ಗುರುವಾರ , ಏಪ್ರಿಲ್ 9, 2020
19 °C
ದೆಹಲಿ, ಮುಂಬೈಯನ್ನು ಹಿಂದಿಕ್ಕಿದ ನಗರ

ಡಿಜಿಟಲ್ ವಹಿವಾಟು: ಮುಂಚೂಣಿಯಲ್ಲಿ ಬೆಂಗಳೂರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ನಗದುರಹಿತ (ಡಿಜಿಟಲ್‌) ವಹಿವಾಟಿನಲ್ಲಿ ಬೆಂಗಳೂರು, ದೇಶದ ಪ್ರಮುಖ ಮಹಾನಗರಗಳ ಪೈಕಿ ಮುಂಚೂಣಿಯಲ್ಲಿ ಇದೆ.

ಸಾಫ್ಟ್‌ವೇರ್‌, ಸ್ಟಾರ್ಟ್‌ಅಪ್‌ ರಾಜ ಧಾನಿ ಖ್ಯಾತಿಯ ನಗರವು ಹಣಕಾಸು ತಂತ್ರಜ್ಞಾನವು ಹೆಚ್ಚಾಗಿ ಬಳಕೆಯಾಗುವ ಗ್ರಾಹಕರ ಆರ್ಥಿಕತೆಯಲ್ಲಿಯೂ ತನ್ನ ಮುನ್ನಡೆ ಕಾಯ್ದು ಕೊಂಡಿದೆ. ಆನ್‌ಲೈನ್‌ ಖರೀದಿಯಲ್ಲಿ ಮುಂಬೈ ಮತ್ತು ದೆಹಲಿ ನಗರಗಳನ್ನು ಹಿಂದಿಕ್ಕಿದೆ.

ರಾಜ್ಯ ಸರ್ಕಾರ ಇತ್ತೀಚೆಗೆ ಬಿಡುಗಡೆ ಮಾಡಿರುವ ಆವಿಷ್ಕಾರ ವರದಿಯಲ್ಲಿ ಈ ವಿವರಗಳಿವೆ. ಸಮೀಕ್ಷೆಯಲ್ಲಿ ಭಾಗವ ಹಿಸಿದ್ದ ಬೆಂಗಳೂರಿನ ಗ್ರಾಹಕರ ಪೈಕಿ ಶೇ 69ರಷ್ಟು ಜನರು, ದಿನಬಳಕೆಯ ಸರಕುಗಳನ್ನು ತಾವು ಆನ್‌ಲೈನ್‌ನಲ್ಲಿಯೇ ಖರೀದಿಸುವುದಾಗಿ ತಿಳಿಸಿದ್ದಾರೆ.

ಮುಂಬೈನ ಶೇ 65 ಮತ್ತು ದೆಹಲಿಯ ಶೇ 61ರಷ್ಟು ಗ್ರಾಹಕರು ಆನ್‌ಲೈನ್‌ ನೆಚ್ಚಿಕೊಂಡಿದ್ದಾರೆ.

2035ರವರೆಗೆ ಬೆಂಗಳೂರಿನ ಜಿಡಿಪಿ ಪ್ರಗತಿಯು ಶೇ 8.5ರಷ್ಟು ಇರಲಿದೆ. ಇದು ವಿಶ್ವದ ನಗರಗಳ ಪ್ರಗತಿ ದರಕ್ಕೆ ಹೋಲಿಸಿದರೆ ಗರಿಷ್ಠ ಮಟ್ಟದಲ್ಲಿ ಇದೆ ಎಂದು ವರದಿಯಲ್ಲಿ ಅಂದಾಜಿಸಲಾಗಿದೆ. 

ರೇಜರ್‌ಪೇ ವರದಿ: 2018ಕ್ಕೆ ಹೋಲಿಸಿದರೆ 2019ರಲ್ಲಿ ಡಿಜಿಟಲ್‌ ವಹಿವಾಟು ಶೇ 338ರಷ್ಟು ಏರಿಕೆ ದಾಖಲಿಸಿದ್ದು, ಬೆಂಗಳೂರು, ದೆಹಲಿ ಮತ್ತು ಹೈದರಾಬಾದ್‌ ನಗರಗಳು ಮೊದಲ ಮೂರು ಸ್ಥಾನಗಳಲ್ಲಿ ಇವೆ.

ವ್ಯಕ್ತಿಯಿಂದ ವ್ಯಕ್ತಿ ಮಧ್ಯೆ ದೇಶದಲ್ಲಿ ನಡೆದ ಒಟ್ಟಾರೆ ಡಿಜಿಟಲ್‌ ವಹಿವಾಟಿನಲ್ಲಿ ಬೆಂಗಳೂರು (ಶೇ 23.31) ಮೊದಲ ಸ್ಥಾನದಲ್ಲಿ ಇದೆ. ದೇಶದಲ್ಲಿ ಹಣಕಾಸು ತಂತ್ರಜ್ಞಾನ ಹೆಚ್ಚಳಕ್ಕೆ ಸಂಬಂಧಿಸಿದಂತೆ ರೇಜರ್‌ಪೇ ಕಂಪನಿ ಸಿದ್ಧಪಡಿಸಿದ ವರದಿಯಲ್ಲಿ ಈ ಮಾಹಿತಿ ಇದೆ. ಡಿಜಿಟಲ್‌ ಪಾವತಿ ಅಳವಡಿಸಿಕೊಂಡ ರಾಜ್ಯಗಳ ಸಾಲಿನಲ್ಲಿಯೂ ಕರ್ನಾಟಕ (ಶೇ 26.64) ಮುಂಚೂಣಿಯಲ್ಲಿ ಇದೆ.

ಡೆಬಿಟ್‌ / ಕ್ರೆಡಿಟ್‌ ಕಾರ್ಡ್‌, ಇಂಟರ್‌ನೆಟ್‌ ಬ್ಯಾಂಕಿಂಗ್‌ ವಹಿವಾಟು ಕಡಿಮೆಯಾಗಿದ್ದರೂ ಯುಪಿಐ ಶೇ 17 ರಿಂದ ಶೇ 38ರಷ್ಟಕ್ಕೆ ಏರಿಕೆ ದಾಖಲಿಸಿದೆ.

‘ಯುಪಿಐ’ ಪೈಕಿ ಗೂಗಲ್‌ ಪೇ, ಫೋನ್‌ಪೇ, ಪೇಟಿಎಂ ಮತ್ತು ಭೀಮ್‌ ಆ್ಯಪ್‌ಗಳನ್ನು ಹೆಚ್ಚಾಗಿ ಬಳಸಲಾಗುತ್ತಿದೆ. ಮೊಬೈಲ್‌ ವಾಲೆಟ್‌ ಪೈಕಿ ಅಮೆಜಾನ್‌ ಪೇ ಮತ್ತು ಓಲಾ ಮನಿ ಕೂಡ ಜನಪ್ರಿಯವಾಗಿವೆ.

ಡಿಜಿಟಲ್‌ ಪಾವತಿಯಲ್ಲಿ ಆಹಾರ ಮತ್ತು ಪಾನೀಯ, ಹಣಕಾಸು ಸೇವೆಗಳು ಮತ್ತು ಸಾರಿಗೆ ವಲಯಗಳು ಮೊದಲ ಸ್ಥಾನದಲ್ಲಿ ಇವೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು