ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೀನಾ ಮೂಲದ ಎಂಟು ಆ್ಯಪ್‌ಗಳಿಗೆ ನಿಷೇಧ ಹೇರಿದ ಡೊನಾಲ್ಡ್ ಟ್ರಂಪ್

Last Updated 6 ಜನವರಿ 2021, 6:11 IST
ಅಕ್ಷರ ಗಾತ್ರ

ವಾಷಿಂಗ್ಟನ್: ಅಲಿಪೇ ಮೊಬೈಲ್ ಪೇಮೆಂಟ್ ಆ್ಯಪ್ ಸೇರಿದಂತೆ ಚೀನಾ ಮೂಲದ ಎಂಟು ಪ್ರಮುಖ ಸಾಫ್ಟ್‌ವೇರ್ ಅಪ್ಲಿಕೇಷನ್‌ಗಳ ವಹಿವಾಟುಗಳನ್ನು ನಿಷೇಧಿಸುವ ಎಕ್ಸಿಕ್ಯೂಟಿವ್ ಆದೇಶಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಹಿ ಹಾಕಿದ್ದಾರೆ.

ಚೀನಾ ಜೊತೆಗಿನ ಬಿಕ್ಕಟ್ಟು ಮತ್ತಷ್ಟು ತೀವ್ರಗೊಂಡಿರುವುದಂತೆ ತಮ್ಮ ಅಧಿಕಾರವಧಿಯ ಕೊನೆಯ ಹಂತದಲ್ಲಿ ಡೊನಾಲ್ಡ್ ಟ್ರಂಪ್, ಎಂಟು ಆ್ಯಪ್‌ಗಳನ್ನು ನಿಷೇಧ ಮಾಡುವ ಮೂಲಕ ಮತ್ತಷ್ಟು ಕಠಿಣ ಕ್ರಮ ಕೈಗೊಂಡಿರುವುದು ಹೆಚ್ಚಿನ ಕುತೂಹಲ ಕೆರಳಿಸಿದೆ.

ಚೀನಾ ಮೂಲದ ಸಾಫ್ಟ್‌ವೇರ್ ಅಪ್ಲಿಕೇಷನ್‌ಗಳಿಂದ ರಾಷ್ಟ್ರೀಯ ಭದ್ರತೆಗೆ ಉಂಟಾಗುವ ಬೆದರಿಕೆಯನ್ನು ನಿಗ್ರಹಿಸುವ ಗುರಿಯನ್ನು ಅಮೆರಿಕ ಹೊಂದಿದೆ ಎಂದು ಟ್ರಂಪ್ ಆಡಳಿತದ ಹಿರಿಯ ಅಧಿಕಾರಿಯೊಬ್ಬರು ರಾಯಿಟರ್ಸ್ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ಬೃಹತ್ ಯೂಸರ್ ಬೇಸ್ ಹೊಂದಿರುವ ಈ ಅಪ್ಲಿಕೇಷನ್‌ಗಳಿಂದ ಸೂಕ್ಷ್ಮ ಡೇಟಾಗಳನ್ನು ಸೋರಿಕೆ ಮಾಡುವ ಭೀತಿ ಎದುರಾಗಿದೆ. ರಾಷ್ಟ್ರೀಯ ಭದ್ರತೆಯನ್ನು ಕಾಪಾಡಲು ಚೀನಾ ಮೂಲದ ಸಾಫ್ಟ್‌ವೇರ್ ಅಪ್ಲಿಕೇಷನ್‌ ಡೆವಲಪರ್‌ಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಆದೇಶವು ಸೂಚಿಸುತ್ತದೆ.

ಅಲಿಬಾಬಾ ಗ್ರೂಪ್ ಅಂಗಸಂಸ್ಥೆ ಯುಸಿವೆಬ್‌ನ ಕ್ಯಾಮ್‌ಸ್ಕ್ಯಾನರ್, ಶೇರ್‌ಇಟ್, ಟೆನ್ಸೆಂಟ್ ಕ್ಯೂಕ್ಯೂ, ವಿಮೇಟ್ ಮತ್ತು ಬೀಜಿಂಗ್ ಕಿಂಗ್‌ಸಾಫ್ಟ್ ಆಫೀಸ್‌ನ ಡಬ್ಲ್ಯೂಪಿಎಸ್ ಆಫೀಸ್ ಸಾಫ್ಟ್‌ವೇರ್‌ಗಳು ನಿಷೇಧಿತ ಸಾಫ್ಟ್‌ವೇರ್ ಅಪ್ಲಿಕೇಷನ್ ಪಟ್ಟಿಯಲ್ಲಿ ಸೇರಿವೆ.

ವೈಯಕ್ತಿಕ ಎಲೆಕ್ಟ್ರಾನಿಕ್ ಪರಿಕರಗಳಾದ ಸ್ಮಾರ್ಟ್‌ಫೋನ್‌ಗಳು, ಟ್ಯಾಬ್ಲೆಟ್‌ಗಳು ಮತ್ತು ಕಂಪ್ಯೂಟರ್‌ಗಳನ್ನು ಸಂಪರ್ಕಿಸುವ ಮೂಲಕ ಚೀನಾ ಮೂಲದ ಸಾಫ್ಟ್‌ವೇರ್ ಅಪ್ಲಿಕೇಷನ್‌ಗಳು ಬಳಕೆದಾರರಿಂದ ವೈಯಕ್ತಿಕ ಡೇಟಾಗಳನ್ನು ಸೋರಿಕೆ ಮಾಡಬಹುದು. ಫೆಡರಲ್ ಉದ್ಯೋಗಿಗಳು ಹಾಗೂ ಗುತ್ತಿಗಾಗರರ ಖಾಸಗಿ ಮಾಹಿತಿಯು ಸೋರಿಕೆಯಾಗಬಹುದು ಎಂದು ತಿಳಿಸಿದೆ.

ಇನ್ನೊಂದೆಡೆ ಅಮೆರಿಕ ಅಧ್ಯಕೀಯ ಚುನಾವಣೆಯಲ್ಲಿ ಗೆಲುವು ದಾಖಲಿಸಿರುವ ನಿಯೋಜಿತ ಅಧ್ಯಕ್ಷ ಜೋ ಬಿಡೆನ್, ಸದ್ಯಕ್ಕೆ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT