ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್–19 ಪಿಎಂ-ಕೇರ್ಸ್: ದೇಣಿಗೆ ನೀಡುವ ಮುನ್ನ ನಕಲಿ ಯುಪಿಐ ಐಡಿಗಳ ಬಗ್ಗೆ ಎಚ್ಚರ

ಸೈಬರ್ ಭದ್ರತಾ ಏಜೆನ್ಸಿಯಿಂದ ಮನವಿ
Last Updated 4 ಏಪ್ರಿಲ್ 2020, 12:34 IST
ಅಕ್ಷರ ಗಾತ್ರ

ನವದೆಹಲಿ: ಕೊರೊನಾ ವೈರಸ್ ಸೋಂಕಿನ (ಕೋವಿಡ್–19) ವಿರುದ್ಧದ ಹೋರಾಟಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಆರಂಭಿಸಿರುವ ಪಿಎಂ-ಕೇರ್ಸ್ ನಿಧಿಯ ಹೆಸರಿನಲ್ಲಿ ನಕಲಿ ಯುಪಿಐ ಐಡಿಗಳು ಸೃಷ್ಟಿಯಾಗಿರುವ ಬಗ್ಗೆ ಎಚ್ಚರಿಕೆ ವಹಿಸುವಂತೆ ದಾನಿಗಳಿಗೆ ಸೈಬರ್ ಭದ್ರತಾ ಏಜೆನ್ಸಿ ಸೂಚಿಸಿದೆ.

ಕೆಲವು ನಕಲಿ ಯುಪಿಐ ಐಡಿಗಳನ್ನು ಪತ್ತೆಹಚ್ಚಿರುವುದಾಗಿ ಸೈಬರ್ ಭದ್ರತಾ ಏಜೆನ್ಸಿ ‘ಇಂಡಿಯನ್ ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್ ಟೀಂ (ಸಿಇಆರ್‌ಟಿ–ಇನ್)’ ಶನಿವಾರ ಬಿಡುಗಡೆ ಮಾಡಿರುವ ಸಲಹಾಸೂಚಿಯಲ್ಲಿ ತಿಳಿಸಿದೆ.

ಸಿಇಆರ್‌ಟಿ–ಇನ್ ಪತ್ತೆಹಚ್ಚಿರುವ ನಕಲಿ ಯುಪಿಐ ಐಡಿಗಳು ಹೀಗಿವೆ:

pmcares@pnb

pmcares@hdfcbank

pmcare@yesbank

pmcare@ybl

pmcare@upi

pmcare@sbi

pmcares@icici

‘ಪಿಎಂ-ಕೇರ್ಸ್‌ನ ಅಧಿಕೃತ ಯುಪಿಐ ಐಡಿ pmcares@sbi ಎಂದೂ ನೋಂದಾಯಿತ ಖಾತೆಯ ಹೆಸರು PM CARES ಎಂದೂ ಸಿಇಆರ್‌ಟಿ–ಇನ್ ತಿಳಿಸಿದೆ. ಜನರು ಪಿಎಂ-ಕೇರ್ಸ್‌ಗೆ ಪಾವತಿ ಮಾಡುವ ಮುನ್ನ ಯುಪಿಐ ಐಡಿ ಮತ್ತು ನೋಂದಾಯಿತ ಹೆಸರನ್ನು ವೆರಿಫೈ ಮಾಡಿಕೊಳ್ಳುವಂತೆಯೂ ಅದು ಮನವಿ ಮಾಡಿದೆ.

ಪಿಎಂ-ಕೇರ್ಸ್‌ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ದೇಣಿಗೆ ನೀಡುವವರು ಮತ್ತು ಸಂಘಟನೆಗಳು pmindia.gov.in ವೆಬ್‌ಸೈಟ್‌ಗೆ ಭೇಟಿ ನೀಡುವಂತೆ ಸಲಹೆ ನೀಡಲಾಗಿದೆ.

ಮಾರ್ಚ್ 28ರಂದು ಮೋದಿಯವರು ಪಿಎಂ-ಕೇರ್ಸ್‌ ನಿಧಿ ಆರಂಭಿಸಿದ್ದು, ಈಗಾಗಲೇ ಕೋಟ್ಯಂತರ ರೂಪಾಯಿ ದೇಣಿಗೆ ಸಂಗ್ರಹವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT