ಮಂಗಳವಾರ, ಮೇ 26, 2020
27 °C

ಕೋವಿಡ್: ಸಂಪರ್ಕ ಪತ್ತೆಗೆ ಗೂಗಲ್, ಆ್ಯಪಲ್ ನೆರವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ಕೊರೊನಾ ವೈರಾಣು ಸೋಂಕಿಗೆ ತುತ್ತಾದವರ ಜೊತೆ ಸಂಪರ್ಕವಾಗಿದೆಯೇ? ಅಥವಾ ನೀವು ಭೇಟಿ ನೀಡಿದ ಜಾಗದಲ್ಲಿ ಕೋವಿಡ್-19 ಕಾಯಿಲೆಗೆ ತುತ್ತಾದವರು ಇದ್ದಾರೆಯೇ ಎಂಬುದನ್ನು ಪತ್ತೆ ಮಾಡಿ ತಿಳಿಸುವ ಆರೋಗ್ಯ ಸೇತು ಆ್ಯಪ್ ಮಾದರಿಯಲ್ಲೇ, ಗೂಗಲ್ ಹಾಗೂ ಆ್ಯಪಲ್ ಕಂಪನಿಗಳು ತಮ್ಮ ಫೋನ್‌ಗಳಿಗೆ ವ್ಯವಸ್ಥೆಯೊಂದನ್ನು ಅಳವಡಿಸಲಿವೆ.

ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಗೂಗಲ್ ಪ್ಲೇ ಸರ್ವಿಸಸ್‌ಗೆ ಅಪ್‌ಡೇಟ್ ಮಾದರಿಯಲ್ಲಿ ಬ್ಲೂಟೂತ್ ಆಧಾರಿತ ಈ ವಿನೂತನ ತಂತ್ರಜ್ಞಾನವನ್ನು ಮುಂದಿನ ತಿಂಗಳು ಪರಿಚಯಿಸಲಾಗುತ್ತದೆ ಎಂದು ಗೂಗಲ್ ಹೇಳಿದೆ. ಆ್ಯಪಲ್ ಕಂಪನಿಯೂ ತನ್ನ ಸಾಧನಗಳಿಗೆ ಇದೇ ರೀತಿಯಲ್ಲಿ ಕೋವಿಡ್ ಸೋಂಕಿತರಿರುವ ಪ್ರದೇಶವನ್ನು ತಿಳಿಸುವ ವ್ಯವಸ್ಥೆಯನ್ನು ಶೀಘ್ರದಲ್ಲೇ ಅಳವಡಿಸಲಿದೆ.

ಕೊರೊನಾ ಸೋಂಕು ಪ್ರಸರಣ ತಡೆಯುವ ನಿಟ್ಟಿನಲ್ಲಿ ಗೂಗಲ್ ಹಾಗೂ ಆ್ಯಪಲ್ ಕಂಪನಿಗಳು ಕೈಜೋಡಿಸಿದ್ದು, ಸಂಪರ್ಕ ಪತ್ತೆ ತಂತ್ರವೊಂದನ್ನು ಅಭಿವೃದ್ಧಿಪಡಿಸಿವೆ. ಎರಡೂ ಕಂಪನಿಗಳು ಈ ತಂತ್ರಜ್ಞಾನದ ಎಪಿಐ (ಅಪ್ಲಿಕೇಶನ್ ಪ್ರೋಗ್ರಾಂ ಇಂಟರ್ಫೇಸ್) ಸಿದ್ಧಪಡಿಸುತ್ತಿವೆ. ಸಾರ್ವಜನಿಕ ಆರೋಗ್ಯ ಇಲಾಖೆಯು ಅಭಿವೃದ್ಧಿಪಡಿಸಿದ ಆ್ಯಪ್ ಜತೆ ಆಂಡ್ರಾಯ್ಡ್ ಮತ್ತು ಐಒಎಸ್ ಆಧಾರಿತ ಸಾಧನಗಳಲ್ಲಿ ಈ ಎಪಿಐ ಸಂಯೋಜಿಸಲು ಅನುಕೂಲವಾಗುತ್ತದೆ. ಯಾವುದೇ ವ್ಯಕ್ತಿಯು ಸೋಂಕಿತರ ಸಂಪರ್ಕದ ಸಮೀಪಕ್ಕೆ ಬಂದಿದ್ದಾರೆಯೇ ಎಂಬುದನ್ನು ಬ್ಲೂಟೂತ್ ಸಂಪರ್ಕದ ಮೂಲಕ ತಿಳಿಯುವುದು ಈ ಆ್ಯಪ್‌ಗಳ ಉದ್ದೇಶ. ಇದರಿಂದ ಸೋಂಕಿತರಿರುವ ಪ್ರದೇಶಕ್ಕೆ ಹೋಗುವುದನ್ನು ಕೂಡ ತಡೆಯಬಹುದಾಗಿದೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು