ್ರಾಂಡ್‌ಗಳು; ಮಾಮಾಅರ್ಥ್ ದ ಬಾಡಿ ಶಾಪ್ ಮೊದಲಾದ ಬ್ಯೂಟಿ ಬ್ರಾಂಡ್‌ಗಳು, ಲಿ ಓರಿಯಲ್ ಪ್ರೋಫೆಶನಲ್ ಮತ್ತು ಇನ್ನಷ್ಟು; ಎಚ್‌ಪಿ, ಲೆನೆವೋ, ಮಿ, ಜೆಬಿಎಲ್, ಬೋಎಟ್, ಸೋನಿ, ಸ್ಯಾಮ್‌ಸಂಗ್, ಅಮಾಜಿಫ್ಟ್, ಕೇನನ್, ಫ್ಯೂಜಿಫಿಲ್ಮ್; ಎಲ್‌ಜಿ, ಬೋಷ್, ಸ್ಯಾಮ್‌ಸಂಗ್, ವರ್ಲ್‌ಪೂಲ್ ಮೊದಲಾದ ಹೋಮ್ ಅಪ್ಲಯೆನ್ಸಸ್ ಬ್ರಾಂಡ್‌ಗಳು; ಯುರೇಕಾ ಫೋರ್ಬ್ಸ್, ಬಜಾಜ್, ವಿಪ್ರೋ, ಅಜಂತಾ, ಪಿಜನ್, ಮಿಲ್ಟನ್, ಸೆಲೋ, ಯೋನೆಕ್ಸ್, ಕೋರೆ, ಮಿಲ್ಟನ್‌ನ ಸ್ಪಾಟ್‌ಜೀರೊ, ಬೋಷ್, ಸ್ಕಾಚ್ ಬ್ರೈಟ್, ಗುಡ್‌ನೈಟ್, ಹಿಟ್, ಆಲ್ ಔಟ್, ಮೊದಲಾದ ಹೋಮ್, ಕಿಚನ್ ಮತ್ತು ಸ್ಪೋರ್ಟ್ಸ್ ಬ್ರಾಂಡ್‌ಗಳು; ಹೋಮ್‌ಸೆಂಟರ್, ಸ್ಲೀಪ್‌ವೆಲ್,  ನೀಲ್ ಕಮಲ್‌ನ @ಹೋಮ್ ಮೊದಲಾದ ಹೋಮ್ ಫರ್ನೀಚರ್ ಬ್ರಾಂಡ್‌ಗಳು; ಕ್ಯಾಡ್‌ಬರ್ರೀ, ಫೆಬೆಲ್ಲೋ, ಕೆಲ್ಲೋಗ್ಸ್, ಡಾಬರ್, ಏರಿಯಲ್ ಮೊದಲಾದ ಗ್ರೋಸರಿ ಮತ್ತು ಪ್ರತಿದಿನ ಅಗತ್ಯತೆ ಬ್ರಾಂಡ್‌ಗಳು, ಮೊದಲಾದವರ ಪ್ರೋಡಕ್ಟ್‌ಗಳಿಂದ ಗ್ರಾಹಕರು ಅತಿ ದೊಡ್ಡ ಉಳಿತಾಯಗಳನ್ನು ಪಡೆಯಬಹುದಾಗಿದೆ.

ಫ್ಯಾಶನ್ ಮತ್ತು ಸೌಂದರ್ಯ ವರ್ಧಕ ಸಾಧನಗಳು, ಆಕ್ಸೆಸ್ಸರೀಗಳು, ಉಡುಗೆ-ತೊಡಿಗೆಗಳು, ಆಫೀಸ್ ಪ್ರೋಡಕ್ಟ್‌ಗಳು ಮತ್ತು ಸ್ಟೇಷನರಿಗಳು, ಹೋಮ್, ಕಿಚನ್ ಮತ್ತು ಸ್ಪೋರ್ಟ್ಸ್ ಪ್ರೋಡಕ್ಟ್‌ಗಳು, ಫರ್ನೀಚರ್, ಗ್ರೋಸರಿ, ಟಾಯ್ಸ್ ಮತ್ತು ಬೇಬಿ ಕೇರ್ ಪ್ರೋಡಕ್ಟ್‌ಗಳು ಮೊದಲಾದ ಭಾರತೀಯ ಸಣ್ಣ ಮತ್ತು ಮಧ್ಯಮ ಬಿಸಿನೆಸ್‌ನ ಪ್ರೋಡಕ್ಟ್‌ಗಳು ಮಾರಾಟಕ್ಕೆ ಲಭ್ಯವಿರುತ್ತದೆ.  ಒಡಿಸ್ಸಾ ಹ್ಯಾಂಡ್‌ಲೂಮ್, ತಂತುಜಾ, ನವ್ಲಿಕ್, ಬ್ಲಾಕ್ಸ್ ಆಫ್ ಇಂಡಿಯಾ, ಕ್ರಾಫ್ಟ್ ಪ್ಲೇ ಹ್ಯಾಂಡಿಕ್ರಾಫ್ಟ್, ಅರಾಟಾ, ಖಾದಿ ಎಸ್ಸೆಂಶಿಯಲ್ಸ್, ಕಿಚ್‌ಆಫ್, ಹೆಲ್ತೆಕ್ಸ್, ಗ್ರೀನ್ ಗಾರ್ಡನಿಯಾ, ಮಂಗಳಮ್, ಸೂಪರ್ ಹೆಲ್ತೀ, ವಿನ್‌ಗ್ರೀನ್ಸ್ ಫಾರ್ಮ್ಸ್,  ಚಿನ್ಮಯ್ ಕಿಡ್ಸ್ ಹಾಗೂ ಇನ್ನೂ ಅನೇಕ ಬ್ರಾಂಡ್‌ಗಳು ಮೇಲೆ ತಿಳಿಸಿರುವ ಪ್ರೋಡಕ್ಟ್ ವೈವಿಧ್ಯತೆಗಳನ್ನು ಒದಗಿಸುತ್ತಿವೆ. ರಾಜಸ್ಥಾನ, ಒರಿಸ್ಸಾ, ಅಸ್ಸಾಮ್, ಪಶ್ಚಿಮ ಬಂಗಾಳ ಮತ್ತು ತೆಲಂಗಾಣಾ ಸೇರಿದಂತೆ ಅನೇಕ ರಾಜ್ಯಗಳಿಂದ ಬಂದಿರುವ ಕರಕುಶಲಗಾರರು ಮತ್ತು ನೇಕಾರರು ಅನೇಕ ಕರ ಕುಶಲ ಮತ್ತು ಕೈಮಗ್ಗ ಉತ್ಪನ್ನಗಳನ್ನು ಒದಗಿಸಲಿದ್ದಾರೆ. ಅಮೆಜಾನ್ ಬೃಹತ್ ರಿಪಬ್ಲಿಕ್ ಡೇ ಮಾರಾಟದಲ್ಲಿ ಗ್ರಾಹಕರು ಭಾರತದ ಸಣ್ಣ ಮತ್ತು ಮಧ್ಯಮ ಬಿಸಿನೆಸ್‌ನವರಿಂದ ಅತ್ಯಂತ ವ್ಯಾಪಕವಾದ ಪ್ರೋಡಕ್ಚ್ ವೈವಿಧ್ಯತೆಯನ್ನು ಪಡೆಯಲಿದ್ದಾರೆ.

ಹೊಸ ವರ್ಷದಲ್ಲಿ ಬಿಸಿನೆಸ್ ಗ್ರಾಹಕರಿಗಾಗಿ ಉಳಿತಾಯದ ಹೊಸ ಅವಕಾಶಗಳು 

ಆಫೀಸನ್ನು ಪುನಃ ಪ್ರಾರಂಭಿಸುವುದು, ವರ್ಕ್ ಫ್ರಮ್ ಹೋಮ್‌ನ ಅಗತ್ಯತೆಗಳನ್ನು ಖರೀದಿಸುವುದು, ಸುರಕ್ಷೆ ಮತ್ತು ಶುಚಿತ್ವದ ಸರಬರಾಜುಗಳು ಮತ್ತು ಇತರ ದೊಡ್ಡ ಮೊತ್ತದ ಆಫೀಸ್ ಖರೀದಿ ಎಂಬಂತೆ ನೀವು ದೊಡ್ಡ ಖರೀದಿ ಪ್ಲಾನ್ ಮಾಡುತ್ತಿದ್ದಲ್ಲಿ, ಬಿಸಿನೆಸ್ ಗ್ರಾಹಕರು ಅಮೆಜಾನ್ ಬಿಸಿನೆಸ್‌ನಲ್ಲಿ ಖರೀದಿ ಮಾಡುತ್ತಾ ದೊಡ್ಡ ಉಳಿತಾಯಗಳನ್ನು ಮಾಡಬಹುದಾಗಿದೆ. ಇಲ್ಲಿ ಅತಿ ಕಡಿಮೆ ಬೆಲೆಗಳು, ಬಲ್ಕ್ ಡಿಸ್ಕೌಂಟ್ ಮೇಲೆ ಹೆಚ್ಚುವರಿ ಶೇ. 15 ರಿಯಾಯಿತಿಗಳು ಜಿಎಸ್‌ಟಿ ಇನ್‌ವಾಯ್ಸ್ ಮೇಲೆ ಶೇ.28ರ ವರೆಗೆ ಉಳಿತಾಯಗಳು ಮತ್ತು ಎಸ್‌ಬಿಐ ಕಾರ್ಡ್‌ಗಳ ಮೇಲೆ ಶೇ.10 ತಕ್ಷಣ ಡಿಸ್ಕೌಂಟ್ ಇತ್ಯಾದಿ ಅನೇಕ ಪ್ರಯೋಜನಗಳನ್ನು ಪಡೆಯಬಹುದಾಗಿದೆ. ಇದಲ್ಲದೆ ಬಿಸಿನೆಸ್ ಗ್ರಾಹಕರು ಲೆನೆವೋ, ಕೇನನ್, ಗೋಡ್ರೇಜ್, ಬೋಟ್, ಬೋಷ್ ಮೊದಲಾದ ಟಾಪ್ ಬ್ರಾಂಡ್‌ಗಳ ಲ್ಯಾಪ್‌ಟಾಪ್‌ಗಳು, ಹೆಡ್‌ಫೋನ್‌ಗಳು, ನೆಟ್‌ವರ್ಕಿಂಗ್ ಸಾಧನಗಳು, ಪಿಸಿ ಭಾಗಗಳು, ಪರ್ಸನಲ್ ಸೇಫ್ಟೀ ಸಾಧನಗಳು, ಪವರ್ ಟೂಲ್ಸ್, ಫರ್ನೀಚರ್, ಸ್ಟೇಷನರಿ ಪ್ರೋಡಕ್ಟ್‌ಗಳು ಇತ್ಯಾದಿ ₹10 ಸಾವಿರ ಬೆಲೆಯ ಪ್ರೋಡಕ್ಟ್‌ಗಳ ಮೇಲೆ ವಿಶೇಷ ಬಿಸಿನೆಸ್ ಡಿಸ್ಕೌಂಟ್‌ಗಳನ್ನು ಪಡೆಯಬಹುದಾಗಿದೆ.
 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು